
ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದಂತೆ ಕರ್ನಾಟಕವು ನಿಗದಿಪಡಿಸಿದಷ್ಟು ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿತ್ತು. ಇದರ ತೀರ್ಪು ಕೂಡ ಶುಕ್ರವಾರವೇ ಹೊರಬೀಳುವ ನಿರೀಕ್ಷೆ ಇದೆ.
ಸರ್ಕಾರದ ವಾದವೇನು
ನ್ಯಾಯಾಧಿಕರಣದ ಐತೀರ್ಪನ್ನು ಕರ್ನಾಟಕ ಪ್ರಮುಖವಾಗಿ ಎರಡು ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಮೊದಲನೆಯದಾಗಿ, ಬೆಂಗಳೂರಿನ ಮೂರನೇ ಒಂದು ಭಾಗವನ್ನು ಮಾತ್ರ ಕಾವೇರಿ ಸೀಮೆಗೆ ತಂದು ಮೂರನೇ ಎರಡು ಭಾಗವನ್ನು ಹೊರಗಿಟ್ಟಿದ್ದು ಹಾಗೂ ಕೇವಲ 1.75 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ನೀಡಿರುವುದು. ಎರಡನೆಯದಾಗಿ ಬಿಳಿಗುಂಡ್ಲುವಿಗೆ ಸಾಮಾನ್ಯ ಜಲ ವರ್ಷದಲ್ಲಿ 192 ಟಿಎಂಸಿ ನೀರನ್ನು ಕರ್ನಾಟಕ ಖಾತ್ರಿ ಪಡಿಸಬೇಕು ಎಂದು ನ್ಯಾಯಾಧಿಕರಣ ಸೂಚಿಸಿದ್ದು. ಇದನ್ನು 110 ಟಿಎಂಸಿಗೆ ಇಳಿಸಬೇಕು ಎಂಬುದು ರಾಜ್ಯದ ವಾದ. ಕರ್ನಾಟಕ 192 ಟಿಎಂಸಿ ನೀರು ನೀಡಿದರೆ ಸಾಕಾಗುವುದಿಲ್ಲ, ನಮಗೆ ಹೆಚ್ಚು ನೀರು ಬೇಕು ಎಂಬುದು ತಮಿಳುನಾಡಿನ ಪ್ರಮುಖ ಬೇಡಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.