ರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತೆ ಗೊತ್ತಾ? ಇತರ ಚುನಾವಣೆಯಂತೆ ಇರುವುದಿಲ್ಲ ಈ ಪ್ರಕ್ರಿಯೆ!

Published : Jul 17, 2017, 08:43 AM ISTUpdated : Apr 11, 2018, 12:56 PM IST
ರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತೆ ಗೊತ್ತಾ? ಇತರ ಚುನಾವಣೆಯಂತೆ ಇರುವುದಿಲ್ಲ ಈ ಪ್ರಕ್ರಿಯೆ!

ಸಾರಾಂಶ

ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಬೇರೆಲ್ಲಾ ಚುನಾವಣೆ ಟೈಪ್ ಇರಲ್ಲ. ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಹೇಗಿರುತ್ತೆ? ಯಾರೆಲ್ಲರೂ ವೋಟ್ ಮಾಡುತ್ತಾರೆ? ಎನ್​​ಡಿಎ ಮತ್ತು ಯುಪಿಎ ಬಲಾಬಲ ಎಷ್ಟೆಷ್ಟು ಎನ್ನುವುದರ ಸಂಪೂರ್ಣ ವಿವರ ವರದಿ ಇಲ್ಲಿದೆ.

ನವದೆಹಲಿ(ಜು.17): ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಬೇರೆಲ್ಲಾ ಚುನಾವಣೆ ಟೈಪ್ ಇರಲ್ಲ. ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಹೇಗಿರುತ್ತೆ? ಯಾರೆಲ್ಲರೂ ವೋಟ್ ಮಾಡುತ್ತಾರೆ? ಎನ್​​ಡಿಎ ಮತ್ತು ಯುಪಿಎ ಬಲಾಬಲ ಎಷ್ಟೆಷ್ಟು ಎನ್ನುವುದರ ಸಂಪೂರ್ಣ ವಿವರ ವರದಿ ಇಲ್ಲಿದೆ.

ರಾಷ್ಟ್ರಪತಿ ಆಯ್ಕೆ ಹೇಗೆ?  

ಭಾರತದ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು ಮತ್ತು ಎಲ್ಲಾ ರಾಜ್ಯಗಳ 4120 ಶಾಸಕರು ಮತದಾರರಾಗಿರುತ್ತಾರೆ. ಅಂದ್ರೆ ಒಟ್ಟು ವೋಟರ್ಸ್​​​ ಸಂಖ್ಯೆ 4,896. ಲೋಸಭೆ ಮತ್ತು ರಾಜ್ಯಸಭೆ ಸದಸ್ಯರೊಬ್ಬರ ಮತದ ಮೌಲ್ಯ 708. ರಾಜ್ಯದ ಜನಸಂಖ್ಯೆಯನ್ನ ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಬೇಕು. ಬಳಿಕ ಬರೋ ಶೇಷವನ್ನ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ. ಆದರೆ, ವಿಧಾನಪರಿಷತ್ ಸದಸ್ಯರು, ನಾಮನಿರ್ದೇಶಿತ ಸಂಸದ ಮತ್ತು ಶಾಸಕರಿಗೆ ಮತದಾನದ ಹಕ್ಕು ಇರುವುದಿಲ್ಲ. ರಾಷ್ಟ್ರಪತಿ ಚುನಾವಣೆ ಸಂವಿಧಾನದ ವಿಧಿ 54ರ ಪ್ರಕಾರ ಚುನಾವಣೆ ನಡೆಯುತ್ತದೆ.

ಬಲಾಬಲ ಹೇಗಿದೆ?

ರಾಷ್ಟ್ರಪತಿ ಚುನಾವಣೆಯಮತಗಳ ಒಟ್ಟು ಮೌಲ್ಯ 10 ಲಕ್ಷದ 98 ಸಾವಿರ ಎಂಟುನೂರ ಎಂಬತ್ತೆರಡು. 14ನೇ ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರೋ ಮತಗಳ ಸಂಖ್ಯೆ ಅಂತದರೆ 5 ಲಕ್ಷದ 49 ಸಾವಿರದ ನಾನೂರ ನಲವತ್ತೆರಡು. ಈ ಪೈಕಿ NDA ಒಕ್ಕೂಟದ ಮತ ಮೌಲ್ಯ 5 ಲಕ್ಷದ 27 ಸಾವಿರ 371. ಅಂದರೆ ಪ್ರತಿಶತ 48.10%. ಇದರಲ್ಲಿ 2 ಲಕ್ಷದ 37 ಸಾವಿರ 888 ಮತ ಲೋಕಸಭೆಯಿಂದ ಬಂದ್ರೆ 49 ಸಾವಿರದ 560 ಮತಗಳು ರಾಜ್ಯಸಭೆಯಿಂದ ಬರುತ್ತೆ. ಅದೇ ರೀತಿ 2 ಲಕ್ಷದ 39 ಸಾವಿರದ 923 ಮತಗಳು ವಿಧಾನಸಭೆಯಿಂದ ಲಭಿಸಲಿದೆ.

NDA ಕತೆ ಇಷ್ಟಾದರೆ UPA ಮತಮೌಲ್ಯ?

ಯುಪಿಎ ಒಕ್ಕೂಟದ ಮತಮೌಲ್ಯ 1 ಲಕ್ಷದ 73 ಸಾವಿರದ 849. ಅಂದರೆ 15.90 ಪ್ರತಿಶತ. ಲೋಕಸಭೆಯಲ್ಲಿ 34 ಸಾವಿರದ 692 ಮತ, ರಾಜ್ಯಸಭೆಯಿಂದ 46 ಸಾವಿರದ 20 ಹಾಗೂ ವಿಧಾನಸಭೆಯಲ್ಲಿ 93 ಸಾವಿರದ 137 ಮತಗಳು.

NDA ಮತ್ತು ಹೊರತುಪಡಿಸಿ ಇತರೆ ಪಕ್ಷಗಳ ಮತ ಮೌಲ್ಯವೂ ಜಾಸ್ತಿ. ಸರಿ ಸುಮಾರು ಪ್ರತಿಶತ 30ರಷ್ಟಿದೆ.. ಇವತ್ತಿನ ನಿರ್ಧಾರ ರಾಮನಾಥ್ ಕೋವಿಂದ್ ಹಾಗೂ ಮೀರಕುಮಾರ್​​ ಕಡೆಗೋ ತಮ್ಮ ಒಲವು ಅನ್ನೋದನ್ನ ನಿರ್ಧರಿಸಲಿದೆ.. ಒಟ್ನಲ್ಲಿ ಸಂಜೆ 5 ಗಂಟೆಯೊಳಗೆ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಆಗಲಿದ್ದು  ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ 14ನೇ ರಾಷ್ಟ್ರಪತಿ ಯಾರು ಎನ್ನುವುದು ಸ್ಪಷ್ಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