ಚುನಾವಣೆ ಹೊಸ್ತಿಲಲ್ಲೇ ಬಿಗ್ ಶಾಕ್ : ಕಾಂಗ್ರೆಸ್ ಸೇರಿದ ಬಿಜೆಪಿಗರು

By Web DeskFirst Published Oct 26, 2018, 10:54 AM IST
Highlights

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್ ಶಾಕ್ ಒಂದು ಎದುರಾಗಿದೆ. ಬಿಜೆಪಿ ಮುಖಂಡರನೇಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. 

ಜೈಪುರ :  ರಾಜಸ್ಥಾನದಲ್ಲಿ ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ.  ರಾಹುಲ್ ಗಾಂಧಿ ಸಿಕರ್ ನಲ್ಲಿ ರ್ಯಾಲಿ ನಡೆಸಿದ ಬೆನ್ನಲ್ಲೇ ಬಿಜೆಪಿಯಲ್ಲಿದ್ದ ಕೆಲ ಜಾಟ್ ಮುಖಂಡರು ಇದೀಗ ಕಾಂಗ್ರೆಸಿನತ್ತ ಮುಖ ಮಾಡಿದ್ದಾರೆ. 

ಬಿಜೆಪಿ ಮಾಜಿ  ಶಾಸಕ ನಾರಾಯಣ ಬೀಡ, ಮಾಜಿ ಶಾಸಕಿ ಉಷಾ ಪುನಿಯಾ ಹಾಗೂ ವಿಜಯ್ ಪುನಿಯಾ, ಮೂಲ್ ಚಂದ್ ಮೀನಾ, ಬಿಂದು ಚೌಧರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಶಾಸಕ ರಾಜ್ ಕುಮಾರ್ ಶರ್ಮಾ ಅವರು ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಶೇಕಾವತಿ ಪ್ರದೇಶದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿ ಜಾಟ್ ಸಮುದಾಯವಿದ್ದು, ಇದೀಗ ಜಾಟ್ ಮುಖಂಡರ ಕಾಂಗ್ರೆಸ್ ಸೇರ್ಪಡೆಯಿಂದ  ಹೆಚ್ಚಿನ ಬಲ ಬಂದಂತಾಗಿದೆ. 

ಇನ್ನು ರಾಜ್ ಕುಮಾರ್ ಶರ್ಮಾ ಹಾಗೂ ಬಿಂದು ಚೌಧರಿ ಅವರು ಮೂಲತಃ ಕಾಂಗ್ರೆಸಿಗರಾಗಿದ್ದು 2008ರಲ್ಲಿ ರಾಜ್ ಕುಮಾರ್ ಶರ್ಮ ಬಿಎಸ್ ಪಿ ಸೇರ್ಪಡೆಯಾಗಿದ್ದರು.  ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಮಂತ್ರಿಗಿರಿಯನ್ನು ಪಡೆದುಕೊಂಡಿದ್ದರು. 

ಇದೇ ವೇಳೆ ಬಿಂದು ಚೌಧರಿ ಬಿಜೆಪಿ ಸೇರಿದ್ದರು. ಆದರೆ ಇದೀಗ ಇವರೆಲ್ಲರೂ ಕೂಡ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಚುನಾವಣೆಗೆ ವೇಳೆಯೇ ಶಾಕ್ ನೀಡಿದಂತಾಗಿದೆ. 

click me!