ವಿಧಾನಸಭೆಯಲ್ಲಿ ಪ್ಯೂನ್ ಕೆಲಸ ದಕ್ಕಿಸಿಕೊಂಡ ಶಾಸಕನ ಮಗ!

Published : Dec 23, 2017, 04:07 PM ISTUpdated : Apr 11, 2018, 01:01 PM IST
ವಿಧಾನಸಭೆಯಲ್ಲಿ ಪ್ಯೂನ್ ಕೆಲಸ ದಕ್ಕಿಸಿಕೊಂಡ ಶಾಸಕನ ಮಗ!

ಸಾರಾಂಶ

* 18 ಸಾವಿರ ಅಭ್ಯರ್ಥಿಗಳ ಮಧ್ಯೆ ಶಾಸಕನ ಮಗನೂ ಆಯ್ಕೆ * 10ನೇ ತರಗತಿ ಪಾಸಾದವನಿಗೆ ಕೆಲಸ ಸಿಗಲು ಶಾಸಕರ ಪ್ರಭಾವ  

ಜೈಪುರ: ಕೆಲಸ ಅದರಲ್ಲಿಯೂ, ಸರಕಾರಿ ಕೆಲಸ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ. ಕ್ಲರ್ಕ್ ಪೋಸ್ಟ್ ಎಂದರೂ ಎಂಬಿಎ, ಪಿ.ಎಚ್‌ಡಿ ಪದವೀಧರರೂ ಅರ್ಜಿ ಸಲ್ಲಿಸುತ್ತಾರೆ. ಆದರೆ, ರಾಜಕಾರಣಿಗಳ ಮಕ್ಕಳು, ಸರಕಾರಿ ಕ್ಲರ್ಕ್ ಆಗಿ ನೇಮಕಗೊಳ್ಳುವುದೆಂದರೆ?

ರಾಜಕಾರಣಿಯೊಬ್ಬ ತನ್ನ ಮಗನೂ ದೊಡ್ಡ ನಾಯಕನಾಗಲಿ ಎಂದು ನಿರೀಕ್ಷಿಸುವುದು ಸಾಮಾನ್ಯ. ಆದರೆ, ಈ ಘಟನೆಯಲ್ಲಿ 10ನೇ ತರಗತಿ ಉತ್ತೀರ್ಣನಾದ ಶಾಸಕನ ಮಗ ರಾಜ್ಯ ವಿಧಾನಸಭೆಯಲ್ಲಿ 4ನೇ ದರ್ಜೆಯ ಅಧಿಕಾರಿಯಾಗಿ ಸರಕಾರಿ ಉದ್ಯೋಗ ಪಡೆದಿದ್ದಾನೆ. ಆದರೆ, ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಸಕರ ಪ್ರಭಾವದಿಂದಲೇ ಮಗನಿಗೆ ಕೆಲಸ ನೀಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸುಮಾರು18 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದ ನಾಲ್ಕನೇ ದರ್ಜೆ ಅಧಿಕಾರಿ ಹುದ್ದೆಗೆ ಆಯ್ಕೆಯಾದ 18 ಮಂದಿಯಲ್ಲಿ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರ ಪುತ್ರ ರಾಮಕೃಷ್ಣ 12ನೇಯವರಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಆರಂಭಿಕ ವೇತನ 12,400 ರೂ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕದಲ್ಲಿ ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಈ ಮಾರ್ಕೆಟಿಂಗ್ ಬಗ್ಗೆನೇ ಊರೆಲ್ಲಾ ಮಾತುಕತೆ
Vijayapura: 48 ಕೇಸ್‌ಗಳ 14 ಆರೋಪಿಗಳ ಬಂಧನ; ₹1.17 ಕೋಟಿ ಮೌಲ್ಯದ ಬಂಗಾರ, ನಗದು, ಕಾರು, ಬೈಕ್‌ ವಶ