ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆಯಲು ಪ್ರಾದೇಶಿಕ ಪಕ್ಷಗಳು ಒಂದಾಗಿವೆ. ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ, ಪಾಕಿಸ್ತಾನವೇ ಬೆಸ್ಟ್ ಎಂದು ವಿವಾದ ಸೃಷ್ಟಿಸಿದ್ದಾರೆ. RCB ವಿರುದ್ಧ ಸೋಲಿನ ಬೆನ್ನಲ್ಲೇ ಕಾರ್ತಿಕ್ ತಲೆದಂಡವಾಗಿದೆ. ಪ್ರವಾಹದಿಂದ ತತ್ತರಿಸಿರುವ ಜನತೆಗೆ ಸೇನೆ ಸಹಾಯ ಹಸ್ತ ಚಾಚಿದೆ. ರಾಧಿಕಾ ಕುಮಾರಸ್ವಾಮಿ ಹಳೇ ವಿಡಿಯೋ ವೈರಲ್, ಮತ್ತೆ ಅಖಾಡಕ್ಕಿಳಿಯುತ್ತಾರಾ ಜಾನ್ ಸೀನಾ ಸೇರಿದಂತೆ ಅಕ್ಟೋಬರ್ 16ರ ಟಾಪ್ 10 ಸುದ್ದಿ ವಿವರ.
ಧಾರಾಕಾರ ಮಳೆ ನಡುವೆ ಸಾವಿರಾರು ಜೀವ ಕಾಪಾಡಿದ ಸೇನೆಗೊಂದು ಸಲಾಂ...
ಹೈದರಾಬಾದ್ ಕಂಡು ಕೇಳರಿಯದ ಮಳೆಗೆ ನಲುಗಿ ಹೋಗಿದೆ. ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭಾರತೀಯ ಸೇನೆ ಮಾತ್ರ ಎಲ್ಲರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ.
ಕಣಿವೆರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ: ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆಯಲು ಪಣ...
ಕಣಿವೆ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಪಣತೊಟ್ಟಿವೆ. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫರೂಕ್ ಅಬ್ದುಲ್ಲ ಅವರು ಗುರುವಾರ ಈ ಸಂಬಂಧ ಸಭೆ ನಡೆಸಿದ್ದಾರೆ.
RCB ವಿರುದ್ಧ ಸೋಲಿನ ಬೆನ್ನಲ್ಲೇ ಕಾರ್ತಿಕ್ ತಲೆದಂಡ; ಕೆಕೆಆರ್ ತಂಡಕ್ಕೀಗ ಹೊಸ ನಾಯಕ ಆಯ್ಕೆ.!...
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಭರ್ಜರಿಯಾಗಿಯೇ ನಡೆಯುತ್ತಿದ್ದು, ಈಗಾಗಲೇ ಅರ್ಧ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಿರುವಾಗಲೇ ಪ್ಲೇ ಆಫ್ ಪ್ರವೇಶಕ್ಕಾಗಿ ಎಲ್ಲಾ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.ಇನ್ನು ಟೂರ್ನಿಯ ಮಧ್ಯದಲ್ಲಿಯೇ ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಕೆಕೆಆರ್ ತಂಡಕ್ಕೆ ಹೊಸ ನಾಯಕ ನೇಮಕವಾಗಿದ್ದಾರೆ.
ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಎಕೌಂಟ್ ಖಾಲಿ, ಬೈಕ್ ಮಾರಬೇಕಷ್ಟೆ ಎಂದ ಬಾಲಿವುಡ್ ಸಿಂಗರ್...
ಕೊರೋನಾ ಸಂಕಷ್ಟ, ಲಾಕ್‌ಡೌನ್ ಮಧ್ಯೆ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಬಗ್ಗೆ ಆದಿತ್ಯ ನಾರಾಯಣ್ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯಕ ಅಕ್ಷರಶಃ ನನ್ನ ಸೇವಿಂಗ್ಸ್ ಖಾಲಿಯಾಗಿದೆ ಎಂದಿದ್ದಾರೆ.
ವೈರಲ್ ಆಗುತ್ತಿದೆ ರಾಧಿಕಾ ಕುಮಾರಸ್ವಾಮಿ ಈ ಹಳೇ ವಿಡಿಯೋ; ನೀವೇ ನೋಡಿ!...
ಬ್ಲಾಕ್ ಆ್ಯಂಡ್ ರೆಡ್ ಡ್ರೆಸ್‌ನಲ್ಲಿ ಲೈಲಾ ಹಾಡಿಗೆ ಹೆಜ್ಜೆ ಹಾಕಿದೆ ರಾಧಿಕಾ ಕುಮಾರಸ್ವಾಮಿ ಎರಡು ವರ್ಷದ ಹಳೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ರಾಧಿಕಾ ಈಗಲ್ಲೂ ಟ್ರೆಂಡ್ ಸೆಟ್ ಅನ್ನುವ ಮಾತು ನಿಜವೇ ಹೌದು. ಅದಕ್ಕೆ ಈ ವಿಡಿಯೋನೇ ಸಾಕ್ಷಿ...
