ದಲಿತ ದೌರ್ಜನ್ಯ ನಿಲ್ಲದಿದ್ದಲ್ಲಿ ಬೌದ್ಧ ಧರ್ಮ ಸೇರುವೆ : ಮಾಯಾವತಿ

By Suvarna Web Desk  |  First Published Dec 12, 2017, 4:44 PM IST

ದಲಿತರು ಹಾಗೂ ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯವನ್ನು ಆರ್’ಎಸ್ಎಸ್ ಹಾಗೂ ಬಿಜೆಪಿ ನಿಲ್ಲಿಸದೇ ಹೋದರೆ ಕೋಟ್ಯಂತರ ಬೆಂಬಲಿಗರ ಜತೆ ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.


ನಾಗಪುರ (ಡಿ.12): ದಲಿತರು ಹಾಗೂ ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯವನ್ನು ಆರ್’ಎಸ್ಎಸ್ ಹಾಗೂ ಬಿಜೆಪಿ ನಿಲ್ಲಿಸದೇ ಹೋದರೆ ಕೋಟ್ಯಂತರ ಬೆಂಬಲಿಗರ ಜತೆ ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಬಿಎಸ್ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದು ಆಗಿ ಹುಟ್ಟಿದ್ದೇನೆ, ಹಿಂದು ಆಗಿಯೇ ಸಾಯುವುದಿಲ್ಲ ಎಂದು 1935ರಲ್ಲಿ ಅಂಬೇಡ್ಕರ್ ಘೋಷಣೆ ಮಾಡಿದ್ದರು.

Tap to resize

Latest Videos

ಬದಲಾಗಲು ಹಿಂದು ಧಾರ್ಮಿಕ ನಾಯಕರಿಗೆ 21 ವರ್ಷ ಸಮಯಾವಕಾಶ ನೀಡಿದ್ದರು. ಅವರ ಧೋರಣೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ 1956ರಲ್ಲಿ ನಾಗಪುರದಲ್ಲಿ ಅಂಬೇಡ್ಕರ್ ಮತಾಂತರ ಗೊಂಡಿದ್ದರು. ಅದೇ ರೀತಿ ನಾನು ಇಂದು ಬಿಜೆಪಿ, ಆರ್’ಎಸ್ಎಸ್’ಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಬಿಎಸ್’ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

click me!