ಜನಪ್ರತಿನಿಧಿಗಳು, ಶ್ರೀಮಂತರನ್ನು ಅಪಹರಿಸಲು ಸ್ಕೆಚ್ ಹಾಕಿದ್ದ ಚೋಟಾ ರಾಜನ್ ಬಲಗೈ ಬಂಟ ರಶೀದ್ ಮಲಬಾರಿ

Published : May 17, 2017, 10:09 PM ISTUpdated : Apr 11, 2018, 12:51 PM IST
ಜನಪ್ರತಿನಿಧಿಗಳು, ಶ್ರೀಮಂತರನ್ನು ಅಪಹರಿಸಲು ಸ್ಕೆಚ್ ಹಾಕಿದ್ದ ಚೋಟಾ ರಾಜನ್ ಬಲಗೈ ಬಂಟ ರಶೀದ್ ಮಲಬಾರಿ

ಸಾರಾಂಶ

ಛೋಟಾ ರಾಜನ್ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ರಶೀದ್ ಮಲಬಾರಿ ಮತ್ತು ಆತನ ಗ್ಯಾಂಗ್ ಬೆಳಗಾವಿ ನಗರದಲ್ಲಿ ಜನಪ್ರತಿನಿಧಿಗಳು, ಶ್ರೀಮಂತರನ್ನು ಅಪಹರಿಸಲು ಸಂಚು ರೂಪಿಸಿದ್ದ ವಿಚಾರ ಇದೀಗ ಬಯಲಾಗಿದೆ.

ಬೆಳಗಾವಿ(ಮೇ.17): ಛೋಟಾ ರಾಜನ್ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ರಶೀದ್ ಮಲಬಾರಿ ಮತ್ತು ಆತನ ಗ್ಯಾಂಗ್ ಬೆಳಗಾವಿ ನಗರದಲ್ಲಿ ಜನಪ್ರತಿನಿಧಿಗಳು, ಶ್ರೀಮಂತರನ್ನು ಅಪಹರಿಸಲು ಸಂಚು ರೂಪಿಸಿದ್ದ ವಿಚಾರ ಇದೀಗ ಬಯಲಾಗಿದೆ.
ಈ ಸಂಬಂಧ ಮಲಬಾರಿ ಹಾಗೂ ಗ್ಯಾಂಗ್ ಪೂರ್ವ ತಯಾರಿಯನ್ನೂ ಮಾಡಿಕೊಂಡಿತ್ತು. ದೂರವಾಣಿ ಮೂಲಕ ಕೆಲ ಜನಪ್ರತಿನಿಧಿಗಳಿಗೆ ಬೆದರಿಕೆಯನ್ನೂ ಹಾಕಿದ್ದರು. ಆದರೆ, ಕೆಲ ಶಾಸಕರು ಸಾಲಗಾರರಾಗಿದ್ದು, ಅವರಿಂದ ಏನೂ ಗಿಟ್ಟುವುದಿಲ್ಲ ಎಂಬುದು ಗೊತ್ತಾದ ಮೇಲೆ ಈ ಯೋಜನೆ ಕೈ ಬಿಟ್ಟಿರುವುದಾಗಿ ಮಲಬಾರಿ ಗ್ಯಾಂಗ್‌ನ ಬಂಧಿತ ಪಾತಕಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಪರಾಧ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ನಗರ ಸೇರಿ ವಿವಿಧೆಡೆ ಉದ್ಯಮಿ, ಶ್ರೀಮಂತರ ಕೊಲೆ, ಅಪಹರಣ ಹಾಗೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ರಶೀದ್ ಮಲಬಾರಿ ಗ್ಯಾಂಗ್ ಈ ರೀತಿಯ ಕೃತ್ಯದ ಹಿಂದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಲಬಾರಿ ಗ್ಯಾಂಗ್ ವಶಕ್ಕೆ ಪಡೆದುಕೊಳ್ಳಲು ಹಿರಿಯ ಅಧಿಕಾರಿಗಳ ನೇತೃತ್ವದ ನಾಲ್ಕು ತಂಡಗಳನ್ನು ರಚಿಸಲಾಗಿದೆೆ. ಈಗಾಗಲೇ ರಚನೆಯಾಗಿರುವ ತನಿಖಾ ತಂಡಗಳು ಮುಂಬೈ, ಗೋವಾ, ಹೈದರಾಬಾದ್, ರಾಜಸ್ಥಾನ, ಬಿಹಾರ, ಬೆಂಗಳೂರು, ಮಂಗಳೂರು, ಮುಂಬೈ ಸೇರಿದಂತೆ ಇನ್ನಿತರ ಕಡೆ ಪಾತಕಿ ಮಲಬಾರಿ ಶೋಧಕಾರ್ಯ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!