ಅತೃಪ್ತರಾಗಿದ್ದ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್

By Web DeskFirst Published Jul 18, 2019, 9:51 AM IST
Highlights

ಅತೃಪ್ತರಾಗಿ ಹೊರ ನಡೆದಿದ್ದ ಕೈ ಮುಖಂಡ ರಾಮಲಿಂಗಾ ರೆಡ್ಡಿ ಇದೀಗ ತಮ್ಮ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಅತೃಪ್ತರ ಬಣದಿಂದ ಹೊರ ಬರುವ ತೀರ್ಮಾನ ಮಾಡಿದ್ದಾರೆ. 

ಬೆಂಗಳೂರು [ಜು.18]:  ಅತೃಪ್ತರಾಗಿ ಹೊರ ನಡೆದಿದ್ದ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅತೃಪ್ತಿ ಶಮನವಾಗಿದೆ. ಅವರು ಸ್ಪೀಕರ್ ಭೇಟಿಯಾಗಿ ರಾಜೀನಾಮೆ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ.. 

ರಾಜೀನಾಮೆ ವಾಪಸ್ ಪಡೆಯುವ ಮೂಲಕ ಅತೃಪ್ತರ ಪಡೆಯಿಂದ ಹೊರ ಬರಲಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಅವರ ಸಂಧಾನಕ್ಕೆ ಮಣಿದ ಬಿಟಿಎಂ ಲೇ ಔಟ್ ಶಾಸಕ ರಾಮಲಿಂಗಾ ರೆಡ್ಡಿ ಇದೀಗ ತಮ್ಮ ಅಚಲ ನಿರ್ಧಾರ ಕೈ ಬಿಟ್ಟು ಮೈತ್ರಿ ಪಾಳಯದ ನಾಯಕರ ಮಾತಿಗೆ ಒಪ್ಪಿ ರಾಜೀನಾಮೆ ವಾಪಸ್ ಪಡೆಯುತ್ತಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಅಲ್ಲದೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೂಡ ಕೈ ನಾಯಕ ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದಾರೆ. 

click me!