ನಾಲ್ಕು ಮಕ್ಕಳನ್ನು ಕೊಂದು ತಾನು ಗುಂಡಿಕ್ಕಿಕೊಂಡ

Published : Jun 13, 2018, 01:39 PM ISTUpdated : Jun 13, 2018, 01:45 PM IST
ನಾಲ್ಕು ಮಕ್ಕಳನ್ನು ಕೊಂದು ತಾನು ಗುಂಡಿಕ್ಕಿಕೊಂಡ

ಸಾರಾಂಶ

ಪೊಲೀಸ್ ಅಧಿಕಾರಿಯೊಬ್ಬರಿಗೆ ಗುಂಡಿಕ್ಕಿ ಬಂದ ಆಸಾಮಿಯೊಬ್ಬ ತನ್ನ ಸ್ನೇಹಿತೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಹಸುಗೂಸುಗಳನ್ನು ಹತ್ಯೆ ಮಾಡಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡಲು ಕಾರಣವೇನು? ಮುಂದೆ ಓದಿ

ಒರ್ಲಾಂಡೋ:  ಪೊಲೀಸ್ ಅಧಿಕಾರಿಯೊಬ್ಬರಿಗೆ ಗುಂಡಿಕ್ಕಿ ಬಂದ ಆಸಾಮಿಯೊಬ್ಬ ತನ್ನ ಸ್ನೇಹಿತೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಹಸುಗೂಸುಗಳನ್ನು ಹತ್ಯೆ ಮಾಡಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.  

ಪ್ಲೋರಿಡಾದ ಒರ್ಲಾಂಡೋ ಈ ದಾರುಣ ಘಟನೆಗೆ ಸಾಕ್ಷಿಯಾಗಿದೆ. ಒರ್ಲಾಂಡೋ ಪೊಲೀಸ್ ಆಯುಕ್ತ ಮಧ್ಯರಾತ್ರಿಯೇ ತುರ್ತು ಸುದ್ದಿಗೋಷ್ಠಿ ಕರೆದು ವಿವರ ನೀಡಿದ್ದಾರೆ.

ಸ್ವಯಂ ಘೋಷಿತ ದೇವಮಾನವ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?

35 ವರ್ಷದ ಗ್ರೇ ವಾಯ್ನೆ ಲಿಂಡ್ಸೆ 1,6,10, ಮತ್ತು 12 ವರ್ಷದ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಗೃಹ ಬಂಧನದಲ್ಲಿದ್ದ ತನ್ನ ಇಬ್ಬರು ಮಕ್ಕಳು ಮತ್ತು ಸ್ನೇಹಿತೆಯ ಇಬ್ಬರು ಮಕ್ಕಳನ್ನು ವಿನಾಕಾರಣ ಹತ್ಯೆ ಮಾಡಿದವ ಕೊನೆಗೂ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವಾಯ್ನೆ ಲಿಂಡ್ಸೆ ಈ ಹಿಂದೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಭಾಗವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟಿದ್ದ ಆತನ ಮೇಲೆ ಅನೇಕ ಕಳ್ಳತನದ ಪ್ರಕರಣಗಳಿದ್ದು ಐಷಾರಾಮಿ ಬದುಕಿಗೆ ಮರುಳಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