ರಾಹುಲ್ ಗಾಂಧಿ ಜೊತೆ ಗುರುತಿಸಿಕೊಳ್ಳಲು ಡಿಕೆಶಿಗೆ ಮುಜುಗರ?

By Web DeskFirst Published Jun 25, 2019, 10:45 AM IST
Highlights

ರಾಹುಲ್ ಗಾಂಧಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಡಿ ಕೆ ಶಿವಕುಮಾರ್? ಡಿನ್ನರ್ ಪಾರ್ಟಿಗೆ ರಾಹುಲ್‌ಗೆ ಆಹ್ವಾನ ನೀಡದ ಡಿಕೆಶಿ | 

ಏಕಾಏಕಿ ದಿಲ್ಲಿಗೆ ಬಂದು ಮೂರು ದಿನ ಕುಳಿತಿದ್ದ ಡಿ ಕೆ ಶಿವಕುಮಾರ್‌, ದಕ್ಷಿಣ ಭಾರತದ ಎಲ್ಲ ಕಾಂಗ್ರೆಸ್‌ ಸಂಸದರನ್ನು ಊಟಕ್ಕೆಂದು ಸಹೋದರ ಡಿ ಕೆ ಸುರೇಶ್‌ರ ಮನೆಗೆ ಕರೆದಿದ್ದರು. ಡಿನ್ನರ್‌ ಮೀಟಿಂಗ್‌ನ ಮೂಲ ಉದ್ದೇಶ, ಕೇರಳದಿಂದ ಗೆದ್ದಿರುವ ರಾಹುಲ್ ಗಾಂಧಿ ತಮ್ಮ ಮನೆಗೆ ಬಂದು ಊಟ ಮಾಡಿ ಹೋದರೆ, ಯಾರಾರ‍ಯರಿಗೆ ಏನೇನು ರಾಜಕೀಯ ಸಂದೇಶ ಕೊಡಬೇಕೋ ಅದನ್ನು ಕೊಡಬಹುದು ಎಂಬುದಾಗಿತ್ತು.

ರಾಹುಲ್ ರಾಜೀನಾಮೆ; ಕಾಂಗ್ರೆಸ್‌ಗೆ ಸಂಕಷ್ಟ

ಆದರೆ ಡಿಕೆಶಿ ಎಷ್ಟೇ ಪ್ರಯತ್ನಪಟ್ಟರೂ ರಾಹುಲ್ ಗಾಂಧಿ ಊಟದ ಮೀಟಿಂಗ್‌ ಕಡೆ ಹಾಯಲಿಲ್ಲ. ಕೊನೆಗೆ ಪತ್ರಕರ್ತರು ಕೇಳಿದಾಗ ಸಾಹೇಬರು ಕೊಟ್ಟಉತ್ತರ, ‘ನಾನು ರಾಹುಲ್ ರನ್ನು ಕರೆದೇ ಇಲ್ಲ’ ಎಂದು. ಡಿಕೆಶಿ ಎಷ್ಟೇ ಕಾಂಗ್ರೆಸ್‌ ನಿಷ್ಠನಾದರೂ ದಿಲ್ಲಿ ನಾಯಕರಿಗೆ ಅವರ ಜೊತೆ ಗುರುತಿಸಿಕೊಳ್ಳಲು ಸ್ವಲ್ಪ ಮುಜುಗರ ಇದ್ದಂತಿದೆ.

ಖರ್ಗೆ ಇಲ್ಲದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ

ರಾಹುಲ್‌ ಗಾಂಧಿ ಬೆಂಗಳೂರು ಗ್ರಾಮಾಂತರದಿಂದ ಗೆಲ್ಲಬಹುದು ಎಂದು ಸರ್ವೇಗಳು ಹೇಳುತ್ತಿದ್ದಾಗ ಕೂಡ ಅವರು ಕೇರಳದ ವಯನಾಡಿಗೆ ಹೋಗಿ ನಿಂತಿದ್ದರು. ಇಮೇಜ್‌ ಸುಧಾರಣೆಗೆ ಡಿಕೆ ಸಹೋದರರು ತೆರೆಯ ಹಿಂದೆ ಮತ್ತು ಮುಂದೆ ಇನ್ನಷ್ಟುಕೆಲಸ ಮಾಡಬೇಕಾದ ಅಗತ್ಯ ಇದ್ದಂತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಕ್ಲಿಕ್ ಮಾಡಿ

click me!