ಸಿಲಿಕಾನ್ ಸಿಟಿಗೆ ತಟ್ಟಿಲ್ಲ ಬಂದ್ ಬಿಸಿ: ಆಟೋ, ಬಸ್, ಮೆಟ್ರೋ ಎಂದಿನಂತೆ ಸಂಚಾರ

Published : Nov 28, 2016, 04:37 AM ISTUpdated : Apr 11, 2018, 12:51 PM IST
ಸಿಲಿಕಾನ್ ಸಿಟಿಗೆ ತಟ್ಟಿಲ್ಲ ಬಂದ್ ಬಿಸಿ: ಆಟೋ, ಬಸ್, ಮೆಟ್ರೋ ಎಂದಿನಂತೆ ಸಂಚಾರ

ಸಾರಾಂಶ

ಕೇಂದ್ರ ಸರ್ಕಾರ ಘೋಷಿಸಿರುವ ನೋಟ್ ಬ್ಯಾನ್ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್ ಬೆಂಗಳೂರಿನ ಮೇಲೆ ಪರಿಣಾಮ ನೀರಿಲ್ಲ. ಬೆಂಗಳೂರಿನಲ್ಲಿ ಸಹಜ ಸ್ಥಿತಿ ಇದ್ದು, ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ ಎಂದಿನಂತೆ ಓಡಾಡುತ್ತಿವೆ. ಮಾರುಕಟ್ಟೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.  

ಬೆಂಗಳೂರು(ನ.28): ಕೇಂದ್ರ ಸರ್ಕಾರ ಘೋಷಿಸಿರುವ ನೋಟ್ ಬ್ಯಾನ್ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್ ಬೆಂಗಳೂರಿನ ಮೇಲೆ ಪರಿಣಾಮ ನೀರಿಲ್ಲ. ಬೆಂಗಳೂರಿನಲ್ಲಿ ಸಹಜ ಸ್ಥಿತಿ ಇದ್ದು, ಆಟೋ, ಟ್ಯಾಕ್ಸಿ, ಬಸ್, ಮೆಟ್ರೋ ಎಂದಿನಂತೆ ಓಡಾಡುತ್ತಿವೆ. ಮಾರುಕಟ್ಟೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.  

ಬೆಂಗಳೂರಿನ ಕೆ ಆರ್ ಮಾರ್ಕೆಟ್'ನಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದ್ದು, ಸಾಮಾನ್ಯ ದಿನದಂತೆ ಇಂದೂ ಸಹ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತಿದೆ.

ಮೆಟ್ರೋ ಯಥಾಸ್ಥಿತಿಯಲ್ಲಿ ಓಡಾಡುತ್ತಿದೆ. ಜನರೂಮೆಟ್ರೋದಲ್ಲಿ ಎಂದಿನಂತೆ ಸಂಚರಿಸುತ್ತಿದ್ದಾರೆ. ಇನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಎಂದಿಗಿಂತ ಜಾಸ್ತಿ ಸಂಖ್ಯೆಯಲ್ಲಿ ಆಟೋ ಓಡಿಸುವ ಮೂಲಕ ಮೋದಿಗೆ ಬೆಂಬಲ ‌ನೀಡುತ್ತಿದ್ದಾರೆ.

ಬೆಂಗಳೂರಿನ ಶಾಲೆಗಳ ಮೇಲೂ 'ಆಕ್ರೋಶ್ ದಿವಸ್' ಯಾವುದೇ ಪರಿಣಾಮ ಬೀರಿಲ್ಲ. ಶಾಲೆಗಳಿಗೆ ರಜೆ ಘೋಷಿಸದೆ ಶಾಲೆಗಳು ಎಂದಿನಂತೆ ತೆರೆದಿವೆ.

ಒಟ್ಟಾರೆಯಾಗಿ ಪ್ರತಿಪಕ್ಷಗಳು ಕರೆ ನೀಡಿದ್ದ 'ಆಕ್ರೋಶ್ ದಿವಸ್'ಗೆ ಜನ ಬೆಂಬಲ ಸಿಗದಿರುವುದರಿಂದ ಬಂದ್ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿಲ್ಲಿ ಪಂಜಾಬಲ್ಲಿ ಐಷಾರಾಮಿ ಕಾರ್ ಕದ್ದು ಬೆಂಗ್ಳೂರಲ್ಲಿ ಮಾರ್ತಿದ್ರು! ಇವರು ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ
ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು