ಬಡವರ ನೆರವಿಗೆ ಅಕ್ರಮ ಸಕ್ರಮ ಹೊರತು, ದುರಾಸೆಯ ಬಿಲ್ಡರ್'ಗಳಿಗಲ್ಲ

Published : Dec 29, 2016, 04:13 AM ISTUpdated : Apr 11, 2018, 01:02 PM IST
ಬಡವರ ನೆರವಿಗೆ ಅಕ್ರಮ ಸಕ್ರಮ ಹೊರತು, ದುರಾಸೆಯ ಬಿಲ್ಡರ್'ಗಳಿಗಲ್ಲ

ಸಾರಾಂಶ

ಸಾರ್ವಜನಿಕ ಹಣ ಮತ್ತು ಭೂಮಿಗಳ ಸುತ್ತ ಹಬ್ಬಿಕೊಂಡ ಈ ಸಂಚು ಬೆಂಗಳೂರಿನ ಭ್ರಷ್ಟರಾಜಕಾ​ರಣದ ಕೇಂದ್ರವಾಗಿದೆ. ಅಕ್ರಮ ಸಕ್ರಮ ಕಾರ್ಯ​ಕ್ರಮದ ಮೂಲಕ, ಸರ್ಕಾರವು ಈ ಭ್ರಷ್ಟಾಚಾರದ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.

-ರಾಜೀವ್ ಚಂದ್ರಶೇಖರ್‌ ರಾಜ್ಯ​ಸಭಾ ಸದ​ಸ್ಯ
ನಮ್ಮ ಬೆಂಗಳೂರು ಅವನತಿಯ ಪಥದಲ್ಲಿದೆ - ಇದಕ್ಕೆ ಕಾರಣ ಸರ್ಕಾರದಲ್ಲಿರುವವರು ಮತ್ತು ಸರ್ಕಾರವನ್ನು ಎಗ್ಗಿಲ್ಲದೆ, ಅನಿರ್ಬಂಧಿತವಾದ ಹಿಡಿತ ದಲ್ಲಿಟ್ಟುಕೊಂಡಿರುವ ಬಿಲ್ಡರ್‌ ಮತ್ತು ಗುತ್ತಿಗೆದಾರರ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿ​ದ ದುಷ್ಟಕೂಟ. ಇದಕ್ಕೆ ಸಾಕ್ಷಿ​ಗಳು ಎಲ್ಲೆಡೆಯೂ ಕಾಣುತ್ತಿವೆ - ರಿಯಲ್‌ ಎಸ್ಟೇಟ್‌ ಮತ್ತು ಗುತ್ತಿಗೆದಾರಿಕೆಯಲ್ಲಿ ತೊಡಗಿದ ಶಕ್ತಿಶಾಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಂಖ್ಯೆ, ಸರ್ಕಾರಿ ಅಧಿಕಾರಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿ ಮತ್ತು ವಶಪಡಿಸಿಕೊಳ್ಳಲಾದ ಅಗಾಧ ಪ್ರಮಾಣದ ಹಣ ಮತ್ತು ಚಿನ್ನ - ಇದರ ಸಂಕೇತಗಳು. 

ಸಾರ್ವಜನಿಕ ಹಣ ಮತ್ತು ಭೂಮಿಗಳ ಸುತ್ತ ಹಬ್ಬಿಕೊಂಡ ಈ ಸಂಚು ಬೆಂಗಳೂರಿನ ಭ್ರಷ್ಟರಾಜಕಾ​ರಣದ ಕೇಂದ್ರವಾಗಿದೆ. ಅಕ್ರಮ ಸಕ್ರಮ ಕಾರ್ಯ​ಕ್ರಮದ ಮೂಲಕ, ಸರ್ಕಾರವು ಈ ಭ್ರಷ್ಟಾಚಾರದ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.

