ಈ ನಂಬರ್'ನಿಂದ ಕರೆ ಸ್ವೀಕರಿಸಿದ ಕೂಡಲೆ ನಿಮ್ಮ ತಲೆ ಸ್ಫೋಟವಾಗುತ್ತದೆಯಂತೆ ???

By Suvarna Web DeskFirst Published May 17, 2017, 9:21 PM IST
Highlights

ನೀವು ಆ ನಂಬರಿನ ಕರೆಯನ್ನು ಸ್ವೀಕರಿಸಿದ ಕೂಡಲೇ ನಿಮ್ಮ ತಲೆ ಸ್ಫೋಟಗೊಳ್ಳುತ್ತದೆ. ರಕ್ತಕಾರಿ ಕ್ಷಣಾರ್ಧದಲ್ಲಿ ಸಾಯುತ್ತೀರ !

ಈ ನಂಬರ್'ನಿಂದ ಕರೆ ಸ್ವೀಕರಿಸಿದ ಕೂಡಲೆ ನಿಮ್ಮ ತಲೆ ಸ್ಫೋಟವಾಗುತ್ತದೆಯಂತೆ ???

ಇತ್ತೀಚಿಗೆ ದೇಶದಾದ್ಯಂತ ಎಲ್ಲರ ಮೊಬೈಲ್ಗಳ ವಾಟ್ಸ್'ಅಪ್ ಹಾಗೂ ಫೇಸ್'ಬುಕ್'ಗಳಲ್ಲೂ ಒಂದು ಬೆದರಿಕೆ ಸಂದೇಶ ಬರುತ್ತಿದೆ. ಅದು ಅಂತಿಂಥ ಬೆದರಿಕೆ ಸಂದೇಶವಲ್ಲ. ನೀವು ಆ ನಂಬರಿನ ಕರೆಯನ್ನು ಸ್ವೀಕರಿಸಿದ ಕೂಡಲೇ ನಿಮ್ಮ ತಲೆ ಸ್ಫೋಟಗೊಳ್ಳುತ್ತದೆ. ರಕ್ತಕಾರಿ ಕ್ಷಣಾರ್ಧದಲ್ಲಿ ಸಾಯುತ್ತೀರ. ಆದ್ದರಿಂದ ಯಾವುದೇ ಕಾರಣಕ್ಕೂ ಈ ನಂಬರ್'ನಿಂದ ಬರುವ ಕರೆಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ' ಎನ್ನುವ ಸಂದೇಶವಿದು.

ಅಸಲಿಗೆ ಯಾವ ನಂಬರ್ ಅಂತೀರಾ ?

777888999 ಎಂಬ ನಂಬರ್'ನಿಂದ ಕರೆ ಬರೆತ್ತದೆ ಎಂದು ದೇಶದಾದ್ಯಂತ ಎಲ್ಲರ ಮೊಬೈಲ್'ಗಳಲ್ಲೂ ಸಂದೇಶ ಹರಿದಾಡುತ್ತಿದೆ. ಸಂದೇಶ ಸ್ವೀಕರಿಸಿದ ಬಹುತೇಕರು ಸಿಕ್ಕ ಸಿಕ್ಕ ಸ್ನೇಹಿತರಿಗೆ ಬಂಧುಬಳಗಕ್ಕೆ ಫಾರ್ವಾಡ್ ಮಾಡುತ್ತಿದ್ದಾರೆ. ಫಾರ್ವರ್ಡ್ ಮಾಡಿಸಿಕೊಂಡವರು ಮತ್ತಷ್ಟು ಜನರಿಗೆ ರವಾನಿಸುತ್ತಿದ್ದಾರೆ. ಒಟ್ಟಿನಲ್ಲಿ ಬಹುತೇಕರ ಮೊಬೈಲ್'ನಲ್ಲೂ ಈ ಸಂದೇಶ ಹರಿದಾಡುತ್ತಿದೆ.

ಈ ಸಂದೇಶದ ಮಾಹಿತಿಯ ಜೊತೆಗೆ ಆ ರಾಜ್ಯದಲ್ಲಿ ಈ ನಂಬರ್'ನಿಂದ ಕರೆ ಸ್ವೀಕರಿಸಿದ ತಕ್ಷಣವೇ ಒಂದಷ್ಟು ಮಂದಿ ಮೃತಪಟ್ಟರು. ಇನ್ನೊಂದಷ್ಟು ರಾಜ್ಯದಲ್ಲಿ ಹಲವರು ಸತ್ತಿದ್ದಾರೆ, ನಿರ್ಲಕ್ಷಿಸದೆ  ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎನ್ನುವ ಸಂದೇಶವಿದು. ವಿಚಿತ್ರವೆಂದರೆ ಮೆಸೇಜ್ ಬಂದ ರಾಜ್ಯದಲ್ಲಿ ಸತ್ತವರ ಬಗ್ಗೆ ಮಾಹಿತಿಯಿರುವುದಿಲ್ಲ. ಬೇರೆ ರಾಜ್ಯದ ಬಗ್ಗೆ ಹೆಚ್ಚು ಉಲ್ಲೇಖವಿರುತ್ತದೆ.

ಅಸಲಿಗೆ ನಿಜಾಂಶ ಏನು ಗೊತ್ತೆ ?

777888999 ನಂಬರ್ ಭಾರತದ್ದೆ ಅಲ್ಲ. 9 ನಂಬರ್'ಗಳು ನಮ್ಮ ದೇಶದಲ್ಲಿ ಕೆಲಸ ಮಾಡುವುದಿಲ್ಲ. ವಿದೇಶಗಳಲ್ಲಿ ಕೆಲಸಮಾಡಿದರೂ ಆಯಾ ದೇಶದ ಕೋಡ್ ನಂಬರ್ ಇರುತ್ತದೆ. ಸಂಪೂರ್ಣವಾಗಿ ಇದು ಸುಳ್ಳು,ಚೇಷ್ಟೆ, ಬೆದರಿಕೆ ಹುಟ್ಟಿಸುವ ಕರೆಯೇ ಹೊರತು ಮತ್ತೇನಿಲ್ಲ. ಒಂದು ವೇಳೆ ಈ  ರೀತಿಯ ಸಂದೇಶ ಬಂದಿದ್ದರೆ ಸಂಪೂರ್ಣವಾಗಿ ನಿರ್ಲಕ್ಷಿಸಿ. ಯಾರೊಬ್ಬರಿಗೂ ಫಾರ್ವಡ್ ಅಥವಾ ಶೇರ್ ಮಾಡಲು ಹೋಗಬೇಡಿ. ಇಂತಹ ಸಂದೇಶಗಳು ಆಗಾಗ ಬರುತ್ತಿರುತ್ತವೆ. ಇದಕ್ಕೆ ನಿರ್ಲಕ್ಷವೇ ಉತ್ತರವಾಗಿರಬೇಕು. ನೀವು ಗಾಬರಿಗೊಂಡು ಮತ್ತೊಬ್ಬರನ್ನು ಭೀತಿಗೊಳಿಸಬೇಡಿ.

click me!