ಕಾರ್ಮಿಕರನ್ನು ಕರೆತರಲು ಫ್ಲೈಟ್ ಟಿಕೆಟ್ ಕಳಿಸಿದ ಹುಬ್ಬಳ್ಳಿ ಉದ್ಯಮಿ...
ಯಶಸ್ವಿ ಉದ್ಯಮದ ಹಿಂದೆ ಪರಿಣಿತ ಕಾರ್ಮಿಕರಿರುತ್ತಾರೆ. ಯಾವ್ಯಾವುದೋ ರಾಜ್ಯಗಳಿಂದ ಬಂದು ಕಾರ್ಖಾನೆಗಳಲ್ಲಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಿರುವವರಿದ್ದಾರೆ. ಕೊರೋನಾದಿಂದಾಗಿ ಎಲ್ಲ ಕಾರ್ಯಾಣೆಗಳೂ ತತ್ಕಾಲಿಕವಾಗಿ ಮುಚ್ಚಿದಾಗ ಕಾರ್ಮಿಕರೆಲ್ಲ ತಮ್ಮ ಸ್ವಗ್ರಾಮಗಳಿಗೆ ಹೋಗಿದ್ದಾರೆ.
WWEಗೆ ಮತ್ತೆ ಎಂಟ್ರಿ ಕೊಡ್ತಾರಾ ಅಂಡರ್‌ಟೆಕರ್ & ಜಾನ್ಸೀನಾ..! ..
WWEಗೆ ಮತ್ತೆ ಎಂಟ್ರಿ ಕೊಡ್ತಾರಾ ಅಂಡರ್‌ಟೆಕರ್ & ಜಾನ್ಸಿನಾ | WWE ಪ್ರೇಕ್ಷಕರನ್ನ ರಂಜಿಸ್ತಾರಾ ಲೆಜೆಂಡ್ ಫೈಟರ್ಸ್..?
ಕೊರೋನಾ ಸಂಕಷ್ಟದಿಂದ ಹೊರಬಂದ ಭಾರತದ ಆಟೋ ಇಂಡಸ್ಟ್ರಿ; ಶೇ.29ರಷ್ಟು ಚೇತರಿಕೆ!...
2019ರಲ್ಲಿ ಭಾರತದ ಆಟೋ ಇಂಡಸ್ಟ್ರಿ ಪಾತಾಳಕ್ಕೆ ಕುಸಿದಿತ್ತು. ವಾಹನ ಮಾರಾಟ ಕಳೆದೆರಡು ದಶಕದಲ್ಲಿ ಕಾಣದಂತ ಕುಸಿತ ಕಂಡಿತ್ತು. ಜಿಎಸ್‌ಟಿ ಕಡಿತಗೊಳಿಸಿ, ಸುಂಕ ಕಡಿತಗೊಳಿಸಿ ಎಂಬ ಹಲವು ಮನವಿಗಳು ಕೇಂದ್ರ ಸರ್ಕಾರದ ಕೈಸೇರಿತ್ತು. ಇದರ ಬೆನ್ನಲ್ಲೇ ಕೊರೋನಾ ಹೊಡೆತ ನೀಡಿತ್ತು. ಇದೀಗ ಭಾರತೀಯ ಆಟೋಮೊಬೈಲ್ ಕಂಪನಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಭಾರತಕ್ಕಿಂತ ಪಾಕಿಸ್ತಾನವೇ ಬೆಸ್ಟ್' ಚಾರ್ಟ್ ಹಂಚಿಕೊಂಡ ರಾಹುಲ್ ಗಾಂಧಿ!...
ಬಿಜೆಪಿ ಸರ್ಕಾರದ ಮತ್ತೊಂದು ದೊಡ್ಡ ಸಾಧನೆ, ಕೊರೋನಾ ನಿರ್ವಹಣೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ'! ಈ ರೀತಿ ವ್ಯಂಗ್ಯವಾಡಲು ಹೋಗಿ ಇದೀಗ ರಾಹುಲ್ ಗಾಂಧಿ ಅವರೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶತ್ರುಘ್ನ ಸಿನ್ಹಾ ಪುತ್ರ ಲವ್ ಸಿನ್ಹಾ, ಶರದ್ ಯಾದವ್ ಪುತ್ರಿಗೆ ಬಿಗ್ ಗಿಫ್ಟ್ ಕೊಟ್ಟ ಕಾಂಗ್ರೆಸ್!...
ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ರಾಜಕಾರಣದ ತಂತ್ರಗಾರಿಕೆ ಮೆರೆದಿದೆ. ಹಿಂದಿ ಚಿತ್ರರಂಗದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಮತ್ತು ಲೋಕತಾಂತ್ರಿಕ್ ಜನತಾ ದಳ ಮುಖಂಡ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.