ರಾಜ್ಯಸಭೆಯಲ್ಲಿ ಮುಂದುವರೆದ ನೋಟು ಗದ್ದಲ

By Suvarna Web DeskFirst Published Nov 28, 2016, 6:43 AM IST
Highlights

ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸಂಸದರು ನೊಟು ನಿಷೇಧದ ಬಗ್ಗೆ ಪ್ರಧಾನಿಯವರು ಉತ್ತರಿಸಬೇಕೆಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.

ನವದೆಹಲಿ (ನ.28): ರಾಜ್ಯಸಭೆಯಲ್ಲಿ ಇಂದು ಕೂಡಾ ನೋಟು ನಿಷೇಧದ ಗದ್ದಲ ಮುಂದುವರೆದಿದೆ.

ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸಂಸದರು ನೊಟು ನಿಷೇಧದ ಬಗ್ಗೆ ಪ್ರಧಾನಿಯವರು ಉತ್ತರಿಸಬೇಕೆಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.

ಘೋಷಣೆ ಬಿಡಿ ಚರ್ಚೆ ಮಾಡಿ ಎಂದು ಉಪಸಭಾಪತಿ ಪಿ ಜೆ ಕುರಿಯನ್ ಮನವಿ ಮಾಡಿದರೂ, ವಿಪಕ್ಷಗಳು ಪ್ರಧಾನಿ  ನರೇಂದ್ರ ಮೋದಿಯವರು ಬರಬೇಕು ಎಂದು ಪಟ್ಟುಹಿಡಿದಿದ್ದಾರೆ.  

ಪ್ರಧಾನಿ ಎಲ್ಲಿದ್ದಾರೆ? ಸದನಕ್ಕೆ ಬರಲಿ ಎಂದ ಸಿ ಪಿ ಎಂ ನಾಯಕ್ ಸೀತಾರಾಮ್ ಯೆಚೂರಿ ಎಂದು ಆಗ್ರಹಿಸಿದ್ದಾರೆ.  ವಿಪಕ್ಷಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಕ್ವಿ, ಪ್ರತಿಪಕ್ಷಗಳು ಕೂಡಲೇ ಚರ್ಚೆಗೆ ಬರಲಿ ನಾವು ತಯಾರಿದ್ದೇವೆ ಎಂದು ಸವಾಲೆಸೆದರು.

click me!