
ಸತತವಾಗಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಈಗ ಮದುವೆಯ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ನಾಯಕ ಯಾರನ್ನು ಮದುವೆಯಾಗುತ್ತಿದ್ದಾರೆ, ಯಾವಾಗ ಮದುವೆಯಾಗುತ್ತಿದ್ದಾರೆ ಎಂಬ ಕುತೂಹಲ ಪ್ರತಿಯೊಬ್ಬ ಕನ್ನಡ ಸಿನಿ ಪ್ರೇಮಿಗಳಿಗಿರುತ್ತೆ.
ಸದ್ಯ ಅವರು ಮದುವೆಯಾಗುತ್ತಿಲ್ಲ ಬೇರೆಯವರ ಮದುವೆಗಳಲ್ಲಿ ಓಡಾಡುತ್ತಿದ್ದಾರೆ. ತಮ್ಮ ನೆಚ್ಚಿನ ಸ್ನೇಹಿತ ರಿಷಬ್ ಶೆಟ್ಟಿ ಮದುವೆ ಇತ್ತೀಚಿಗಷ್ಟೆ ನೆರವೇರಿತು. ಆ ಮದುವೆಯಲ್ಲಂತೂ ಅವರದೇ ಪೂರ್ತಿ ಓಡಾಟ. ಇದಕ್ಕೂ ಮುನ್ನ ರಕ್ಷಿತ್ ಅವರ ಸೂಪರ್ ಹಿಟ್ ಚಿತ್ರ ಗೋಧಿ ಬಣ್ಣ ಸಾಧರಣ ಮೈಕಟ್ಟು ನಿರ್ದೇಶಿಸಿದ ಹೇಮಂತ್ ರಾವ್ ಮದುವೆ ಕೂಡ ಕೆಲವು ದಿನಗಳ ಹಿಂದೆ ನಡೆದಿತ್ತು. ಅಲ್ಲೂ ಅವರೆ ಹೆಚ್ಚು ಓಡಾಡಿಕೊಂಡಿದ್ದರು. ನಟನಾಗಿ ಗುರುತಿಸಿಕೊಳ್ಳದಿದ್ದ ಸಂದರ್ಭದಲ್ಲಿ ಮೊದಲ ಚಿತ್ರ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಮೂಲಕ ಸ್ಟಾರ್ ಪಟ್ಟ ನೀಡಿದ ನಿರ್ದೇಶಕ ಸುನಿ ಅವರು 2 ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ವಿವಾಹವಾಗಿದ್ದರು. ಅಲ್ಲೂ ರಕ್ಷಿತ್ ಶೆಟ್ಟಿ ಅವರದೆ ತಿರುಗಾಟ.
ಅಂತೂ ತಾವು ಮದುವೆಯಾಗದಿದ್ದರೂ ಬೇರೆಯವರ ಮದುವೆಗಳಲ್ಲಿ ಬ್ಯುಸಿಯಾಗಿ ಓಡಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.