
ತಿರುವನಂತಪುರಂ(ಜ.09): ಶಬರಿಮಲೆಗೆ 'ಅನ್ಯ ಮಾರ್ಗ'ದಲ್ಲಿ ಬಂದು ಅಯ್ಯಪ್ಪನ ದರ್ಶನ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಂದೂ ಕೂಡ 35 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಬಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ಕೇರಳದ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್.ಪಿ. ಮಂಜು ಎಂಬ ಮಹಿಳೆ ಇಂದು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳಾಗಿರುವ ಈ ಮಹಿಳೆ ಮುಖಕ್ಕೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
"
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ಈಗಲೂ ಬೆಟ್ಟದಲ್ಲೇ ಇದ್ದು, ಅವರ ಕಣ್ಣು ತಪ್ಪಿಸಿ ಈ ಮಹಿಳೆ ದೇಗುಲ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!
ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ
ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಮತ್ತು ಇನ್ವಿಸಿಬಲ್ ಗೋರಿಲ್ಲಾ!
ಭಾರತದಲ್ಲಿ ಮಾರ್ಕ್ಸಿಸಂಗೆ ಅಂತ್ಯ ಹಾಡಲಿರುವ ಶಬರಿಮಲೆ: ರಾಜೀವ್ ಚಂದ್ರಶೇಖರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.