ರಶ್ಮಿಕಾ ಮಂದಣ್ಣಗೆ IT ಶಾಕ್, BCCI ಒಪ್ಪಂದಿಂದ ಧೋನಿ ಔಟ್; ಜ.16ರ ಟಾಪ್ 10 ಸುದ್ದಿ!

By Suvarna News  |  First Published Jan 16, 2020, 4:45 PM IST

ಬಹುಭಾಷ  ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಶ್ಮಿಕಾ ಕೋಟಿ ಕೋಟಿ ಆಸ್ತಿ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇತ್ತ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಎಂ.ಎಸ್.ಧೋನಿಯನ್ನು ಹೊರಗಿಡಲಾಗಿದೆ. ಈ ಮೂಲಕ ಧೋನಿ ನಿವೃತ್ತಿಗೆ ಬಿಸಿಸಿಐ ಪರೋಕ್ಷ ಸೂಚನೆ ನೀಡಿದೆ. ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ, ಬಾಂಗ್ಲಾ ಅಕ್ರಮ ನುಸುಳುಕೋರರ ರಹಸ್ಯ ಬಯಲು ಸೇರಿದಂತೆ ಜನವರಿ 16ರ ಟಾಪ್ 10 ಸುದ್ದಿ ಇಲ್ಲಿವೆ.


ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಇಡಿ ದಾಳಿ!...

Tap to resize

Latest Videos

undefined

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ, ಇಡಿ ದಾಳಿ ನಡೆದಿದೆ.  ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. 10 ಕ್ಕೂ ಹೆಚ್ಚು IT ಅಧಿಕಾರಿಗಳು ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ. 


ರಶ್ಮಿಕಾ ಮಂದಣ್ಣ ವಯಸ್ಸಿನ್ನೂ 23, ಸಂಪಾದನೆ ಮಾತ್ರ ಕೋಟಿ ಕೋಟಿ!

ಕಿರಿಕ್ ಪಾರ್ಟಿ ಸಿನಿಮಾದಿಂದ ಸ್ಯಾಂಡಲ್‌ವುಡ್‌ನಲ್ಲಿ ಪ್ರಖ್ಯಾತಿ ಪಡೆದ ರಶ್ಮಿಕಾ ಮಂದಣ್ಣರವರ ವಿರಾಜಪೇಟೆ ಮನೆ ಮೇಲೆ ಐಟಿ ಹಾಗೂ ಇಡಿ ದಾಳಿಯಾಗಿದೆ. ಈಗಿನ್ನೂ 23 ವರ್ಷದ ರಶ್ಮಿಕಾ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ರಶ್ಮಿಕಾ ಆಸ್ತಿ ವಿವರ ಬಹಿರಂಗವಾಗಿದೆ.


2 ದಿನ ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ!, ಯಾವಾಗ? ಇಲ್ಲಿದೆ ಮಾಹಿತಿ

 ಕೇಂದ್ರ ಸರ್ಕಾರದ ಬಹು ನಿರೀಕ್ಷಿತ 2020-21ನೇ ಸಾಲಿನ ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ಮಂಡನೆಯಾಗುವ ಜ.31 ಮತ್ತು ಫೆ.1ರ ದಿನಗಳಂದೇ ಬ್ಯಾಂಕ್‌ ನೌಕರರ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಕೇರಳ ಕ್ರೈಸ್ತರೂ ಲವ್‌ ಜಿಹಾದ್‌ ಬಲೆಗೆ!: ಯೋಜಿತವಾಗಿ ಮತಾಂತರ!

ಯುವತಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ನಂಬಿಸಿ ವಿವಾಹವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ, ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಹಿಂದು ಸಂಘಟನೆಗಳ ನಿರಂತರ ಆರೋಪಕ್ಕೆ ಇದೀಗ ಮತ್ತಷ್ಟುಬಲ ಬಂದಿದೆ. ಲವ್‌ ಜಿಹಾದ್‌ ಕಲ್ಪನೆಯಲ್ಲ, ವಾಸ್ತವ. ಕ್ರೈಸ್ತ ಯುವತಿಯರನ್ನೂ ಪ್ರೀತಿ ಹೆಸರಲ್ಲಿ ನಂಬಿಸಿ ಲವ್‌ ಜಿಹಾದ್‌ ಮಾಡಲಾಗುತ್ತಿದೆ ಎಂದು ಕೇರಳದ ಪ್ರಭಾವಿ ಕ್ಯಾಥೋಲಿಕ್‌ ಚಚ್‌ರ್‍ವೊಂದು ಆರೋಪಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯ ಯಾರು?

 ‘ತುಕ್ಡೇ ತುಕ್ಡೇ ಗ್ಯಾಂಗ್‌ನ ಮೂಲ ಸ್ಥಾನ ಯಾವುದು? ಇದರ ಸದಸ್ಯರು ಯಾರು? ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ ಏಕೆ ಇದನ್ನು ನಿಷೇಧಿಸಿಲ್ಲ? ಎಂಬ ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಶ್ನೆಗಳು ಕೇಂದ್ರದ ಗೃಹ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿವೆ.


ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

 2019-20ನೇ ಸಾಲಿನ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ 27 ಆಟಗಾರರನ್ನು ಸ್ಥಾನ ಪಡೆದಿದ್ದು, ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಸಿಸಿಐ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ.