 ಈಗಿನ ರೀತಿಯಲ್ಲಿರುವಂತೆ, ಇದರ ಸಂದೇಶ ಹೀಗಿದೆ: ಒಬ್ಬ ಕಾನೂನು ಪಾಲಿಸುವ ಪ್ರಜೆಗಿಂತ ಕಾನೂನು ವಂ​ಚಕರಿಗೆ ಇದರಿಂದ ಹೆಚ್ಚು ಲಾಭವಾಗಲಿದೆ! ಭ್ರಷ್ಟಬಿಲ್ಡರ್‌ಗಳಲ್ಲದೆ ಕೇವಲ ಬಡವರಿಗೆ ಲಾಭವಾಗು​ವಂತಹ ಅಕ್ರಮ ಸಕ್ರಮದ ಪ್ರಸ್ತಾವನೆಯನ್ನು ಪುನಃ ಪರಿಗಣಿಸುವಂತೆ ನಾನು ಅನೇಕ ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಆದರೆ, ನಮ್ಮ ಊಹೆಯಂತೆ, ಇದರಿಂದ ಲಾಭ ಪಡೆಯಲಿರುವ ರಾಜಕಾರಣಿಗಳು, ‘ಎಲ್ಲಾ ಕಾನೂನು ಉಲ್ಲಂಘಿಘಿಸಿದ ಕಟ್ಟಡಗಳು ನಗರದ ಬಡಜನರ ಮನೆಗಳೇ' ಎಂಬ ಸುಳ್ಳುಕತೆ​ಯನ್ನು ಎಲ್ಲರಿಗೂ ಸಾರಿದ್ದಾರೆ. ವಾಸ್ತವವೆಂದರೆ, ಈಗಿರುವ ಅವತಾರದಲ್ಲಿ ಅಕ್ರಮ ಸಕ್ರಮವು ಕುಟಿಲ ರಿಯಲ್‌ ಎಸ್ಟೇಟ್‌ ಡೆವೆಲಪರ್‌ಗಳ ಮತ್ತು ಇತರ ಧನವಂತ ಮನೆ ಮಾಲಿಕ-ಅಪರಾಧಿಗಳ ಎಲ್ಲ ಅಕ್ರಮಗಳನ್ನೂ ಶಾಸನಬದ್ಧಗೊಳಿಸುತ್ತದೆ; ಅಲ್ಲದೆ, ಕಾನೂನು ಪಾಲಿಸುವವರಿಗೆ ಲಾಭವಾಗಿ, ಕಾನೂನು ಉಲ್ಲಂಘಿಘಿಸುವವರಿಗೆ ಶಿಕ್ಷೆಯಾಗಬೇಕೆಂಬ ಶಾಸನದ ನಿಯಮಕ್ಕೆ ಇದು ವಿರುದ್ಧವಾಗಿದೆ. 
ಇದರಲ್ಲಿ ಬಹಳ ಅಸ್ಪಷ್ಟವಾದ ಅನೇಕ ಅಂಶಗಳಿವೆ
-ಮನೆ ಮಾಲಿಕರಿಗೆ ಇಲ್ಲಿ ಶಿಕ್ಷೆಯಾಗಿತ್ತಿದ್ದು, ಬಿಲ್ಡರ್‌ ಮತ್ತು ಡೆವಲಪರ್‌ ಗಳು ತಪ್ಪಿಸಿಕೊಳ್ಳುತ್ತಿದ್ದಾರೆ, ಏಕೆ?


-ಈ ಉಲ್ಲಂಘನೆಗಳನ್ನು ನಿರ್ಲಕ್ಷಿಸಿದ ಅಥವಾ ಉದ್ದೇಶಪೂರ್ವಕ ಮೌನಸಮ್ಮತಿ ನೀಡಿದ ಸರ್ಕಾರದಲ್ಲಿರುವವರ ವಿರುದ್ಧ ಕಾನೂನು ಕ್ರಮದ ಬಗ್ಗೆ ಉಲ್ಲೇಖವಿಲ್ಲ, ಏಕೆ?


-ಈ ಸಕ್ರಮವನ್ನು ಪರಿಶೋಧಿಸುವವರು ಯಾರು?


-ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯಿಂದ ಯಾರಿಗೂ ಅಪಾಯವಿಲ್ಲ ಎಂದು ಸರ್ಕಾರವು ಸಂದೇಶ ಸಾರುತ್ತಿದ್ದು, ಇದೇ ರೀತಿ ಮತ್ತೊಮ್ಮೆ ಭ್ರಷ್ಟಾಚಾರವಾಗುವುದಿಲ್ಲ ಎಂದು ಹೇಳಲಾಗುವುದೆ?


