ಈಗ ಕನ್ನಡ ಸೇರಿ 9 ಭಾರತೀಯ ಭಾಷೇಲಿ ಸುಪ್ರೀಂ ತೀರ್ಪು ಲಭ್ಯ

By Web DeskFirst Published Jul 18, 2019, 9:42 AM IST
Highlights

ಇನ್ನು ಮುಂದೆ ಕನ್ನಡ ಸೇರಿದಂತೆ ದೇಶದ 9 ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ. 

ನವದೆಹಲಿ [ಜು.18]: ಕನ್ನಡ ಸೇರಿದಂತೆ ದೇಶದ 9 ಸ್ಥಳೀಯ ಭಾಷೆಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಪ್ರಕಟಿಸುವ ಯೋಜನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಬುಧವಾರ ಚಾಲನೆ ನೀಡಿದರು. 

ಇದೇ ಸಂದರ್ಭದಲ್ಲಿ ರೆಕಾರ್ಡ್‌ ಸೌಲಭ್ಯಗಳನ್ನೊಳಗೊಂಡ ಕೊಠಡಿಗಳು, ಸೆಮಿನಾರ್‌ ಹಾಲ್‌ಗಳು ಹಾಗೂ ವಕೀಲರ ಚೇಂಬರ್‌ಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಕಟ್ಟಡವನ್ನು ಕೋವಿಂದ್‌ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಕೋವಿಂದ್‌ ಅವರು, ‘ಸುಪ್ರೀಂಕೋರ್ಟ್‌ನ ಮುಖ್ಯವಾದ 100 ತೀರ್ಪುಗಳು ಇತರೆ ಭಾಷೆಗಳಿಗೆ ತರ್ಜುಮೆಯಾಗಿದ್ದಕ್ಕೆ ಅತೀವ ಸಂತೋಷವಾಗಿದೆ’ ಎಂದು ಹರ್ಷಿಸಿದರು. 

ಈ ಕ್ರಮದಿಂದ ಇನ್ನು ಮುಂದಿನ ದಿನಗಳಲ್ಲಿ ಸುಪ್ರೀಂ ತೀರ್ಪುಗಳು ಆಂಗ್ಲ ಭಾಷೆ ಗೊತ್ತಿಲ್ಲದ ದೇಶದ ನಾಗರಿಕರಿಗೂ ಅವರ ಭಾಷೆಯಲ್ಲೇ ಲಭ್ಯವಾಗಲಿವೆ ಎಂದು ಹೇಳಿದರು. ಜೊತೆಗೆ, ಸುಪ್ರೀಂ ಕೋರ್ಟ್‌ನ 31 ಪೂರ್ಣ ಸಂಖ್ಯೆಯ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಯಶಸ್ವಿಯಾದ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಕೋವಿಂದ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಯಾವೆಲ್ಲ ಭಾಷೆಗಳಲ್ಲಿ ಸುಪ್ರೀಂ ತೀರ್ಪು ಲಭ್ಯ?

ಕನ್ನಡ, ತೆಲುಗು, ಅಸ್ಸಾಂ, ಮರಾಠಿ, ಒಡಿಯಾ ಹಾಗೂ ಹಿಂದಿ ಸೇರಿದಂತೆ 9 ಸ್ಥಳೀಯ ಭಾಷೆಗಳಲ್ಲಿ ತೀರ್ಪು ಲಭ್ಯ. ಆದರೆ ತೀರ್ಪು ಪ್ರಕಟವಾದ ತಕ್ಷಣವೇ ಸ್ಥಳೀಯ ಭಾಷೆಗಳಲ್ಲಿ ಸದ್ಯಕ್ಕೆ ತೀರ್ಪು ಸಿಗುವುದಿಲ್ಲ. ಈಗೇನಿದ್ದರೂ, ಹಿಂದಿನ ಹಲವು ತೀರ್ಪುಗಳನ್ನು ಮಾತ್ರವೇ ಸ್ಥಳೀಯ ಭಾಷೆಯಲ್ಲಿ ಪ್ರಕಟಿಸಲಾಗಿದೆ.

ಯಾಕಾಗಿ ಈ ಕ್ರಮ?: 

2017ರಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು, ಇಂಗ್ಲಿಷ್‌ ಭಾಷೆ ಗೊತ್ತಿಲ್ಲದ ಸಾಮಾನ್ಯ ಜನರಿಗೂ ಸುಪ್ರೀಂ ಕೋರ್ಟ್‌ನ ತೀರ್ಪುಗಳು ಲಭ್ಯವಾಗಬೇಕು. ಇದಕ್ಕಾಗಿ ಸುಪ್ರೀಂ ತೀರ್ಪುಗಳು ಇಂಗ್ಲಿಷ್‌ ಜೊತೆಗೆ ಭಾರತೀಯ ಭಾಷೆಗಳಲ್ಲಿಯೂ ಸಹ ಪ್ರಕಟವಾಗಬೇಕು ಎಂದು ಪ್ರತಿಪಾದಿಸಿದ್ದರು. ಇದಕ್ಕಾಗಿ ಅದೇ ವರ್ಷದಲ್ಲಿ ಸ್ಥಳೀಯ ಭಾಷೆಗಳಲ್ಲೂ ಸುಪ್ರೀಂ ತೀರ್ಪುಗಳು ಲಭ್ಯವಾಗುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿ ಜೊತೆಗೆ ಸಿಜೆಐ ರಂಜನ್‌ ಗೊಗೋಯ್‌ ಅವರು ಕಾರ್ಯಪ್ರವೃತ್ತರಾಗಿದ್ದರು. ಅದರಂತೆ ಇದೀಗ

click me!