ಬೆಂಕಿಯಲ್ಲಿ ನರಳುತ್ತಿದ್ದವರ ಪಾಲಿಗೆ ದೇವರಾದ ಡೆಲಿವರಿ ಬಾಯ್!

By Web DeskFirst Published Dec 19, 2018, 3:02 PM IST
Highlights

ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದ ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು, ಆಸ್ಪತ್ರೆಯಲ್ಲಿ ಬೆಂಕಿ ಅಪಘಾತದಲ್ಲಿ ಸಿಲುಕಿದ್ದ ರೋಗಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ.

ಮುಂಬೈ[ಡಿ.19]: ಮುಂಬೈನ ಅಂಧೇರಿಯಲ್ಲಿರುವ ಇಎಸ್ ಈಸಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಆರೂವರೆ ತಿಂಗಳ ಹಸುಗೂಸು ಸೇರಿದಂತೆ ಹಲವರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೀಗ ಇಲ್ಲಿ ನಡೆದ ಮಾನವೀಯ ಘಟನೆಯೊಂದು ಬಹುತೇಕರನ್ನು ಭಾವುಕರನ್ನಾಗಿಸಿದೆ. ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದ ಯುವಕನೊಬ್ಬ ತನ್ನ ಕೆಲಸವನ್ನು ಗಣನೆಗೆ ತೆಗೆದುಕೊಳ್ಳದೆ, ಪ್ರಾಣದ ಹಂಗನ್ನೇ ತೊರೆದು 10ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾನೆ. 

ಫುಡ್ ಡೆಲಿವರಿ ಕಂಪೆನಿ ಸ್ವಿಗೀಯಲ್ಲಿ ಕಾರ್ಯ ನಿರ್ವಹಿಸುವ 20 ವರ್ಷದ ಸಿದ್ಧೂ ಹುಮಾನಾಬಾಡೆ ಎಂಬಾತ ಸೋಮವಾರ ಸಂಜೆ ಫುಡ್ ಡೆಲಿವರಿ ಮಾಡಲೆ ಹೊರಟಿದ್ದ. ಆದರೆ ಮರೋಲ್ ಪ್ರದೇಶಕ್ಕೆ ತಲುಪುತ್ತಿದ್ದಂತೆಯೇ ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ತಗುಲಿದ್ದು, ದಡ್ಡ ಹೊಗೆ ಬರುತ್ತಿರುವುದನ್ನು ನೋಡಿದ್ದಾನೆ. ಈ ವೇಳೆ ಬೇರೇನನ್ನೂ ಯೋಚಿಸದ ಆತ, ಸಮಯ ವ್ಯರ್ಥ ಮಾಡದೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಹಾಗೂ 10 ಮಂದಿ ರೋಗಿಗಳನ್ನು ಸುರಕ್ಷಿತವಾಗಿ ಹೊರ ತರುವಲ್ಲಿ ಯಶಸ್ವಿಯಾಗಿದ್ದಾನೆ.

ಆಸ್ಪತ್ರೆಯಲ್ಲಿ ಬೆಂಕಿ: ಆರು ತಿಂಗಳ ಹಸುಳೆ ಸೇರಿ 8 ಮಂದಿ ಸಾವು, 28 ಮಂದಿ ಗಂಭೀರ

ಏಣಿ ಮೂಲಕ ಕೆಳಗೆ ಕೊಂಡೊಯ್ಯತ್ತಿದ್ದ ಇಬ್ಬರು ರೋಗಿಗಳು ಕೆಳಗೆ ಬಿದ್ದ ಪರಿಣಾಮ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಸಿದ್ಧೂ ಆರೋಗ್ಯವೂ ಹದಗೆಟ್ಟಿದ್ದು, ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಾಗಿ ಮಾತನಾಡಿರುವ ಸಿದ್ಧೂ 'ಆನು ಮೂರನೇ ಸಂತಸ್ತಿನಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ಏಣಿ ಇಟ್ಟಿದ್ದೆ, ಆದರೆ ದುರಾದೃಷ್ಟವಶಾತ್ ಏಣಿ ಮುರಿದು ಮಹಿಳೆ ಕೆಳ ಬಿದ್ದರು. ನಾನು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸೇರಿ 5 ಅಂತಸ್ತಿನ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಸುರಕ್ಷಿತವಾಗಿ ಹೊರ ತಂದಿದ್ದೇನೆ' ಎಂದಿದ್ದಾರೆ.

