ಎಕ್ಸ್'ಪ್ರೆಸ್ ರೈಲಿನ ಟಿಕೆಟ್'ಗೆ ರಾಜಧಾನಿ ಟ್ರೈನ್ ಪ್ರಯಾಣ!

Published : Mar 22, 2017, 05:19 PM ISTUpdated : Apr 11, 2018, 01:08 PM IST
ಎಕ್ಸ್'ಪ್ರೆಸ್ ರೈಲಿನ ಟಿಕೆಟ್'ಗೆ ರಾಜಧಾನಿ ಟ್ರೈನ್ ಪ್ರಯಾಣ!

ಸಾರಾಂಶ

ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.

ನವದೆಹಲಿ(ಮಾ.22): ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲ್ವೆಗಳಿಗಾಗಿ ಕಾಯ್ದಿರಿಸಿದ ಟಿಕೆಟ್‌ಗೆ ಸೀಟು ಖಾತ್ರಿಯಾಗದೇ ಸಂದರ್ಭದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ರಾಜಧಾನಿ ಅಥವಾ ಶತಾಬ್ದಿ ರೈಲುಗಳಲ್ಲೂ ಪ್ರಯಾಣ ಬೆಳೆಸುವ ಅವಕಾಶ ಮಾಡಿಕೊಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.

ಪರೀಕ್ಷಾರ್ಥವಾಗಿ 6 ಮಾರ್ಗಗಳ ರೈಲುಗಳಲ್ಲಿ ಜಾರಿಗೊಳಿಸಲಾದ ಯೋಜನೆ ಯಶಸ್ವಿ ಬಳಿಕ ಎಲ್ಲ ರೈಲು ಮಾರ್ಗಗಳಿಗೂ ವಿಸ್ತರಣೆಯಾಗುತ್ತಿದೆ.

ರಾಷ್ಟ್ರದ ಬಹುತೇಕ ಕಡೆ ಸಂಚರಿಸಲಿರುವ ಸುವಿಧಾ, ದುರೊಂತೊ, ಶತಾಬ್ದಿ ಮತ್ತು ರಾಜಧಾನಿಯಂಥ ಪ್ರೀಮಿಯರ್ ರೈಲುಗಳಲ್ಲಿ ದಿನವೊಂದಕ್ಕೆ ಖಾಲಿಯೇ ಉಳಿಯುವ 1.5 ಲಕ್ಷ ಸೀಟಿನ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವವೆನಿಸಿದೆ. ಹಲವು ಕಾರಣಗಳಿಗಾಗಿ ಪ್ರಯಾಣಿಕರು ರೈಲ್ವೆ ಟಿಕೆಟ್ ರದ್ದು ಮಾಡುವುದರಿಂದ ಪ್ರತಿ ವರ್ಷ 7,500 ಕೋಟಿ ಹಣವನ್ನು ರೈಲ್ವೆ ಇಲಾಖೆ ಮರುಪಾವತಿ ಮಾಡುತ್ತಿದೆ. ಇದನ್ನು ಕಡಿಮೆಗೊಳಿಸುವ ನೂತನ ಯೋಜನೆ ಸಹಕಾರಿಯಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್