
ಮೋರಿಗಾವೊಂ(ಅಸ್ಸಾಂ):ಶಾಸಕರರೊಬ್ಬರು ಸೆಕ್ಸ್'ನಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಘಟನೆ ಅಸ್ಸಾಂ'ನ ಮೋರಿಗಾವೊಂ'ನಲ್ಲಿ ನಡೆದಿದೆ.
ವೈರಲ್ ಆದ ವಿಡಿಯೋ ಮೋರಿಗಾವೊಂ ಕ್ಷೇತ್ರದ ಶಾಸಕ ರಮಾಕಾಂತ್ ದೇವ್ರಿ ಅವರನ್ನೇ ಹೋಲುತ್ತಿದ್ದು, ದೃಶ್ಯದಲ್ಲಿ ಶಾಸಕ ರೀತಿಯ ವ್ಯಕ್ತಿ ಹೋಟೆಲ್'ನಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಮಾಕಾಂತ್ ದೇವ್ರಿ, ಇದು ನನ್ನನ್ನು ತೇಜೋವಧೆಗೊಳಿಸುವ ಹುನ್ನಾರಗೊಳಿಸಲು ನನ್ನ ರಾಜಕೀಯ ವಿರೋಧಿಗಳು ಮಾಡಿರುವ ಸಂಚಾಗಿದೆ.ಅಲ್ಲದೆ ಶೀಘ್ರದಲ್ಲಿಯೇ ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷೆಯಾಗಿದ್ದೇನೆ. ಈ ಆರೋಪ ನನ್ನನ್ನು ಸಚಿವ ಸ್ಥಾನದಿಂದ ತಪ್ಪಿಸುವ ಉದ್ದೇಶವಾಗಿದೆ' ಎಂದು ವಿಡಿಯೊದಲ್ಲಿರುವುದು ನಾನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ'.
ಪೊಲೀಸರು ವಿಡಿದಲ್ಲಿರುವ ಸತ್ಯಾಸತ್ಯತೆಯನ್ನು ಪರೀಕ್ಷಿಸಲಿ ಒಂದು ವೇಳೆ ಅಲ್ಲಿರುವುದು ನಾನಾಗಿದ್ದರೆ, ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಸವಾಲಾಕಿದ್ದಾರೆ. ಆದರೆ ಬಿಜೆಪಿ ಮುಖಂಡರ್ಯಾರು ಶಾಸಕನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಇಂಡಿಯಾ ಟುಡೆ ವೆಬ್'ಸೈಟ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.