
ಒಂದು ಕಡೆ ಸರ್ಕಾರವು ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುತ್ತಿದೆಯಾದರೆ, ಇನ್ನೊಂದು ಕಡೆ ಇ-ಕಾಮರ್ಸ್ ಕಂಪನಿಗಳು ನಷ್ಟವನ್ನನುಭವಿಸುತ್ತಿದೆಯೆಂದು ನ್ಯೂಸೇಬಲ್ ವರದಿ ಮಾಡಿದೆ.
2016ರಲ್ಲಿ ಇ-ಕಾಮರ್ಸ್ ಕಂಪನಿಗಳ ವ್ಯವಹಾರ ಹೆಚ್ಚಾಗಿದ್ದರೂ, ರಿಯಾಯಿತಿ, ಪ್ರಚಾರ, ಜಾಹೀರಾತು, ಹಾಗೂ ಬಾಡಿಗೆ ಮುಂತಾದವುಗಳಿಗೆ ಭಾರೀ ಖರ್ಚು ಆಗುತ್ತಿರುವುದು ಕಂಪನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೆಂದು ವರದಿ ಹೇಳಿದೆ.
ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ರಿಟೈಲ್, ಪ್ರಯಾಣ, ಪೀಠೋಪಕರಣ, ಆಹಾರ ಸಾಮಾಗ್ರಿ ಮಾರಾಟದಲ್ಲಿರುವ 14 ಕಂಪನಿಗಳು ಸುಮಾರು 10, 670 ಕೋಟಿ ರೂ.ಗಳಷ್ಟು ನಷ್ಟವನ್ನನುಭವಿಸಿವೆ. ಅವುಗಳಲ್ಲಿ ಸುಮಾರು ಶೇ. 70ರಷ್ಟು ಪಾಲು ಅ ಅಮೆಝಾನ್, ಪೇಟಿಎಮ್ ಹಾಗೂ ಫ್ಲಿಪ್’ ಕಾರ್ಟ್ ನಂತಹ ಕಂಪನಿಗಳದ್ದಾಗಿದೆ ಎಂದು ಹೇಳಲಾಗಿದೆ.
ಜಾಹೀರಾತು ಉದ್ದೇಶಕ್ಕಾಗಿ ಅಮೆಝಾನ್ ರೂ. 2163 ಕೋಟಿ ಹೂಡಿದೆ. ಮುಂದಿನ ದಿನಗಳಲ್ಲಿ ಅದು $5 ಬಿಲಿಯನ್ ಹೂಡಲಿದೆ ಎಂದು ಹೇಳಲಾಗಿದೆ.
ಪೇಟಿಎಮ್ ಜಾಹೀರಾತಿಗಾಗಿ ರೂ.1115 ಕೋಟಿ ಹೂಡಿದ್ದರೆ, ಫ್ಲಿಪ್’ಕಾರ್ಟ್ ರೂ.923 ಕೋಟಿಗಳನ್ನು ವಿನಿಯೋಗಿಸಿದೆ. ಹಾಗೂ ನಾಲ್ಕುಪಟ್ಟು ನಷ್ಟವನ್ನನುಭವಿಸಿವೆ.
ಸದ್ಯಕ್ಕೆ ಭಾರತದಲ್ಲಿ ಸುಮಾರು 35 ಮಿಲಿಯನ್ ಆನ್’ಲೈನ್ ಗ್ರಾಹಕರಿದ್ದಾರೆ, ಆದರೆ ಇವರೆಲ್ಲರೂ ರಿಯಾಯಿತಿ ಹಾಗೂ ಉಚಿತ-ಉಡುಗೊರೆಯಂತಹ ಆಫರ್’ಗಳಿಂದ ಆಕರ್ಷಿತರಾಗುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.