ಮೇವು ತಿಂದ ಲಾಲು ಜೈಲುಪಾಲು

Published : Dec 23, 2017, 03:44 PM ISTUpdated : Apr 11, 2018, 01:11 PM IST
ಮೇವು ತಿಂದ ಲಾಲು ಜೈಲುಪಾಲು

ಸಾರಾಂಶ

2 ದಶಕಗಳ ಅವಧಿಯಲ್ಲಿ ಮೇವು ಖರೀದಿಯಲ್ಲಿ ಸುಮಾರು ₹900 ಕೋಟಿ ಹಗರಣ ನಡೆದಿದೆಯೆಂದು ಆರೋಪವಿದೆ.ಪ್ರಕರಣದಲ್ಲಿ 34 ಮಂದಿಯ ವಿರುದ್ಧ ಆರೋಪಗಳಿದ್ದು, ಅವರಲ್ಲಿ 11 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.

ರಾಂಚಿ(ಡಿ.23): ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿ  ಸಿಬಿಐ ವಿಶೇಷ ನ್ಯಾಯಾಲಯ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

ಬಿಹಾರದ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಜಗನ್ನಾತ್ ಮಿಶ್ರಾ ದೋಷಿಯೆಂದು ನ್ಯಾಯಾಲಯ ಘೋಷಿಸಿದೆ. ಲಾಕು ಪ್ರಸಾದ್  ಯಾದವ್ ಸೇರಿ ಒಟ್ಟು 15 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದ್ದು, ಇನ್ನೋರ್ವ ಮಾಜಿ ಸಿಎಂ ಜಗನಾಥ್ ಮಿಶ್ರಾ ಸೇರಿದಂತೆ 5 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

2 ದಶಕಗಳ ಅವಧಿಯಲ್ಲಿ ಮೇವು ಖರೀದಿಯಲ್ಲಿ ಸುಮಾರು ₹900 ಕೋಟಿ ಹಗರಣ ನಡೆದಿದೆಯೆಂದು ಆರೋಪವಿದೆ. ಹಗರಣ ಸಂಬಂಧ 6 ಪ್ರಕರಣದ 2 ನೇ ಪ್ರಕರಣ ಇದಾಗಿದೆ.  ಜೈಲು ಶಿಕ್ಷೆಯ ಅಂತಿಮ  ಪ್ರಕಟಣೆಯನ್ನು 2018, ಜನವರಿ 3ರಂದು ಪ್ರಕಟಿಸಲಾಗುತ್ತದೆ.1990-96 ಅವಧಿಯಲ್ಲಿ  ಈ ಹಗರಣ  ನಡೆದಿದ್ದು  ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸೋದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರೀ ಖಜಾನೆಯಿಂದ ನೂರಾರು ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆಯಾದ ಅನುದಾನದ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೆ ಲಾಲು ಪ್ರಸಾದ್‌ ಯಾದವ್‌ ಸೇರಿದಂತೆ ಹಲವು ಸರ್ಕಾರದ ಪ್ರಭಾವಿಗಳು ನುಂಗಿ ಹಾಕಿದ್ದರು.

ಪ್ರಕರಣ ಸಾಗಿದ ಹಾದಿ

1996 ಜನವರಿ - 1000ಕೋಟಿ ಮೇವು ಹಗರಣ ಮಾಧ್ಯಮದಿಂದ ಬಯಲಿಗೆ ..!

1996 ಮಾರ್ಚ್​ - ಪಟನಾ ಹೈಕೋರ್ಟ್​ನಿಂದ ಸಿಬಿಐ ವಿಚಾರಣೆಗೆ ಸೂಚನೆ..!

1997 ಜೂನ್​- ಅಂದಿನ ರಾಜ್ಯಪಾಲ ಕಿದ್ವಾಯಿ ಲಾಲೂ ಮನೆ ಮೇಲೆ ದಾಳಿಗೆ ಸೂಚನೆ

1997-ಮಾರ್ಚ್- ಸಿಬಿಐನಿಂದ ಲಾಲೂ ಮನೆ ದಾಳಿ, ಮಹತ್ವದ ದಾಖಲೆ ವಶ..!

1997- ಜೂನ್​ - ಲಾಲೂ ಪ್ರಸಾದ್​ ಯಾದವ್​ ಸಿಎಂ ಸ್ಥಾನಕ್ಕೆ ರಾಜೀನಾಮೆ..!

1997-ಜೂನ್​ - ಲಾಲೂ ಪತ್ನಿ ರಾಬ್ಡಿದೇವಿ  ಮುಖ್ಯಮಂತ್ರಿಯಾಗಿ ಆಯ್ಕೆ..!

=

ಜೂನ್​- 2000- ರಾಬ್ಡಿದೇವಿಗೆ ಬೇಲ್​, ಲಾಲೂ ಪ್ರಸಾದ್​ ಯಾದವ್​ ಜೈಲು..!

ಮಾರ್ಚ್- 2012- ಅಕ್ರಮ ಹಣ ವರ್ಗಾವಣೆ ಸಂಬಂಧ  ಸಿಬಿಐನಿಂದ ಕೇಸ್​ ದಾಖಲು

ಸೆಪ್ಟೆಂಬರ್​- 2013- ಸಿಬಿಐನಿಂದ ಎಫ್​ಐಆರ್​ ಹಿನ್ನೆಲೆ ಸಂಸದ ಸ್ಥಾನ ಅಸಿಂಧು..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್