ತಮಿಳುನಾಡಿನಲ್ಲಿ ಮೂರನೇ ಕನ್ನಡಿಗ ವ್ಯಕ್ತಿಯ ದರ್ಬಾರ್

Published : Jan 01, 2018, 09:40 AM ISTUpdated : Apr 11, 2018, 01:03 PM IST
ತಮಿಳುನಾಡಿನಲ್ಲಿ ಮೂರನೇ ಕನ್ನಡಿಗ ವ್ಯಕ್ತಿಯ ದರ್ಬಾರ್

ಸಾರಾಂಶ

ರಜನೀಕಾಂತ್ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡುವುದರೊಂದಿಗೆ ತಮಿಳುನಾಡು ರಾಜಕಾರಣದಲ್ಲಿ ಮೂರನೇ ಕನ್ನಡಿಗ ವ್ಯಕ್ತಿ ಧುಮುಕಿದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಮೂಲಕ ದರ್ಬಾರು ಮಾಡಿದ ಈವರೆಗಿನ ಕನ್ನಡಿಗರು ಎಂದರೆ ಪೆರಿಯಾರ್ ಹಾಗೂ ಜೆ. ಜಯಲಲಿತಾ.

ಚೆನ್ನೈ (ಜ.1): ರಜನೀಕಾಂತ್ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡುವುದರೊಂದಿಗೆ ತಮಿಳುನಾಡು ರಾಜಕಾರಣದಲ್ಲಿ ಮೂರನೇ ಕನ್ನಡಿಗ ವ್ಯಕ್ತಿ ಧುಮುಕಿದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಮೂಲಕ ದರ್ಬಾರು ಮಾಡಿದ ಈವರೆಗಿನ ಕನ್ನಡಿಗರು ಎಂದರೆ ಪೆರಿಯಾರ್ ಹಾಗೂ ಜೆ. ಜಯಲಲಿತಾ.

ಪೆರಿಯಾರ್: ಪೆರಿಯಾರ್ ಅವರು ದ್ರಾವಿಡ ಚಳವಳಿಯ ಪ್ರವರ್ತಕರು. ಇವರು ಜನಿಸಿದ್ದು ತಮಿಳುನಾಡಿನ ಈರೋಡ್‌ನಲ್ಲಾದರೂ ಇವರ ಕುಟುಂಬವು ಮೂಲತಃ ಕರ್ನಾಟಕದಿಂದ ಬಂದಿದ್ದಾಗಿತ್ತು. ಪೆರಿಯಾರ್ ಅವರ ಮೂಲ ನಾಮ ಇ.ವಿ.ರಾಮಸ್ವಾಮಿ. ಇವರ ತಂದೆ ಒಬ್ಬ ಶ್ರೀಮಂತ ಕನ್ನಡಿಗ ವ್ಯಾಪಾರಿಯಾಗಿದ್ದರು. ಪೆರಿಯಾರ್ ಅವರಿಗೆ ತಮಿಳು, ತೆಲುಗು ಜತೆ ಕನ್ನಡವೂ ಚೆನ್ನಾಗಿ ಬರುತ್ತಿತ್ತು.  ಬ್ರಾಹ್ಮಣಶಾಹಿ ವಿರೋಧಿ ದ್ರಾವಿಡ ಚಳವಳಿಯ ಹರಿಕಾರರಾಗಿ ಪೆರಿಯಾರ್ ಹೊರಹೊಮ್ಮಿದರು.

ಜಯಲಲಿತಾ: ಇನ್ನು ತಮಿಳ್ನಾಡು ರಾಜಕೀಯದಲ್ಲಿ ಛಾಪು ಮೂಡಿಸಿದ ಜಯಲಲಿತಾ ಕರ್ನಾಟಕದ ಮಂಡ್ಯ ಜಿಲ್ಲೆ ಮೇಲುಕೋಟೆ ಮೂಲದವರು. ರಜನೀಕಾಂತ್ ಅವರ ರೀತಿ ನಟರಾಗಿಯೇ ಇದ್ದುಕೊಂಡವರು. ನಂತರ ಎಂಜಿಆರ್ ಅವರ ಸಂಪರ್ಕಕ್ಕೆ ಬಂದು ರಾಜಕೀಯವನ್ನು ಕರಗತ ಮಾಡಿಕೊಂಡರು. ಎಂಜಿಆರ್ ಅವರ ನಿಧನದ ಬಳಿಕ ೫ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಅಣ್ಣಾ ಡಿಎಂಕೆ ಅಧಿನಾಯಕಿಯಾಗಿ ಕಾರ್ಯನಿರ್ವಹಿಸಿದರು.

ರಜನೀಕಾಂತ್: ಇದೀಗ ಕರ್ನಾಟಕ ಮೂಲದವರೇ ಆದ ರಜನೀಕಾಂತ್ ಅವರು ತಮಿಳುನಾಡು ರಾಜಕೀಯಕ್ಕೆ ಧುಮುಕಿರುವುದು ವಿಶೇಷವಾಗಿದೆ. 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಜನೀಕಾಂತ್ ಅವರ ಮೂಲ ನಾಮ ಶಿವಾಜಿರಾವ್ ಗಾಯಕವಾಡ್. ಬೆಂಗಳೂರಿನಲ್ಲ ಬಸ್ ಕಂಡಕ್ಟರ್ ಆಗಿದ್ದರು. ನಂತರ ಚೆನ್ನೈಗೆ ವಲಸೆ ಹೋದ ಅವರು ಶ್ರೇಷ್ಠ ತಮಿಳು ನಟರಾಗಿ ಹೊರಹೊಮ್ಮಿ ಜಯಲಲಿತಾ ಉತ್ತರಾಧಿಕಾರಿಯಾಗುವ ಇರಾದೆ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!