ಮಣಿಪುರ ಮಹಿಳೆ ಅಸ್ವಸ್ಥೆ: ಜೆಸಿಬಿಯಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಗೆ ರವಾನೆ!

By Suvarna Web DeskFirst Published Jul 19, 2017, 10:17 AM IST
Highlights

ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಲಭ್ಯವಾಗದ ಕಾರಣ, ನೆಲ ಅಗೆಯಲು ಉಪಯೋಗಿಸುವ ಜೆಸಿಬಿ ಯಂತ್ರದಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಯೊಂದಕ್ಕೆ ಸಾಗಿಸಿದ ಘಟನೆ ಮಣಿಪುರದಲ್ಲಿ ನಡೆದಿದೆ.

ಗುವಾಹಟಿ(ಜು.19): ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಲಭ್ಯವಾಗದ ಕಾರಣ, ನೆಲ ಅಗೆಯಲು ಉಪಯೋಗಿಸುವ ಜೆಸಿಬಿ ಯಂತ್ರದಲ್ಲಿ ಮ್ಯಾನ್ಮಾರ್ ದೇಶದ ಆಸ್ಪತ್ರೆಯೊಂದಕ್ಕೆ ಸಾಗಿಸಿದ ಘಟನೆ ಮಣಿಪುರದಲ್ಲಿ ನಡೆದಿದೆ.

ಮಣಿಪುರದ ಚಾಂಡೇಲ್ ಜಿಲ್ಲೆಯ ನ್ಯೂ ಗ್ಯಾಮ್ನೊಮ್ ಗ್ರಾಮದಲ್ಲಿ 40 ವರ್ಷದ ಥಂಗಟಿನ್ ಬೈಟೆ ಎಂಬ ಮಹಿಳೆ ನಿಗೂಢ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯ ಪರಿಸ್ಥಿತಿ ವಿಷಮಿಸಿತು. ಬೈಟೆಯನ್ನು 2 ಕಿ.ಮೀ. ದೂರದಲ್ಲೇ ಇದ್ದ ಸೆಹ್ಲೋನ್‌'ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ ಅಲ್ಲಿ ವೈದ್ಯರು ಅಥವಾ ಔಷಧ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಹೀಗಾಗಿ 20 ಕಿ.ಮೀ. ದೂರದಲ್ಲಿನ ಮ್ಯಾನ್ಮಾರ' ನ ಆಸ್ಪತ್ರೆಗೆ ಹೋಗಲು ನಿರ್ಧರಿಸಲಾಯಿತು.

ಈ ವೇಳೆ ವಾಹನ ಸಿಗದ ಕಾರಣ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಗ್ರಾಮಸ್ಥರು ಕಣ್ಣಿಗೆ ಬಿತ್ತು. ಜೆಸಿಬಿ ಮುಂಭಾಗದ ಮಣ್ಣು ಬಗೆಯುವ ಜಾಗದಲ್ಲಿ ಮಹಿಳೆಯನ್ನು ಮಲಗಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ ಆಕೆ ಮಾರ್ಗಮಧ್ಯೆಯೇ ಮೃತಪಟ್ಟಳು.

 

click me!