ನಡಿಯಕ್ಕಾಗ್ತಿಲ್ಲ ಅಂತಿದ್ದ ರಮ್ಯಾ ದುಬೈನಲ್ಲಿ? ಪೋಟೋ ಒಂದು ವೈರಲ್

By Web Desk  |  First Published Jan 9, 2019, 8:43 PM IST

ರೆಬಲ್ ಸ್ಟಾರ್ ಅಂಬರೀಶ್ ನಿಧನದ ವೇಳೆಯೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ರಮ್ಯಾ ಅವರ ಫೋಟೋ ಒಂದು ವೈರಲ್ ಆಗುತ್ತಿದೆ.


ಬೆಂಗಳೂರು[ಜ.09]  ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಉಸ್ತುವಾರಿ ವಹಿಸಿಕೊಂಡಿರುವ ರಮ್ಯಾ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲೇ ಹರಿದಾಡುತ್ತಿದೆ.

ರಮ್ಯಾ ಅವರು ದುಬೈಯಲ್ಲಿ  ಇರುವ ಫೋಟೋ ವೈರಲ್ ಆಗಿದೆ. ರಾಹುಲ್ ಗಾಂಧಿ ಸಹ ದುಬೈ ಪ್ರವಾಸ ಮಾಡಿದ್ದು ಅವರನ್ನು ಸ್ವಾಗತಿಸಲು ಮೊದಲೆ ತೆರಳಿದ್ದರು ಎಂದು ನೆಟ್ಟಿಗರು ಕುಟುಕಿದ್ದಾರೆ.

Tap to resize

Latest Videos

ರಮ್ಯಾಗೆ ಬಿಸಿ ಮುಟ್ಟಿಸಿದ ಅಭಿಮಾನಿಯ ಪತ್ರ...8 ಸಂಗತಿಗಳು ವೈರಲ್

ಮಂಡ್ಯ ಲೋಕಸಭೆಯಿಂದ ಆರಿಸಿ ಸಂಸತ್ತು ಪ್ರವೇಶಿಸಿದ್ದ ರಮ್ಯಾ ಮಂಡ್ಯದಿಂದಲೇ ಮನೆ ಖಾಲಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಗಾಗ ವಿವಾದಾತ್ಮಕ ಟ್ವೀಟ್ ಮಾಡುತ್ತ ಸುದ್ದಿಯಾಗುತ್ತಿದ್ದರು.

ನಾನು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ನನ್ನ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ.  ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಅಂಬರೀಶ್ ಅವರಿಗೆ ನಮನ ಸಲ್ಲಿಸಲು ಬರಲಿಕ್ಕೆ ಸಾಧ್ಯವಾಗಿಲ್ಲ ಎಂದು ಟ್ವೀಟ್ ಮಾಡಿದ್ದರು.

click me!