-ಅಂತಿಮವಾಗಿ, ಕಾನೂನು ಉಲ್ಲಂಘನೆಗೆ ಪ್ರೋತ್ಸಾಹ ನೀಡುತ್ತಿದ್ದು, ಇದು ಕೆಟ್ಟಸಂಪ್ರದಾಯಕ್ಕೆ ನಾಂದಿ ಹಾಡುತ್ತಿದೆ ಮತ್ತು ಉಲ್ಲಂಘನಕಾರರಿಗೆ ಮತ್ತು ಅಪರಾಧಿಗಳಿಗೆ ಹೊಸ ಕ್ಷಮಾದಾನದ ಯೋಜನೆಗಳನ್ನು ಸರ್ಕಾರವು ತರುತ್ತಿದ್ದಲ್ಲಿ, ನಾಗರಿಕರು ಕಾನೂನನ್ನು ಏಕೆ ಪಾಲಿಸಬೇಕು ಎಂಬ ಪ್ರಶ್ನೆಯನ್ನು ಹುಟ್ಟಿಹಾಕುತ್ತದೆ. 


ಸರ್ಕಾರವು ತಾನು ಹೇಳುತ್ತಿರುವಂತೆ ಬಡವರ ಸಹಾಯಕ್ಕೆಂದು ಇದನ್ನು ಮಾಡುತ್ತಿರುವ ಬಗ್ಗೆ ನಿಜವಾಗಿದ್ದರೆ, ಅದು ಅಕ್ರಮ ಸಕ್ರಮವನ್ನು ಪುನಃ ಪರಿಶೀಲಿಸಬೇಕು ಮತ್ತು ಬಡವರು ಹಾಗೂ ನಿ​ಜ​ವಾಗಿ ಅರ್ಹರಾದವರು ಮಾತ್ರ ಲಾಭ ಪಡೆಯು​ವಂತೆ ಬಲವಾದ ಅರ್ಹತಾ ನಿಯಮಗಳನ್ನು ರೂಪಿಸಬೇಕು. ಈ ಪುನರ್‌ರಚಿತ ಯೋಜನೆಯಲ್ಲಿ, ನಮ್ಮ ನಗರದಲ್ಲಿ ಬಡವರ ವಸತಿ ಸಾಮರ್ಥ್ಯ​ದಲ್ಲಿರುವ ಅಂತರವನ್ನು ನೇರವಾಗಿ ಪರಿಹರಿಸುವಂತೆ ಹಾಗೂ ಬಡವರಿಗೆ ವಸತಿ ನಿರ್ಮಾಣ ಕಾರ್ಯ​ಕ್ರಮದ ದೂರದೃಷ್ಟಿಇರಬೇಕು. ಪರಿಷ್ಕರಿಸಿದ ಶಾಸನ​ವನ್ನು ರೂಪಿಸಿ, ಉಲ್ಲಂಘನಕಾರರಿಗೆ, ಬಿಲ್ಡರ್‌ ಮತ್ತು ತಪ್ಪಿತಸ್ಥ ಅಧಿಕಾರಿಗಳು ಇಬ್ಬರಿಗೂ ಕಠಿಣವಾದ ಶಿಕ್ಷೆಯ ಮೂಲಕ ಬಲವಾದ ಶಾಸನ ಪಾಲನೆಯನ್ನು ತರಬೇಕು.

