ರಾಹುಲ್ ಬಜ್ಜಿ ತಿಂದ ಹೋಟೆಲ್‌ಗೆ ಈಗ ಅವರದ್ದೇ ಹೆಸರು ನಾಮಕರಣ! ವ್ಯಾಪಾರವೂ ಭರ್ಜರಿ!

Published : Feb 16, 2018, 10:23 AM ISTUpdated : Apr 11, 2018, 01:06 PM IST
ರಾಹುಲ್ ಬಜ್ಜಿ ತಿಂದ ಹೋಟೆಲ್‌ಗೆ ಈಗ ಅವರದ್ದೇ ಹೆಸರು ನಾಮಕರಣ! ವ್ಯಾಪಾರವೂ ಭರ್ಜರಿ!

ಸಾರಾಂಶ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಿರ್ಚಿ ಮಂಡಕ್ಕಿ ಸವಿದಿದ್ದ ಪುಟ್ಟ ಕಲ್ಮಲಾದ ಗೂಡಂಗಡಿ ಹೋಟೆಲ್ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಹುಲ್ ಭೇಟಿಯಿಂದ ದೇಶಕ್ಕೇ ಪರಿಚಯವಾದ ಈ ಹೋಟೆಲ್‌ಗೆ ‘ರಾಹುಲ್ ಗಾಂಧಿ ಕ್ಯಾಂಟಿನ್’ ಎಂದು ನಾಮಕರಣ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ರಾಯಚೂರು (ಫೆ.16): ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಿರ್ಚಿ ಮಂಡಕ್ಕಿ ಸವಿದಿದ್ದ ಪುಟ್ಟ ಕಲ್ಮಲಾದ ಗೂಡಂಗಡಿ ಹೋಟೆಲ್ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಹುಲ್ ಭೇಟಿಯಿಂದ ದೇಶಕ್ಕೇ ಪರಿಚಯವಾದ ಈ ಹೋಟೆಲ್‌ಗೆ ‘ರಾಹುಲ್ ಗಾಂಧಿ ಕ್ಯಾಂಟಿನ್’ ಎಂದು ನಾಮಕರಣ ಮಾಡಲು
ಮಾಲೀಕರು ನಿರ್ಧರಿಸಿದ್ದಾರೆ.

ಜನಾಶೀರ್ವಾದ ಯಾತ್ರೆಯ 3 ನೇ ದಿನ ಅಂದರೆ ಫೆ.12 ರಂದು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಎಚ್.ಎಂ.ರೇವಣ್ಣ ಸೇರಿ ಇತರರು ರಾಯಚೂರಿನಿಂದ ದೇವದುರ್ಗಕ್ಕೆ ತೆರಳುವಾಗ ಕಲ್ಮಲಾ ಗ್ರಾಮದ ಈ ಟಿನ್ ಶೆಡ್ಡಿನ ಪುಟ್ಟ ಹೋಟೆಲ್‌ನಲ್ಲಿ ಮಂಡಕ್ಕಿ ಒಗ್ಗರಣಿ, ಮಿರ್ಚಿ
ಭಜ್ಜಿಯನ್ನು ಸವಿದಿದ್ದರು. ಅಲ್ಲದೆ ಹೋಟೆಲ್ ಮಾಲೀಕ ಮೌಲಾಸಾಬ್ ಮತ್ತು ಹೋಟೆಲ್‌ನಲ್ಲಿದ್ದ ಮಹಿಳೆಯ ಕುಶಲೋಪರಿ ವಿಚಾರಿಸಿದ್ದರು.

ರಾಹುಲ್ ಗಾಂಧಿ ಅವರ ಭೇಟಿಯಿಂದಾಗಿ ದಿನಬೆಳಗಾಗುವುದರೊಳಗೆ ಮೌಲಾಸಾಬ್ ಅವರ ಹೋಟೆಲ್ ದೇಶಾದ್ಯಂತ ಪರಿಚಿತವಾಗಿದ್ದು, ಅದೃಷ್ಟವೇ ಕುಲಾಯಿಸಿದೆ. ನಿತ್ಯ 1000 ರಿಂದ 1800 ರು. ವ್ಯಾಪಾರ
ಆಗುತ್ತಿದ್ದ ಹೋಟೆಲ್‌ನಲ್ಲಿ ಈಗ 3000 ರೂ.ವರೆಗೆ ವಹಿವಾಟು ನಡೆಯುತ್ತಿದೆ. ಮೊದಲಿಗೆ ಅಬ್ಬಾಖಾನ್ ಹೋಟೆಲ್ ಎಂದು ಕರೆಯುತ್ತಿದ್ದ ಊರಿನ ಜನ ರಾಹುಲ್ ಭೇಟಿ ಬಳಿಕ ‘ರಾಹುಲ್ ಗಾಂಧಿ ಹೋಟೆಲ್’ ಎಂದೇ
ಕರೆಯುತ್ತಿದ್ದಾರೆ. ಹೀಗಾಗಿ, ರಾಹುಲ್ ಭೇಟಿಯ ನೆನಪಿನಾರ್ಥವಾಗಿ ಹೋಟೆಲ್‌ಗೆ ರಾಹುಲ್‌ಗಾಂಧಿ ಅವರ ಹೆಸರನ್ನಿಟ್ಟು ಅವರಿಗೆ ಕೃತಜ್ಞತೆ  ಸಲ್ಲಿಸಲು ಮಾಲೀಕರು ಮುಂದಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿವಾದಕ್ಕೀಡಾದ ಅನಂತ್ ಅಂಬಾನಿಗೆ ನೀಡಿದ ಫ್ರೊಫೆಸರ್ ಸ್ಥಾನ, ಇಂಗ್ಲೆಂಡ್ ಯೂನಿವರ್ಸಿಟಿ ಸ್ಪಷ್ಟನೆ
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ಅನಾಹುತ: ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇಗೆ ಬಡಿದ ಬಾಲ! ಡಿಜಿಸಿಎ ತನಿಖೆ