
ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ. ಬುಧವಾರ ಕೊಂಕಣಿ ಕನ್ನಡ ಶೈಲಿಯಲ್ಲಿ ಹಾಗೂ ಗುರುವಾರ ಸಿಂಧಿ ಸಂಪ್ರದಾಯದ ಶೈಲಿಯಲ್ಲಿ ವಿವಾಹ ನಡೆಯಲಿದೆ.
ವರ್ಷದ ಬಹುನಿರೀಕ್ಷಿತ ಈ ವಿವಾಹ ಸಂಭ್ರಮದಲ್ಲಿ ಉಭಯ ಕುಟುಂಬ ಸದಸ್ಯರು, ನಟ ಶಾರುಖ್ ಖಾನ್, ನಿರ್ದೇಶಕಿ ಫರ್ಹಾಖಾನ್, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ನೀಡಲಾಗಿದೆ.
ವಿಮಾನದಲ್ಲಿ ಆಗಮನ: ವಿವಾಹ ಕಾರ್ಯಕ್ರಮವು 700 ವರ್ಷ ಇತಿಹಾಸ ಹೊಂದಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋದಲ್ಲಿ ನಡೆಯಲಿದೆ. ಅಲ್ಲಿಗೆ, ಆಹ್ವಾನಿತರು ತಾವು ಉಳಿದುಕೊಂಡಿರುವ ಸಮೀಪದ ರೆಸಾರ್ಟ್‌ನಿಂದ ಯಾಚ್‌ನಲ್ಲಿ ಆಗಮಿಸಲಿದ್ದಾರೆ. ಅದರೆ ವರ ರಣವೀರ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಸಮುದ್ರ ವಿಮಾನದಲ್ಲಿ ಆಗಮಿಸಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.
ಆಹ್ವಾನಿತರಿಗೆ ಕೊಮೊ ಸರೋವರದ ತೀರದಲ್ಲೇ ಇರುವ ರೆಸಾರ್ಟ್‌ನ 75 ಕೊಠಡಿಗಳನ್ನು ವಾರದ ಅವಧಿಗೆ ಪೂರ್ಣವಾಗಿ ಬುಕ್ ಮಾಡಲಾಗಿದ್ದು, ಎಲ್ಲರೂ ಅಲ್ಲಿಯೇ ತಂಗಿದ್ದಾರೆ.
ಇ ಎಂಟ್ರಿ: ವಿವಾಹದ ಹಿನ್ನೆಲೆಯಲ್ಲಿ ಆಹ್ವಾನಿತರ ಮೊಬೈಲ್‌ಗೆ ವಿಶೇಷ ಆಮಂತ್ರಣ ಪತ್ರಿಕೆ ರವಾನಿಸಲಾಗಿದೆ. ಇದರೊಳಗೆ ಕ್ಯು ಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕವೇ ಎಲ್ಲರಿಗೂ ವಿವಾಹ ಸ್ಥಳಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ.
ವಿಲ್ಲಾ ಡೆಲ್: ಉತ್ತರ ಇಟಲಿಯ ಕೊಮೊ ಸರೋವರ ತೀರದಲ್ಲಿರುವ ವಿಲ್ಲಾ ಡೆಲ್ ಬಾಲ್‌ಬಿಯಾನೆಲ್ಲೋ ಒಂದು ಖಾಸಗಿ ಕಟ್ಟಡ. 700 ವರ್ಷ ಇತಿಹಾಸ ಹೊಂದಿರುವ ಈ ಐತಿಹಾಸಿಕ, ಸುಂದರ ಕಟ್ಟಡದೊಳಗೆ ಕುಳಿತರೆ, ಸರೋವರ, ಸುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸಬಹುದಾಗಿದೆ. ಹೀಗಾಗಿಯೇ ಈ ಕಟ್ಟಡವೂ ಸೇರಿದಂತೆ ಕೊಮೊ ಸರೋವರ ತೀರ ಪ್ರದೇಶಗಳು ಬಾಲಿವುಡ್‌ನ ಖ್ಯಾತನಾಮರನ್ನು ಇಲ್ಲಿಗೆ ಬಹುವಾಗಿ ಸೆಳೆಯುತ್ತದೆ. ವಿಲ್ಲಾ ಡೆಲ್‌ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೂಲ ಶುಲ್ಕವಾಗಿ 8 ಲಕ್ಷ ರು. ಪಾವತಿ ಮಾಡಬೇಕು. ಆದರೆ ಕಾರ್ಯಕ್ರಮಕ್ಕೆ ಗರಿಷ್ಠ 80 ಜನರನ್ನು ಆಹ್ವಾನಿಸಬಹುದು. ಇತರೆ ಎಲ್ಲಾ ಶುಲ್ಕಗಳೂ ಪ್ರತ್ಯೇಕ.
ಬೆಂಗಳೂರಲ್ಲಿ ಔತಣ: ಕುಟುಂಬ ಸದಸ್ಯರಿಗಾಗಿ ದೀಪಿಕಾ ಕುಟುಂಬ ನ.21ರಂದು ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ. ನ.28ರಂದು ಮುಂಬೈನಲ್ಲಿ ಚಲನಚಿತ್ರರಂಗದ ಖ್ಯಾತನಾಮರಿಗಾಗಿ ಆರತಕ್ಷತೆ ಆಯೋಜಿಸಿದೆ.
ಸ್ವಿಸ್ ಬಾಣಸಿಗರು: ಇನ್ನು ಮದುವೆ ದಿಬ್ಬಣಕ್ಕಾಗಿ ವಿಶೇಷ ಕೇಕ್ ತಯಾರಿಸಲು ಸ್ವಿಜರ್‌ಲೆಂಡ್‌ನಿಂದ ವಿಶೇಷ ಬಾಣಸಿಗರನ್ನು ಕರೆಸಲಾಗಿದೆ. ವಿವಾಹದ ದಿನ ದೀಪಿಕಾ, ಕೆಂಪು ಬಣ್ಣದ ಲೆಹೆಂಗಾ-ಚೋಲಿ ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ದಾನ ಮಾಡಿ: ಇದೇ ವೇಳೆ ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ದತ್ತಿ ಸಂಸ್ಥೆಗಳಿಗೆ ದಾನ ಮಾಡಬಹುದು ಎಂದು ದೀಪಿಕಾ- ರಣವೀರ್ ದಂಪತಿ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