ಶಿವಣ್ಣನ ಸೆಟ್‌ನಲ್ಲಿ ಬೆಂಕಿ; ಪ್ರಾಣಾಪಾಯದಿಂದ 'ಭಜರಂಗಿ' ಪಾರು!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬಹು ನಿರೀಕ್ಷಿತ ಚಿತ್ರ 'ಭಜರಂಗಿ-2' ಸೆಟ್‌ನಲ್ಲಿ ಅಗ್ನಿ ಅವಘಡವಾಗಿದೆ. ಜಯಣ್ಣ ಹಾಗೂ ಭೋಗೆಂದ್ರ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ದುಬಾರಿ ಸೆಟ್ಟನ್ನು ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟೋಡಿಯೋದಲ್ಲಿ ಹಾಕಲಾಗಿತ್ತು. ಸೆಟ್‌ನಲ್ಲಿ ಅಳವಡಿಸಿದ ಲೈಟ್‌ ಶಾಟ್‌ ಸರ್ಕ್ಯೂಟ್‌ ಆಗಿ ಈ ಅವಘಡ ಸಂಭವಿಸಿದೆ. 


ಟಾಟಾ ನೆಕ್ಸಾನ್ ಬಳಿಕ ಅಲ್ಟ್ರೋಝ್ ದೇಶದ ಅತ್ಯಂತ ಸುರಕ್ಷತೆ ಕಾರು; ಸೇಫ್ಟಿ ರಿಸಲ್ಟ್ ಬಹಿರಂಗ!

ಭಾರತದಲ್ಲಿ ಇದೀಗ ಕಾರಿನ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಹಿಂದೆ ಕಡಿಮೆ ಬೆಲೆ, ಮೈಲೇಜ್‌ಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಹೀಗಾಗಿ ಕಾರು ಕಂಪನಿಗಳು ಸುರಕ್ಷತೆಯ ಕಾರು ಬಿಡುಗಡೆ ಮಾಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಆದರೆ ಕಡಿಮೆ ಬೆಲೆಗೆ ಇದು ಸಾಧ್ಯವಾಗುತ್ತಿಲ್ಲ. ಆದರೆ ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ ದೇಶದ ಅತ್ಯಂತ ಸುರಕ್ಷತೆಯ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ನೆಕ್ಸಾನ್ ಬಳಿಕ ಇದೀಗ ಬಿಡುಗಡೆಯಾಗಲಿಪುವ ಅಲ್ಟ್ರೋಝ್ ಕಾರಿನ ಸುರಕ್ಷತೆ ಬಹಿರಂಗವಾಗಿದೆ. ಈ ಕಾರು ಕೂಡ ದೇಶದ ಅತ್ಯಂತ ಸುರಕ್ಷತೆ ಕಾರು ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ. 

ಬಯಲಾಯ್ತು ಬಾಂಗ್ಲಾ ಅಕ್ರಮ ನುಸುಳುಕೋರರ ಭಯಾನಕ ರಹಸ್ಯ!...

ಸೂಪರ್ ಎಕ್ಸ್‌ಕ್ಲೂಸಿವ್‌ ಸುದ್ದಿ ಕೊಡುವುದರಲ್ಲಿ ಸುವರ್ಣ ನ್ಯೂಸ್ ಸದಾ ಮುಂದು. ದೇಶದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಅತೀ ಹೆಚ್ಚು ಚರ್ಚೆಯಲ್ಲಿವೆ. ಇವುಗಳ ಪರ -ವಿರೋಧ ಚರ್ಚೆ ಬಿಸಿಯಾಗಿರುವಾಗ ಅಕ್ರಮ ಬಾಂಗ್ಲಾ ನುಸುಳುಕೋರರ ಕಥೆಯೇನು ಎಂದು ತಿಳಿದುಕೊಳ್ಳಲು ಸುವರ್ಣ ನ್ಯೂಸ್ ಕ್ರೈಂ ಟೀಂ ಒಂದು ಸ್ಟಿಂಗ್ ಆಪರೇಶನ್ ಮಾಡಿದೆ. ಇದರಲ್ಲಿ ಆಘಾತಕಾರಿ ವಿಚಾರಗಳು ಹೊರ ಬಿದ್ದಿದೆ. 

ಶಾಸಕ ಹರೀಶ್‌ಗೆ ಮಂತ್ರಿ ಯೋಗ..! ಜ್ಯೋತಿಷಿ ಭವಿಷ್ಯ ಜಾಲತಾಣಗಳಲ್ಲಿ ವೈರಲ್‌...

ಯುವ ಜ್ಯೋತಿಷಿ ಶ್ರೀನಾಥ ಜೋಶಿ ಅವರು ಬಹಿರಂಗವಾಗಿ ಶಾಸಕರ ಸಮ್ಮುಖದಲ್ಲೇ ಭವಿಷ್ಯ ನುಡಿದಿದ್ದಾರೆ. ಶಾಸಕ ಹರೀಶ್‌ ಪೂಂಜ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೇ? ಹೌದು ಎನ್ನುತ್ತಾರೆ ಈ ಯುವ ಜ್ಯೋತಿಷಿ.
 

click me!