
ಬೆಂಗಳೂರು (ಫೆ.02): ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿತ್ತು. ರಾಜ್ಯದ ಪೋಲಿಸರಿಗೂ ದೊಡ್ಡ ಗೌರವವಿತ್ತು. ಆದರೆ ಇವತ್ತು ಕಾಂಗ್ರೆಸ್ ಸರ್ಕಾರದಿಂದ ಇದೆಲ್ಲಾ ಮಣ್ಣುಪಾಲಾಗಿದೆ. ಸಂತೋಷ್ ಬಿಜೆಪಿ ಕಾರ್ಯಕರ್ತ ಅಲ್ಲ ಅಂತಾರೆ. ಇದನ್ನ ಹೇಳೋಕೆ ಗೃಹ ಸಚಿವರಿಗೆ ಅಧಿಕಾರ ಕೊಟ್ಟವರು ಯಾರು? ಕೊಲೆ ಮಾಡಿದವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೌದೋ ಇಲ್ಲವೋ ಹೇಳಿ? ಎಂದು ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ಬೇರೆ ಯಾವ ರಾಜ್ಯದಲ್ಲೂ ಈ ರೀತಿ ನಿರಂತರವಾಗಿ ಕೊಲೆ ನಡೆಯುತ್ತಿಲ್ಲ. ದೇಶ ವಿರೋಧಿ ಸಂಘಟನೆಗಳ ಕಾರ್ಯಕರ್ತರ ಕೇಸ್'ಗಳನ್ನ ತೆಗೆದು ಹಾಕಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಿಎಂ ಹಾಗೂ ಗೃಹ ಸಚಿವರು ಯಾವಾಗಲೂ ಸುಳ್ಳನ್ನೇ ಹೇಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇದು 24 ನೇ ಹಿಂದೂ ಕಾರ್ಯಕರ್ತನ ಹತ್ಯೆ. ಕರ್ನಾಟಕ ಕಾನೂನು ಸುವ್ಯವಸ್ಥೆ'ಗೆ ನಂಬರ್ ಒನ್ ಆಗಿತ್ತು. ಆದ್ರೆ ಸದ್ಯ ಸಿಎಂ, ಗೃಹ ಸಚಿವರು ಹಾಗು ಕೆಂಪಯ್ಯ ಪೊಲೀಸ್ ಇಲಾಖೆಯನ್ನು ಹಾಳು ಮಾಡಿದ್ದಾರೆ. ಸಂತೋಷ್ ಬಿಜೆಪಿ ಕಾರ್ಯಕರ್ತ ಅಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಕೊಲೆಗಾರ ವಾಸಿಂ ತಂದೆ ಖಾದರ್ ಕಾಂಗ್ರೆಸ್ ಕಾರ್ಯಕರ್ತ ಅಲ್ವಾ ಅದನ್ನ ಹೇಳಿ? ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೊಲೆ ಮಾಡಿಸಿದ್ದಾನೆ. ಅದೇ ಖಾದರ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಜೊತೆಗೆ ತನ್ನ ಫ್ಲೆಕ್ಸ್ ಹಾಕಿಸಿಕೊಂಡಿದ್ದಾನೆ ಖಾದರ್. ಪಾಪುಲರ್ ಫ್ರಂಟ್ ಹಾಗು ಕೆಎಫ್ಡಿ ಮೇಲಿನ ಕೇಸ್'ಗಳನ್ನು ಯಾವ ಕಾರಣಕ್ಕೆ ಸಿಎಂ ತೆಗದಿದ್ದಾರೆ? ಕೇಸ್ ತೆಗೆದಿದ್ದರಿಂದ ಅವರು ಹೊರಗೆ ಬಂದು ಮತ್ತೆ ಕೊಲೆ ಮಾಡುತ್ತಿದ್ದಾರೆ. ಕೊಲೆ ನಡೆದ ನಿಮಿಷಗಳಲ್ಲಿ ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದೆ ಎಂದು ಸರ್ಟಿಫಿಕೇಟ್ ಕೊಡುತ್ತಾರೆ ಎಂದಿದ್ದಾರೆ.
ಸಿಎಂ ಒಂದು ಫಾರ್ಮುಲ ಇಟ್ಟುಕೊಂಡು ಹಿಂದೂ ಕಾರ್ಯಕರ್ತರ ಕೊಲೆ ನಡೆದು ವೇಳೆ ವೈಯಕ್ತಿಕ ಕಾರಣ ಎಂದು ಹೇಳುತ್ತಾರೆ. ಸತ್ತ ಮನೆಯಲ್ಲೂ ರಾಜ್ಯ ಸರ್ಕಾರ ಅಪಪ್ರಚಾರ ಮಾಡುತ್ತೀರಲ್ಲಾ ನಾಚಿಕೆ ಆಗಲ್ವಾ.? ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.