ಸರ್ಕಾರವು ನೀಡುತ್ತಿರುವ ಆದಾಯ ಹೆಚ್ಚಿಸುವ ಸಮರ್ಥನೆಯು ಹಾಸ್ಯಾಸ್ಪದವಾಗಿದೆ. ವ್ಯಾಪಕವಾದ ಆದಾಯ ಸೋರಿಕೆ, ಸುಳ್ಳು ಮತ್ತು ಕೃತಕವಾಗಿ ಬೆಲೆ ಹೆಚ್ಚಿಸಲಾದ ಗುತ್ತಿಗೆಗಳು ಮತ್ತು ಹಾಗೆಯೇ ಭೂಮಿಯನ್ನು ನೀಡುತ್ತಿರುವಂತಹ ಸಂದರ್ಭದಲ್ಲಿ ಅಕ್ರಮ ಸಕ್ರಮದಿಂದ ಸಂಪನ್ಮೂಲಗಳ ಹೆಚ್ಚಳ ಎಂಬ ಸರ್ಕಾರದ ಹೇಳಿಕೆ ಕುಚೋದ್ಯವಾಗಿದೆ. ಸಂಪನ್ಮೂಲ​ಗಳನ್ನು ಹೆಚ್ಚಿಸುವ ಉದ್ದೇಶ ಸರ್ಕಾರಕ್ಕೆ ಇದ್ದಲ್ಲಿ, ಅದು ಸರಿಯಾದ ವಲಯದಲ್ಲಿ ಕೇಂದ್ರೀಕರಿಸುತ್ತಿತ್ತು. ಗುತ್ತಿಗೆ ಪ್ರಕ್ರಿಯೆಯ ಸುಧಾರಣೆ, ಸಾರ್ವಜನಿಕ ಆಸ್ತಿಯ ಸೂಕ್ತ ಬಳಕೆ ಮತ್ತು ಸಿಎಜಿ ವರದಿ ಮಾಡಿದಂತೆ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದು. ಅಥವಾ ಸರ್ಕಾರವು, ಇತ್ತೀಚೆಗೆ ದಸ್ತಗಿರಿಯಾದ ತನ್ನ ಕೆಲವು ಪ್ರಧಾನ ಎಂಜಿನಿಯರ್‌ ಗಳನ್ನು ಭ್ರಷ್ಟಹಣ ಹಿಂದಿರುಗಿಸಲು ಕೇಳಬಹುದು. 
ನಗರದ ಅಭಿವೃದ್ಧಿಗೆ ಹಣ ಹೊಂದಿಸಲು ಇದು ವೇಗವಾದ ಮತ್ತು ಉತ್ತಮವಾದ ಮಾರ್ಗವಾಗಿರುತ್ತದೆ. ಕಾನೂನುಬಾಹಿರ ಕೆಲಸಗಳನ್ನು ಶಾಸನಬದ್ಧಗೊಳಿಸುವುದು ಆದಾಯ ತರುವ ಮಾರ್ಗ ಎಂದು ಭ್ರಷ್ಟರಾಷ್ಟ್ರಗಳು ಮಾತ್ರ ವಾದಿಸುತ್ತವೆ. ಈ ರೀತಿಯ ದೇಶಗಳು ವಿಶ್ವದಲ್ಲಿ ಕೆಲವಿದೆ, ಆದರೆ ನಮ್ಮ ಬೆಂಗಳೂರು ಹೀಗಾಗಬೇಕೆ? ಅಕ್ರಮಸಕ್ರಮ ಖಂಡಿತವಾಗಿ ಬಡವರಿಗೆ ಸಹಾಯಕವಾಗಲಿದೆ. 

ಆದರೆ ಒಂದು ಮಾತು ಸ್ಪಷ್ಟವಾಗಿದೆ; ಈಗ ವಿನ್ಯಾಸ ಮಾಡಿರುವಂತೆ ಇದು ಬಿಲ್ಡರ್‌ಗಳನ್ನು, ಶ್ರೀಮಂತರನ್ನು ಮತ್ತು ಬಲಿಷ್ಟರನ್ನು ಅವರ ಅಪರಾಧಗಳಿಂದ ಕಾಪಾಡಲಿದ್ದು, ಅವರಿಗೆ ಶಿಕ್ಷೆಯಾಗುವ ಬದಲಿಗೆ ಅವರಿಗೆ ಲಾಭವಾಗಲಿದೆ. ಅನೇಕ ವಿಧಗಳಲ್ಲಿ, ಅಕ್ರಮಸಕ್ರಮವು ನಮ್ಮ ಸರ್ಕಾರದ ವೈಫಲ್ಯದ ಮತ್ತು ಹೇಗೆ ಪಟ್ಟಭದ್ರ ಹಿತಾಸಕ್ರಿಗಳು ಆಡಳಿತ ವ್ಯವಸ್ಥೆಯ ಪ್ರತಿಯೊಂದು ಅಂಗವನ್ನೂ ಸೇರಿ, ತಿಂದುಹಾಕಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

(ಕನ್ಮಡ ಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!