ದಟ್ಟ ಹೊಗೆಯಿಂದ ಉಸಿರಾಡಲಾಗಲಿಲ್ಲ

ನಾನು ರೋಗಿಗಳ ಕಿರುಚಾಟ ಕೇಳಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಅಳವಡಿಸಿದ್ದ ಏಣಿ ಮೂಲಕ ಮೇಲೇರಿದೆ ಹಾಗೂ ಕಲ್ಲಿನ ಸಹಾಯದಿಂದ ಗಾಜು ಒಡೆದೆ. ಅಲ್ಲಿ ಅದೆಷ್ಟು ಹೊಗೆ ತುಂಬಿತ್ತೆಂದರೆ, ಒಳಗಿದ್ದವರಿಗೆ ಕಣ್ಣು ತೆರೆಯಲೂ ಆಗುತ್ತಿರಲಿಲ್ಲ ಅಲ್ಲದೇ ಉಸಿರಾಡಲು ಕಷ್ಟವಾಗುತ್ತಿತ್ತು.  ಸರಿ ಸುಮಾರು ಮೂರು ಗಂಟೆಗಳ ಕಾಲ ನಾನು ರೋಗಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡಿತು, ರಕ್ಷಣಾ ಸಿಬ್ಬಂದಿಗೆ ಈ ಕುರಿತಾಗಿ ತಿಳಿಸಿದೆ. ಚಿಕಿತ್ಸೆಗೆಂದು ನನ್ನನ್ನು ಆಸ್ಪತ್ರೆಗೆ ಭರ್ತಿ ಮಾಡಿದಾಗಲೂ ನನ್ನ ಕಿವಿಯಲ್ಲಿ ಬೆಂಕಿಯ ನಡುವೆ ಸಿಲುಕಿಕೊಂಡ ರೋಗಿಗಳ ಕೂಗು ಪ್ರತಿಧ್ವನಿಸುತ್ತಿತ್ತು. ಅಪಾಯದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ನಾನು ಯಾವತ್ತೂ ಮುಂದಿರುತ್ತೇನೆ. ನಾನಿರುವ ಕಾಲೋನಿಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡುತ್ತಿದ್ದರೆ, ವರನ್ನು ನಾನೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ’ ಎಂದಿದ್ದಾರೆ.

ಅಚ್ಚರಿಗೊಳ್ಳದ ತಂದೆ, ತಾಯಿ!

ಸಿದ್ಧೂ ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ವೈದ್ಯರು ತಿಳಿಸಿದ್ದಾಋಎ. ಇನ್ನು ತನ್ನ ತಮ್ಮನ ಕುರಿತಾಒಗಿ ಮಾತನಾಡಿರುವ ಸಿದ್ಧೂರವರ ಅಣ್ಣ, 'ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಗೆ ನನ್ನ ತಮ್ಮ ಫೋನ್ ಮಾಡಿ ತಲೆ ನೋವಿನ ವಿಚಾರ ತಿಳಿಸಿದ. ವಿವರ ಕೇಳಿದಾ ಎಲ್ಲವನ್ನೂ ತಿಳಿಸಿದ. ಆದರೆ ಆತನ ಈ ಧೈರ್ಯದ ಕೆಲಸದ ಬಗ್ಗೆ ಕೇಳಿ ಅಪ್ಪ ಅಮ್ಮನಿಗೆ ಯಾವುದೇ ಅಚ್ಚರಿಯಾಗಲಿಲ್ಲ, ಯಾಕೆಂದರೆ ಆತ ಯಾರಾದರೂ ತೊಂದರೆಗೀಡಾದರೆ ಸಹಾಯ ಮಾಡುತ್ತಿರುತ್ತಾನೆ' ಎಂದಿದ್ದಾರೆ.

click me!