176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳಲು ಸರ್ಕಾರ ಸೂಚನೆ

Published : Dec 20, 2017, 08:20 PM ISTUpdated : Apr 11, 2018, 01:09 PM IST
176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳಲು ಸರ್ಕಾರ ಸೂಚನೆ

ಸಾರಾಂಶ

ಉತ್ತಮ ಸಾಧನೆ ತೋರದ 176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ (ಡಿ.20): ಉತ್ತಮ ಸಾಧನೆ ತೋರದ 176 ಸರ್ಕಾರಿ ಅಧಿಕಾರಿಗಳಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಜು.01 2014 ರಿಂದ ಅ. 31 2017 ರವರೆಗೆ ಕೇಂದ್ರ ನಾಗರೀಕ ಸೇವೆ ಸಲ್ಲಿಸುತ್ತಿರುವ  ಗ್ರೂಪ್ ಎ ನ 53 ಅಧಿಕಾರಿಗಳು ಮತ್ತು ಗ್ರೂಪ್ ಬಿ 123 ಅಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ಇಲಾಖೆ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.

ಅಖಿಲ ಭಾರತ ಸೇವಾ ನಿಯಮಗಳನ್ವಯ, ಸೇವೆಯ 15 ಹಾಗೂ 25 ವರ್ಷಗಳಲ್ಲಿ ಪ್ರತಿ ಅಧಿಕಾರಿಯ ಸಾಧನೆಗಳ ಪರಿಶೀಲನೆ ನಡೆಯುತ್ತದೆ. ಅಧಿಕಾರಿಯ ಸೇವಾ ದಾಖಲೆ, ವಾರ್ಷಿಕ ಗೌಪ್ಯ ವರದಿ (ಏಸಿಆರ್) ಹಾಗೂ ಹಿರಿಯ ಅಧಿಕಾರಿಗಳು ನಡೆಸುವ ಪರಿಶೀಲನಾ ವರದಿಗಳನ್ನಾಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ಇಂತಹ ಅಪರೂಪದ ಕ್ರಮವನ್ನು ಸುಮಾರು 10 ವರ್ಷಗಳ ಹಿಂದೆ ಕೈಗೊಳ್ಳಲಾಗಿತ್ತು. ಇದು ದಂಡನೆಯಾಗಿರದೇ, ಕೇವಲ ಸಮರ್ಥವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗುವ ಕ್ರಮವಾಗಿದೆ. ಕಡ್ಡಾಯ ನಿವೃತ್ತಿಗೊಳಲ್ಪಟ್ಟ ಅಧಿಕಾರಿಗೆ, ನಿವೃತ್ತಿಯೋತ್ತರ ಸವಲತ್ತುಗಳು ಯಥಾರೀತಿ ಸಿಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭಾರತ ಭೇಟಿ: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ಮೆಸ್ಸಿ, ಬಂಗಾಳದಲ್ಲಿ ಫ್ಯಾನ್ಸ್ ದಾಂಧಲೆ, ಕ್ಷಮೆಯಾಚಿಸಿದ ಮಮತಾ
ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