ಡಾ. ರಾಜ್ ಸಮಾದಿ ಬಳಿ ಧ್ಯಾನಕೇಂದ್ರ

Published : Dec 12, 2017, 05:13 PM ISTUpdated : Apr 11, 2018, 12:35 PM IST
ಡಾ. ರಾಜ್ ಸಮಾದಿ ಬಳಿ ಧ್ಯಾನಕೇಂದ್ರ

ಸಾರಾಂಶ

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ರಾಕ್‌'ಲೈನ್ ವೆಂಕಟೇಶ್ ಸಲ್ಲಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿ ಮಾತನಾಡಿದರು.

ಬೆಂಗಳೂರು(ಡಿ.12): ಬೆಂಗಳೂರಿನಲ್ಲಿರುವ ವರನಟ ಡಾ.ರಾಜ್‌ ಕುಮಾರ್ ಹಾಗೂ ಪಾವರ್ತಮ್ಮ ಅವರ ಸಮಾಧಿ ಸ್ಥಳದಲ್ಲಿ ಭವ್ಯವಾದ ಧ್ಯಾನ ಕೇಂದ್ರ ನಿರ್ಮಾಣ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ರಾಕ್‌'ಲೈನ್ ವೆಂಕಟೇಶ್ ಸಲ್ಲಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕ್‌'ಲೈನ್ ವೆಂಕಟೇಶ್, ಡಾ.ರಾಜ್‌ ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿ ಸ್ಥಳವನ್ನು ಧ್ಯಾನಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು. ನಿತ್ಯ ಸಾವಿರಾರು ಮಂದಿ ಅಭಿಮಾನಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಧ್ಯಾನ ಕೇಂದ್ರ ನಿರ್ಮಾಣ ಮಾಡಿದರೆ ಧ್ಯಾನಾಸಕ್ತರು ಧ್ಯಾನ ಕೇಂದ್ರವನ್ನಾಗಿಯೂ ಬಳಕೆ ಮಾಡಿಕೊಳ್ಳಬಹುದು. ಜತೆಗೆ ಭವ್ಯ ಸ್ಮಾರಕ ನಿರ್ಮಿಸುವ ಬದಲು ಭವ್ಯವಾದ ಧ್ಯಾನ ಕೇಂದ್ರ ನಿರ್ಮಿಸಿದರೆ ಸಾರ್ವಜನಿಕರಿಗೂ ಉಪಯೋಗವಾಗುತ್ತದೆ ಎಂದು ಹೇಳಿದರು.

ಪಿರಮಿಡ್ ವಿನ್ಯಾಸ: ಇದೇ ವೇಳೆ ಧ್ಯಾನ ಕೇಂದ್ರ ನಿರ್ಮಾಣದ ವಿನ್ಯಾಸ ಹಾಗೂ ವಿಶೇಷತೆಗಳ ಬಗ್ಗೆ ವರದಿ ಸಲ್ಲಿಕೆ ಮಾಡಿದರು. ಪಿರಮಿಡ್ ವಿನ್ಯಾಸದಲ್ಲಿ ಧ್ಯಾನ ಕೇಂದ್ರ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದರು. ಈ ಪ್ರಸ್ತಾವನೆಯನ್ನು ಪಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಹಸ್ತಾಂತರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ
ಮೋದಿ, ಆರ್‌ಸಿ ಮೋಡಿ.. ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