'ಭಾರತಕ್ಕಿಂತ ಪಾಕಿಸ್ತಾನವೇ ಬೆಸ್ಟ್' ಚಾರ್ಟ್ ಹಂಚಿಕೊಂಡ ರಾಹುಲ್ ಗಾಂಧಿ!

By Suvarna News  |  First Published Oct 16, 2020, 5:02 PM IST

ಕೇಂದ್ರ ಸರ್ಕಾರ ಮತ್ತು ಮೋದಿ ಮೇಲೆ ವ್ಯಂಗ್ಯವಾಡಲು ಹೋಗಿ ರಾಹುಲ್ ಎಡವಟ್ಟು/  ಕೊರೋನಾ ನಿರ್ವಹಣೆಯಲ್ಲಿ ಭಾರತದಕ್ಕಿಂತ ಪಾಕಿಸ್ತಾನವೇ ಉತ್ತಮ/ ಸೋಶಿಯಲ್ ಮೀಡಿಯಾದಲ್ಲಿ ಚಾರ್ಟ್ ಶೇರ್ ಮಾಡಿಕೊಂಡ ರಾಹುಲ್


ನವದೆಹಲಿ(ಅ. 16)  ' ಬಿಜೆಪಿ ಸರ್ಕಾರದ ಮತ್ತೊಂದು ದೊಡ್ಡ ಸಾಧನೆ, ಕೊರೋನಾ ನಿರ್ವಹಣೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ'! ಈ ರೀತಿ ವ್ಯಂಗ್ಯವಾಡಲು ಹೋಗಿ ಇದೀಗ ರಾಹುಲ್ ಗಾಂಧಿ ಅವರೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

'ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೋವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ'  ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಜಿಡಿಪಿಯ ಹೋಲಿಕೆ ಗ್ರಾಫ್ ಹಂಚಿಕೊಂಡಿರುವ ರಾಹುಲ್ ಈ ರೀತಿ ಟ್ವೀಟ್ ಮಾಡಿದ್ದಾರೆ.  ಇದು ಇಂಟರ್ ನ್ಯಾಶನಲ್ ಮಾನಿಟರಿ ಫಂಡ್ ಬಿಡುಗಡೆ ಮಾಡಿರುವ ಡೇಟಾ ಎನ್ನಲಾಗಿದೆ.

Latest Videos

undefined

ರಾಹುಲ್ ಗಾಂಧಿಗೆ ದೇಶಭಕ್ತಿ ಪಾಠ ಹೇಳಿದ ಗಾಲ್ಫರ್

ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಭಾರತದ  2020-21ರ ಐಎಂಎಫ್ ಬೆಳವಣಿಗೆಯ ಅಂದಾಜನ್ನು  ತೋರಿಸುವ ಚಾರ್ಟ್ ಅನ್ನು ಟ್ಯಾಗ್ ಮಾಡುವ ಮೂಲಕ ಗಾಂಧಿ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ.

ಸಹಜವಾಗಿಯೇ ಕೊರೋನಾ ಎಲ್ಲ ದೇಶಗಳ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಕೇಂದ್ರ ಸರ್ಕಾರ ಪರಿಹಾರದ ಕ್ರಮಗಳನ್ನು ಒಂದಾದ ಮೇಲೆ ಒಂದು ಘೊಷಣೆ ಮಾಡುತ್ತಿದೆ.  ಈ ಹಿಂದೆ ಸಹ ನೋಟ್ ಬ್ಯಾನ್, ಜಿಎಸ್‌ಟಿ, ಕೃಷಿ ಮಸೂದೆ ವಿಚಾರಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಈಗ  ಮೋದಿ ಸರ್ಕಾರ ತೆರಳುವ ಭರದಲ್ಲಿ ನಮಗಿಂತ ಪಾಕಿಸ್ತಾನವೇ ದೊಡ್ಡದು ಎಂಬರ್ಥದಲ್ಲಿ ಮಾತನಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾತ್ತಿದೆ.

Another solid achievement by the BJP government.

Even Pakistan and Afghanistan handled Covid better than India. pic.twitter.com/C2kILrvWUG

— Rahul Gandhi (@RahulGandhi)
click me!