ಪ್ರಧಾನಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯ: ರಾಹುಲ್!

By Web DeskFirst Published Mar 27, 2019, 3:43 PM IST
Highlights

ಪ್ರಧಾನಿಗೇಕೆ ವಿಶ್ವ ರಂಗಭೂಮಿ ದಿನದ ಶುಭಾಶಯ ತಿಳಿಸಿದರು ರಾಹುಲ್?| ASAT ಕ್ಷಿಪಣಿ ತಂತ್ರಜ್ಞಾನ ಘೋಷಿಸಿದ ಪ್ರಧಾನಿ ಕುರಿತು ವ್ಯಂಗ್ಯವಾಡಿದ ರಾಹುಲ್ ಗಾಂಧಿ| DRDO ವಿಜ್ಞಾನಿಗಳನ್ನು ಹಾಡಿ ಹೊಗಳಿದ ರಾಹುಲ್ ಗಾಂಧಿ| ಮೋದಿ ಘೋಷಿಸಿದ ರೀತಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯ|

ನವದೆಹಲಿ(ಮಾ.27): ASAT ಕ್ಷಿಪಣಿ ತಂತ್ರಜ್ಞಾನ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

DRDO ವಿಜ್ಞಾನಿಗಳನ್ನು ಕೊಂಡಾಡಿರುವ ರಾಹುಲ್ ಗಾಂಧಿ, ಇದು ಭಾರತೀಯ ವಿಜ್ಞಾನಿಗಳ ಸತತ ಪರಿಶ್ರಮದ ಫಲ ಎಂದು ಹೊಗಳಿದ್ದಾರೆ.

Well done DRDO, extremely proud of your work.

I would also like to wish the PM a very happy World Theatre Day.

— Rahul Gandhi (@RahulGandhi)

ಇದೇ ವೇಳೆ ಈ ಸಾಧನೆ ಘೋಷಣೆ ಮಾಡಿರುವ ಪ್ರಧಾನಿ ಮೋದಿ ಅವರನ್ನು ಕುರಿತು ವ್ಯಂಗ್ಯವಾಡಿರುವ ರಾಹುಲ್, ಮೋದಿ ಘೋಷಿಸಿದ ರೀತಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯ ತಿಳಿಸಿದ್ದಾರೆ.

ಇಂದು ವಿಶ್ವ ರಂಗಭೂಮಿ ದಿನವಾಗಿದ್ದು, ಈ ಅವಕಾಶ ಬಳಸಿಕೊಂಡ ರಾಹುಲ್, ಮತ್ತೊಬ್ಬರ ಸಾಧನೆಯನ್ನು ತಮ್ಮದೆಂದು ಬಿಂಬಿಸುವ ಮೋದಿ ನಾಟಕ ಮೆಚ್ಚುವಂತದ್ದು ಎಂದು ವ್ಯಂಗ್ಯವಾಡಿದ್ದಾರೆ.

ಮಿಶನ್ ಶಕ್ತಿ 2011ರಲ್ಲಿ ಆರಂಭವಾಗಿದ್ದು, ಅಂತರಿಕ್ಷ ಸುರಕ್ಷತೆಗಾಗಿ ASAT ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಗೆ ಅಂದಿನ ಸರ್ಕಾರ ಮತ್ತು DRDO ಜಂಟಿ ಯೋಜನೆಗೆ ಚಾಲನೆ ನೀಡಿತ್ತು.

click me!