
ದಯಾಳ್ ಪದ್ಮನಾಭ್ ನಿರ್ದೇಶನ ಮತ್ತು ನಿರ್ಮಾಣದ ‘ಟಾಸ್’ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ಐದು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಚಿತ್ರವಿದು. ಮೊನ್ನೆ ಮೊನ್ನೆ ಆ ಚಿತ್ರದ ಹೀರೋ ವಿಜಯ ರಾಘವೇಂದ್ರ ಪ್ರಮೋಶನ್'ಗೆ ಬರುತ್ತಿಲ್ಲ ಅಂತ ದೂರಿದ್ದ ದಯಾಳ್, ಇದೀಗ ಚಿತ್ರದ ನಾಯಕಿ ರಮ್ಯಾಬಾರ್ನಾ ಕೂಡ ‘ಟಾಸ್’ ಚಿತ್ರದ ಪ್ರಮೋಷನ್'ಗೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಇತ್ತೀಚೆಗೆ ನಟಿ ರಮ್ಯ ಬಾರ್ನಾ ಅವರು ಉದ್ಯಮಿ ಹಾದ್ ಅಲಿ ಖಾನ್ ಅವರನ್ನು ಮದುವೆಯಾದ ಸುದ್ದಿ ಸಾಕಷ್ಟು ಸದ್ದು ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ದಿಢೀರನೆ ಮದುವೆ ಆದ ಬೆನ್ನಲ್ಲೇ ‘ಟಾಸ್’ ಅವರ ಅಭಿನಯದ ಕೊನೆಯ ಚಿತ್ರವಾಗಬಹುದು ಎಂಬ ಮಾತುಗಳೂ ಕೇಳಿ ಬಂದಿದ್ದವು. ಇದೀಗ ಅವರ ಅಭಿನಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಬಿಡುಗಡೆಯಾಗುತ್ತಿದ್ದರೂ ರಮ್ಯ ಬಾರ್ನಾ ಸಿಗುತ್ತಿಲ್ಲ ಎನ್ನುವುದು ನಿರ್ದೇಶಕರ ಅಳಲು.
'ಮದ್ವೆ ಆಗಿದ್ದೇನೆ ಅಂಥ ಈ ರೀತಿ ಮಾಡೋದು ಸರಿಯಲ್ಲ ಎಂದು ಅವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಅವರ ಖಾಸಗಿ ವಿಚಾರಗಳ ಬಗ್ಗೆ ಮಾತನಾಡೋದಿಲ್ಲ. ಚಿತ್ರದ ಪ್ರಮೋಷನ್'ಗೆ ಕರೆಯುವುದಕ್ಕಾಗಿ ನಾನು ಅವರಿಗೆ ನೂರಾರು ಬಾರಿ ಫೋನ್ ಕಾಲ್ ಮಾಡಿದ್ದೇನೆ. ಒಮ್ಮೆಯೂ ನನ್ನ ಕರೆ ಸ್ವೀಕರಿಸಿಲ್ಲ. ಮೆಸೇಜ್ ಮಾಡಿದ್ದೇನೆ. ಅದಕ್ಕೂ ಪ್ರತಿಕ್ರಿಯೆ ಇಲ್ಲ. ಇತ್ತೀಚೆಗಷ್ಟೆ ಕರೆದಿದ್ದ ಸುದ್ದಿಗೋಷ್ಠಿಗೂ ಬರಲಿಲ್ಲ. ಅದಕ್ಕೆ ಬರುವಂತೆ ಕೇಳಿಕೊಂಡ್ರೆ, ‘ತಾಯಿಗೆ ಹುಷಾರಿಲ್ಲ, ಸರ್ಜರಿ ಆಗುತ್ತಿದೆ ಬರಲಾಗುತ್ತಿಲ್ಲ’ ಅಂತ ಹೇಳಿದ್ರು. ಮರು ದಿವಸ ಅವರ ರಹಸ್ಯ ಮದುವೆ ವಿಚಾರ ಗೊತ್ತಾಯಿತು. ಕೊನೆ ಪಕ್ಷ ಈಗಲಾದರೂ ಚಿತ್ರದ ಪ್ರಮೋಷನ್‌ಗೆ ಬರುತ್ತಾರಾ ಅಂತ ಕೇಳಿಕೊಂಡು ಫೋನ್ ಮಾಡುತ್ತಿದ್ದರೆ ಕಾಲ್ ಬೌನ್ಸ್ ಬರುತ್ತಿದೆ. ನಮ್ಮ ಕಷ್ಟ ಇವರಿಗೆ ಅರ್ಥ ಆಗುತ್ತಿಲ್ಲ’ ಅಂತ ದಯಾಳ್ ತಮ್ಮ ಬೇಸರ ಹೊರ ಹಾಕಿದ್ದಾರೆ.
ರಹಸ್ಯ ಮದುವೆ ವಿಚಾರ ಬಯಲಾದ ನಂತರ ನಟಿ ರಮ್ಯ ಬಾರ್ನಾ ತಮ್ಮ ಎರಡು ಮೊಬೈಲ್ ನಂಬರ್ ಬದಲಾಯಿಸಿದ್ದಾರೆ. ಚಾಲ್ತಿಯಲ್ಲಿರುವ ನಂಬರ್‌ಗೆ ಕರೆ ಮಾಡಿದರೆ ಅದು ನಾಟ್ ರೀಚೆಬಲ್ ಬರುತ್ತಿದೆ. ಬದಲಾದ ಸಂಖ್ಯೆಗೆ ಕರೆ ಮಾಡಿದ್ರೆ ಸ್ವಿಚ್ ಆಫ್ ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.