
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಏನೇ ಮಾಡಿದ್ರೂ ಸುದ್ದಿಯಾಗುತ್ತಾರೆ. ಹೃಷಿಕೇಶ್ನಲ್ಲಿ ರಜನಿಕಾಂತ್ ಸಾಧುಸಂತರಿಗೆ ಭೋಜನದ ವ್ಯವಸ್ಥೆ ಮಾಡಿ ತಾನೊಬ್ಬ ದೈವಭಕ್ತ ಎಂಬುವುದನ್ನ ರುಜುವಾತು ಮಾಡಿದ್ದಾರೆ.
ಹಿಮಾಲಯ ಯಾತ್ರೆಯಲ್ಲಿರುವ ಸೂಪರ್ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಉತ್ತರಾಖಂಡ್ನ ಹೃಷಿಕೇಶದ ದಯಾನಂದ ಆಶ್ರಮದಲ್ಲಿ ನೂರಾರು ಸಾಧುಸಂತರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಸಾಧುಸಂತರಿಗೆ ಉಡುಗೆಗಳನ್ನ ನೀಡಿ ಅವರಿಂದ ಆಶೀರ್ವಾದ ಪಡೆದರು.
ರಾಜಕೀಯ ದೂರದೃಷ್ಟಿಯಿಂದ ಸೂಪರ್ಸ್ಟಾರ್ ರಜನಿ ಹಿಮಾಲಯಕ್ಕೆ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೊಂದು ಅಧ್ಯಾತ್ಮಿಕ ಯಾತ್ರೆ ಎಂದು ರಜನಿಕಾಂತ್ ಸ್ಪಷ್ಟಿಕರಿಸಿದ್ದಾರೆ. ರಾಜಕೀಯ ವಿಚಾರಗಳನ್ನು ಮಾತನಾಡಲು ನಾನು ಇಲ್ಲಿಗೆ ಬಂದಿಲ್ಲ. ಪ್ರತಿವರ್ಷ ಹಿಮಾಲಯಕ್ಕೆ ಬಂದು ಹೋಗುತ್ತೇನೆ. ಅಲ್ಲದೇ ಮನಃಶಾಂತಿ ಬಯಸಿ ಇಲ್ಲಿಗೆ ಬರುತ್ತೇನೆ ಎಂದಿದ್ದಾರೆ.
ಅತ್ತ ರಜನಿಕಾಂತ್ ಸಾಧುಸಂತರಿಗೆ ಭೋಜನ ವ್ಯವಸ್ಥೆ, ಯಾತ್ರೆಯಲ್ಲಿ ಬ್ಯುಸಿಯಾಗಿದ್ರೆ, ಇತ್ತ ಮಧುರೈನಲ್ಲಿ ಟಿಟಿವಿ ದಿನಕರನ್ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ’ ಎಂದು ನಾಮಕರಣ ಮಾಡಿದ್ದಾರೆ. ಒಟ್ಟಾರೆ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.