ಮಾಧ್ಯಮದ ವಿರುದ್ಧದ ಜೈ ಶಾ ಮಾನನಷ್ಟ ಮೊಕದ್ದಮೆಗೆ ಸುಪ್ರಿಂ ತಡೆ

By Suvarna Web DeskFirst Published Mar 15, 2018, 7:02 PM IST
Highlights

ಮಾಧ್ಯಮದ ಬಗ್ಗೆ ಕಿಡಿಕಾರಿದ ಮುಖ್ಯ ನ್ಯಾಯಮೂರ್ತಿಗಳು'ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ವಾಸ್ತವವನ್ನು ಬಿಟ್ಟು ತನ್ನಿಷ್ಟಕ್ಕೆ ತಾನು ಏನು ಬರೆಯುವಂತಿಲ್ಲ. ಈ ಬಗ್ಗೆ ನಾನು ಹಲವು ಸಲ ಹೇಳಿದ್ದೇನೆ ಎಂದು ತಿಳಿಸಿದರು.

ನವದೆಹಲಿ(ಮಾ.15): ಸುಪ್ರೀಂ ಕೋರ್ಟ್  ’ದಿ ವೈರ್’ ಹಾಗೂ ಅದರ ಸುದ್ದಿಗಾರರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಹೂಡಿರುವ ಮಾನನಷ್ಟ ಮೊಕದ್ದಮೆಗೆ  ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಜಯ್ ಶಾ ಗುಜರಾತಿನ ವಿಚಾರಣಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದು ಇದಕ್ಕೆ ಸುಪ್ರೀಂ ಕೋರ್ಟ್ ಏಪ್ರಿಲ್ 12 ರವರೆಗೆ ವಿಚಾರಣೆ ನಡೆಸಬಾರದೆಂದು ಎಂದು ಆದೇಶಿಸಿದೆ. ಅಲ್ಲದೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಪತ್ರಕರ್ತರ ವಿರುದ್ಧ ಸಲ್ಲಿಸಿರುವ ದೂರನ ಬಗ್ಗೆ ಜೈ ಶಾ ಹಾಗೂ ಇತರರು ತಿಳಿಸುವಂತೆ ಸೂಚಿಸಿದೆ.

ಇದೇ ಸಂದರ್ಭದಲ್ಲಿ ಮಾಧ್ಯಮದ ಬಗ್ಗೆ ಕಿಡಿಕಾರಿದ ಮುಖ್ಯ ನ್ಯಾಯಮೂರ್ತಿಗಳು'ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ವಾಸ್ತವವನ್ನು ಬಿಟ್ಟು ತನ್ನಿಷ್ಟಕ್ಕೆ ತಾನು ಏನು ಬರೆಯುವಂತಿಲ್ಲ. ಈ ಬಗ್ಗೆ ನಾನು ಹಲವು ಸಲ ಹೇಳಿದ್ದೇನೆ ಎಂದು ತಿಳಿಸಿದರು.

ಅಮಿತ್ ಶಾ ಪುತ್ರ ಜೈ ಶಾ ಅವರ ಸಂಸ್ಥೆಯು ಹೆಚ್ಚು ಆದಾಯ ಹೊಂದಿರುವುದರ ಬಗ್ಗೆ  ಬಗ್ಗೆ ’ದಿ ವೈರ್’ ಲೇಖನ ಪ್ರಕಟಿಸಿತ್ತು. ಈ ಸಂಬಂಧ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ವಜಾಗೊಳಿಸುವಂತೆ ವೈರ್'ನ ಪತ್ರಕರ್ತರು ಗುಜರಾತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು

click me!