(ವಿಡಿಯೊ) ಚಿನ್ನದಂಗಡಿಗೆ ಕನ್ನ ಹಾಕಲು ಬಂದವನ ಸೊಂಟ ಮುರಿದ ಧೀರ ಮಹಿಳೆ

Published : Dec 29, 2016, 03:23 AM ISTUpdated : Apr 11, 2018, 12:56 PM IST
(ವಿಡಿಯೊ) ಚಿನ್ನದಂಗಡಿಗೆ ಕನ್ನ ಹಾಕಲು ಬಂದವನ ಸೊಂಟ ಮುರಿದ ಧೀರ ಮಹಿಳೆ

ಸಾರಾಂಶ

ಒಂಟಿ ಮಹಿಳೆಯನ್ನೇ ಟಾರ್ಗೆಟ್​​ ಮಾಡಿ ಚಿನ್ನ ದೋಚಲು ಬಂದಿದ್ದ ಕಳ್ಳ. ಚಿನ್ನ ದೋಚಿ ಎಸ್ಕೇಪ್​​ ಆಗುತ್ತಿದ್ದ ಂತೆ   ಕ್ಷಣ ಮಾತ್ರದಲ್ಲಿ  ಹಿಡಿದು ಸರಿಯಾಗಿ ತದುಕಿ ಕಂಬಿ ಹಿಂದೆ ಕಳುಹಿಸಿದ್ದಾಳೆ.

ಆತ ಚಿನ್ನದಂಗಡಿಯಲ್ಲಿದ್ದ  ಒಂಟಿ ಮಹಿಳೆಯನ್ನ ಟಾರ್ಗೆಟ್​​ ಮಾಡಿ ಬಂದಿದ್ದ. ಸಿಕ್ಕಿದ್ದೇ ಚಾನ್ಸ್​​ ಅಂಥ  ಆಕೆಗೆ  ಯಾಮರಿಸಿ ಅಂಗಡಿಯಲ್ಲಿದ್ದ   ಚಿನ್ನವನ್ನು ದೋಚಿ ಎಸ್ಕೇಪ್​​​ ಆಗ್ತಿದ್ದ. ಆದ್ರೆ ಎಸ್ಕೇಪ್​​​ ಆಗ್ತಿದ್ದ ಕಳ್ಳನನ್ನು ರೇಡ್​​ಆ್ಯಂಡ್​ ಆಗಿ ಹಿಡಿದು ಕಂಬಿ ಹಿಂದೆ ಕಳಿಸಿದ್ದಾಳೆ ಈ ಭಲೇ ಹೆಣ್ಣು.

ಈ ಸಿಸಿಟಿವಿ ದೃಶ್ಯವನ್ನೊಮ್ಮೆ ನೋಡಿ, ಯಾರೂ  ಮಾಡದ ಸಾಹಸವನ್ನು   ಈ ಮಹಿಳೆ ಮಾಡಿ ತೋರಿಸಿದ್ದಾಳೆ. ಒಂಟಿ ಮಹಿಳೆಯನ್ನೇ ಟಾರ್ಗೆಟ್​​ ಮಾಡಿ ಚಿನ್ನ ದೋಚಲು ಬಂದಿದ್ದ ಕಳ್ಳ. ಚಿನ್ನ ದೋಚಿ ಎಸ್ಕೇಪ್​​ ಆಗುತ್ತಿದ್ದ ಂತೆ   ಕ್ಷಣ ಮಾತ್ರದಲ್ಲಿ  ಹಿಡಿದು ಸರಿಯಾಗಿ ತದುಕಿ ಕಂಬಿ ಹಿಂದೆ ಕಳುಹಿಸಿದ್ದಾಳೆ.

 

ಇಂಥ ಸಾಹಸಮಯ ದೃಶ್ಯ ಕಂಡು ಬಂದಿದ್ದು  ವಿಜಯನಗರದಲ್ಲರೋ  ಕುದೂರು ಜ್ಯುವೆಲರಿ ಶಾಪ್​ನಲ್ಲಿ. ನೋಟ್​ ಬ್ಯಾನ್​​​ ಎಫೇಕ್ಟ್​​ನ್ನೇ ಲಾಭವಾಗಿ ಮಾಡಿಕೊಂಡ ಕಳ್ಳನೊಬ್ಬ  ನಿನ್ನೆ ವಿಜಯನಗರದಲ್ಲಿರೋ  ಕೂದೂರು  ಜ್ಯೂವಲ್ಲೆರಿ ಶಾಪ್​​ಗೆ ತೆರಳಿದ್ದಾನೆ.  ಸುಮಾರು ಒಂದು ಲಕ್ಷದ 20 ಸಾವಿರ ಮೌಲ್ಯದ ಚಿನ್ನದ ಸರವನ್ನು ತೆಗೆದುಕೊಂಡ ಕಳ್ಳ , ತನ್ನ ಬಳಿಯಿದ್ದ   ಡಿಟ್​ ಕಾರ್ಡ್​​ನ್ನು ಸ್ವೈಪ್​​ ಮಾಡಲು ಅಂಗಡಿ ಮಾಲಕಿಗೆ ಕೊಟ್ಟಿದ್ದಾನೆ.  ಕ್ರೆಡಿಟ್​​ ಕಾರ್ಡ್​​ನ್ನು ಅಂಗಡಿ ಮಾಲಕಿ  ಸ್ವೈಪ್​​ ಮಾಡುತ್ತಿದ್ದಂತೆ  ಚಿನ್ನದ ಸರದ ಜೊತೆಗೆ ಕಳ್ಳ  ಪರಾರಿಯಾಗಲು ಯತ್ನಿಸಿದ್ದಾನೆ.  ಕಳ್ಳನ ಈ ಹೊಂಚನ್ನ ಅರಿತ ಅಂಗಡಿ ಮಾಲಕಿ ಓಡುತ್ತಿದ್ದ ಕಳ್ಳನನ್ನ ಕ್ಷಣಮಾತ್ರದಲ್ಲಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾಳೆ .

ಒಟ್ಟಿನಲ್ಲಿ  ಈ ಗಟ್ಟಿಗಿತ್ತಿಯ ಸಾಹಸವನ್ನು  ನೋಡಿದ ಸಾರ್ವಜನಿಕರು ​ ಅಂಗಡಿ ಮಾಲಕಿ ಶುಭಾಗೆ ಶಹಬಾಷ್ ​ಗಿರಿಯನ್ನು  ಹೇಳಿದ್ದಾರೆ. ಇನ್ನು ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರೋ ವಿಜಯನಗರ ಪೊಲೀಸರು ಆರೋಪಿ ಗಿರೀಶ್​​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ವರದಿ: ಶಶಿಶೇಖರ್, ಸುವರ್ಣ ನ್ಯೂಸ್​​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!