ನರೇಂದ್ರ ಮೋದಿ ವಿಶ್ವದ ಅತ್ಯಂತ ಭ್ರಷ್ಟಾಚಾರಿ ಪ್ರಧಾನಿ ಎಂದ ಬಿಜೆಪಿ ಸಚಿವ

Published : Dec 20, 2017, 09:20 PM ISTUpdated : Apr 11, 2018, 12:50 PM IST
ನರೇಂದ್ರ ಮೋದಿ ವಿಶ್ವದ ಅತ್ಯಂತ ಭ್ರಷ್ಟಾಚಾರಿ ಪ್ರಧಾನಿ ಎಂದ ಬಿಜೆಪಿ ಸಚಿವ

ಸಾರಾಂಶ

.

ಜೈಪುರ(ಡಿ.20): ರಾಜಸ್ಥಾನದ ಬಿಜೆಪಿ ಸಚಿವರೊಬ್ಬರು ಪ್ರಧಾನಿ ಮೋದಿಯನ್ನು ಹೊಗಳುವ ಬರದಲ್ಲಿ ವಿಶ್ವದ ಅತ್ಯಂತ ಭ್ರಷ್ಟಾಚಾರದ ಪ್ರಧಾನಿ ಎಂದು ತೆಗಳಿರುವ ಘಟನೆ ಸಾರ್ವಜನಿಕ ಸಮಾರಂಭದಲ್ಲಿ ನಡೆದಿದೆ.

ರಾಜಸ್ಥಾನದ ವಸುಂಧರಾ ರಾಜೆ ಸಿಂಧಿಯಾ ಸರ್ಕಾರದಲ್ಲಿ  ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿರುವ ಜಸ್ವಂತ್ ಸಿಂಗ್ ಯಾದವ್ ಈ ಹೇಳಿಕೆ ನೀಡಿ ಪೇಚೆಗೀಡಾಗಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇಂದು ನಮಗೆ ಅತ್ಯುತ್ತಮವಾದ ದಿನ. ನಮ್ಮ ಗೌರವಾನ್ವಿತ ಪ್ರಖ್ಯಾತ ಪ್ರಧಾನಿಮಂತ್ರಿಗಳು ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನಮಂತ್ರಿಗಳು. ಅವರ ನಾಯಕತ್ವದಲ್ಲಿ ಅವರ ನಾಯಕತ್ವದಲ್ಲಿ ಎರಡೂ ರಾಜ್ಯಗಳಲ್ಲೂ ದೊಡ್ಡ ಬಹುಮತವನ್ನೇ ಸಾಧಿಸಿದ್ದೇವೆ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರು ಈ ರೀತಿ ಹೇಳುವಾಗ ತಪ್ಪನ್ನು ಸರಿಪಡಿಸಲು ಅಕ್ಕಪಕ್ಕದಲ್ಲಿ ಯಾರು ಇರಲಿಲ್ಲ. ಅಲ್ಲದೆ ಕೊನೆಯಲ್ಲಿ ಏನು ಹೇಳಿದರೆಂದು ಗಮನಿಸಲಿಲ್ಲ. ಸಚಿವರ ಈ ರೀತಿ ನೀಡಿದ ಹೇಳಿಕೆ  ರಾಜಸ್ಥಾನದೆಲ್ಲಡೆ ವೈರಲ್ ಆಗಿದ್ದು ಬಿಜೆಪಿ ಹಾಗೂ ಮೋದಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!