ಶೀಘ್ರದಲ್ಲೇ ರೈಲ್ವೆ ಇಲಾಖೆಯ ಮೊಬೈಲ್ ಆ್ಯಪ್

By internet deskFirst Published Oct 6, 2016, 11:55 AM IST
Highlights

ನವದೆಹಲಿ(ಅ.06): ಕೇಂದ್ರ ರೈಲ್ವೆ ಇಲಾಖೆ ಶೀಘ್ರದಲ್ಲೇ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡುವ ‘ಮೊಬೈಲ್ ಆ್ಯಪ್’ ಅನ್ನು ಸಿದ್ಧಪಡಿಸಲಿದೆ. ಮೊಬೈಲ್ ಆ್ಯಪ್‌ನಲ್ಲಿ ಸಂಪೂರ್ಣ ಪ್ರಯಾಣದ ವಿವರ; ಟಿಕೆಟ್ ಬುಕಿಂಗ್‌ನಿಂದ ಟ್ಯಾಕ್ಸಿ ಬುಕಿಂಗ್‌ವರೆಗೆ, ಆಹಾರ, ಮಲಗುವ ಕೋಣೆಯನ್ನೂ ಕಾಯ್ದಿರಿಸುವ ಸೌಲಭ್ಯ ಇದೆ. ದೂರು ಸಲ್ಲಿಕೆ, ಡಿಜಿಟಲ್ ಮನರಂಜನೆ, ಹೊಟೇಲ್, ವಿಮಾನ ಟಿಕೆಟ್ ಬುಕಿಂಗ್ ಸೇರಿದಂತೆ ಸಾಕಷ್ಟು ಸೇವೆಗಳನ್ನು ಆ್ಯಪ್‌ನಲ್ಲಿ ಪಡೆಯಬಹುದು ಎಂದು ರೈಲ್ವೆ ಅಕಾರಿ ತಿಳಿಸಿದ್ದಾರೆ.

ತುರ್ತು ಸೇವೆಗಾಗಿ ವೈದ್ಯಕೀಯ ಹಾಗೂ ಪೊಲೀಸರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಈ ಸೇವೆಗಾಗಿ ರೈಲ್ವೆ ಇಲಾಖೆ ವಾರ್ಷಿಕವಾಗಿ 500 ಕೋಟಿ ಮೀಸಲಿರಿಸಿದೆ.

Latest Videos

click me!