ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ರತ್ನಪ್ರಭ ನೇಮಕ..?

By suvarna Web DeskFirst Published Nov 28, 2017, 9:15 AM IST
Highlights

ಮುಖ್ಯ ಕಾರ್ಯದರ್ಶಿ ಹುದ್ದೆ ಪ್ರಮುಖವಾಗಿ ಹಿರಿಯ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು ಸದ್ಯ  ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.  ಬಹುತೇಕ ರತ್ನಪ್ರಭ ನೇಮಕವಾಗಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ.

ಬೆಂಗಳೂರು(ನ.28): ಹಾಲಿ ಮುಖ್ಯಕಾರ್ಯದರ್ಶಿ ಸುಭಾಷ ಚಂದ್ರ ಕುಂಟಿ ಅವರ ಅಧಿಕಾರವಧಿ ನವೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಮುಖ್ಯ ಕಾರ್ಯದರ್ಶಿ ಹುದ್ದೆ ಪ್ರಮುಖವಾಗಿ ಹಿರಿಯ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು ಸದ್ಯ  ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.  ಬಹುತೇಕ ರತ್ನಪ್ರಭ ನೇಮಕವಾಗಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಈ ಬಗ್ಗೆ ಇಂದು ಸಂಜೆಯ ಒಳಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಯಾರೆಂದು ಅಧಿಕೃತವಾದ ಆದೇಶ ಹೊರಬೀಳಲಿದೆ.

ಕೆ. ರತ್ನಪ್ರಭಾ ಅವರು ನೇಮಕಗೊಂಡರೆ ದಲಿತ ಸಮುದಾಯಕ್ಕೆ ಸೇರಿದ ಓರ್ವ ಮಹಿಳಾ ಅಧಿಕಾರಿ ರಾಜ್ಯ ಸರ್ಕಾರದ  ಆಡಳಿತ ವಿಭಾಗದ ಮುಖ್ಯಸ್ಥ ಹುದ್ದೆಯಾದ ಮುಖ್ಯ ಕಾರ್ಯದರ್ಶಿ  ಹುದ್ದೆಗೆ ನೇಮಕವಾದಂತಾಗಲಿದೆ. ಈಗಾಗಲೇ ಸರ್ಕಾರ ಕೆ. ರತ್ನಪ್ರಭಾ ಅವರ ಹೆಸರನ್ನೇ ಅಂತಿಮ ಮಾಡಿದೆ ಎಂದು ತಿಳಿದುಬಂದಿದೆ.  ಈ ನೇಮಕದಿಂದ ಸರ್ಕಾರದ  ಎರಡು  ಪ್ರಮುಖ ಹುದ್ದೆಗಳಿಗೆ ಮಹಿಳಾ ಮಣಿಗಳು ನೇಮಕವಾದಂತಾಗಲಿದೆ. ಪೊಲೀಸ್ ಇಲಾಖೆ ಮಹಾ ನಿರ್ದೇಶಕಿಯಾಗಿ ಈಗಾಗಲೇ ನೀಲಮಣಿ ಎನ್. ರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ರತ್ನಪ್ರಭಾ  ಸಿಎಸ್ ಆಗಿ ನೇಮಕವಾಗಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಬಾರಿಯೇ ರತ್ನಪ್ರಭಾ ಅವರಿಗೆ ಸಿಎಸ್ ಹುದ್ದೆ ಸ್ವಲ್ಪದರಲ್ಲಿಯೇ  ತಪ್ಪಿ ಹೋಗಿತ್ತು.  ಇದಲ್ಲದೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನೀಲಮಣಿ ಎನ್ ರಾಜು ಅವರ ನೇಮಕದ ದಿನಗಳಲ್ಲಿಯೇ ಕನ್ನಡಪ್ರಭ ರತ್ನಪ್ರಭಾ ಸಿಎಸ್ ಹುದ್ದೆಗೆ ನೇಮಕವಾಗಬಹುದೆಂಬ ಸುದ್ದಿಯನ್ನು ಪ್ರಕಟಿಸಿತ್ತು.

click me!