'ಸಂತೋಷ್ ಸಾವಿನ ಸೂತಕದ ನಡುವೆಯೂ ಖಾದರ್ ಮನೆಯಲ್ಲಿ ಪಾರ್ಟಿ ಮಾಡಿದ ಮಾಡಿದ ಸಿಎಂ'

By Suvarna Web DeskFirst Published Feb 2, 2018, 1:10 PM IST
Highlights

ನಿನ್ನೆ ಸಿಎಂ ಸಿದ್ದರಾಮಯ್ಯ  ಸಚಿವ ಖಾದರ್ ಮನೆಗೆ ಡಿನ್ನರ್'ಗೆ ಹೋಗಿದ್ರು. ಖಾದರ್ ಮನೆಯ ಬಳಿಯೇ ಸಂತೋಷ್ ಮನೆ ಇದೆ. ಸಾಂತ್ವನ ಹೇಳುವ ಕೆಲಸವನ್ನೂ ಸಿದ್ದರಾಮಯ್ಯ ಮಾಡಿಲ್ಲ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಫೆ.02): ನಿನ್ನೆ ಸಿಎಂ ಸಿದ್ದರಾಮಯ್ಯ  ಸಚಿವ ಖಾದರ್ ಮನೆಗೆ ಡಿನ್ನರ್'ಗೆ ಹೋಗಿದ್ರು. ಖಾದರ್ ಮನೆಯ ಬಳಿಯೇ ಸಂತೋಷ್ ಮನೆ ಇದೆ. ಸಾಂತ್ವನ ಹೇಳುವ ಕೆಲಸವನ್ನೂ ಸಿದ್ದರಾಮಯ್ಯ ಮಾಡಿಲ್ಲ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಿ ಕೊಲೆಗಳು ನಡೆದಿವೆಯೊ ಅದೇ ಏರಿಯಾಗೆ ಹೊಗಿ ಡಿನ್ನರ್ ಮಾಡಿ ಸಿಎಂ ಸಂಭ್ರಮಿಸಿದ್ದಾರೆ. ಗಣಪತಿ ಕೇಸಲ್ಲಿ ಕೆಜಿ ಜಾರ್ಜ್ ಆರೋಪಿಯಾಗಿದ್ದರು. ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಅವರಿಗೆ ಮರ್ಯಾದೆ ನೀಡಲಿಲ್ಲ. ಜಿ.ಪರಮೇಶ್ವರ್ ಅವರಿಗೆ ಪೊಲೀಸ್ ಮಂತ್ರಿ ಎಂದು ಕರೆದ್ರು ಪರಮೇಶ್ವರ್ ದಲಿತ ಅನ್ನೋ ಕಾರಣಕ್ಕೆ ಘನತೆ ನೀಡದೇ ಗೃಹ ಸಚಿವ ಸ್ಥಾನ ಬದಲಾಯಿಸಿದ್ರು. ರಾಮಲಿಂಗ ರೆಡ್ಡಿ ಗೃಹ ಸಚಿವರಾದ ನಂತರ ಎಲ್ಲಾ ಕೊಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದು, ಕೊಲೆ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ. ರಾಮಲಿಂಗ ರೆಡ್ಡಿ ಯಾವಾಗ ತನಿಖಾಧಿಕಾರಿ ಆಗಿದ್ದೀರಿ. ಶೇಮ್ ಶೇಮ್ ಗೃಹ ಮಂತ್ರಿಗಳೆ... ಎಂದು ಶೋಭ ಕರಂದ್ಲಾಜೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಅರಾಜಕತೆ ತಾಂಡವವಾಡುತ್ತಾ ಇದೆ. ದೇಶದಲ್ಲಿ ಹೆಚ್ಚು ಅಪರಾಧ ನಡೆಯುವ ನಗರವಾಗಿ ರಾಜ್ಯ ಸರ್ಕಾರ ಬೆಂಗಳೂರನ್ನು ಮಾಡಿದೆ.  ಸರ್ಕಾರ ಮನಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಸ್ವಜನ ಪಕ್ಷಪಾತ ಮಾಡುವ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.  ಕಳೆದ ನಾಲ್ಕು ವರ್ಷಗಳಲ್ಲಿ 3500 ಕೊಲೆ ನಡೆದಿದೆ. ಟಾರ್ಗೆಟ್ ಮಾಡಿ ಬಿಜೆಪಿ ಕಾರ್ಯಕರ್ತರ ಕೊಲೆ ನಡೀತಾ ಇದೆ. ಅಪರಾಧಿಗಳಿಗೆ ಸರ್ಕಾರ ಕಂಡರೆ ಭಯ ಇರಬೇಕು ಆದ್ರೆ ಅಪರಾಧಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ಯಾವ ಜಿಲ್ಲೆಗೆ ಸಿಎಂ ಹೋಗ್ತಾರೋ ಅದೇ ಜಿಲ್ಲೆಗಳಲ್ಲಿ ಕೊಲೆಗಳು ನಡೀತಾ ಇದೆ. ಮಂಗಳೂರು ಹೋದಾಗ ದೀಪಕ್ ಕೊಲೆ ಆಗುತ್ತೆ. ಅದೇ ರೀತಿ ಪರೇಶ್ ಮೇಸ್ತಾ, ದಾನಮ್ಮ ಅತ್ಯಾಚಾರ ಕೂಡ ಸಿಎಂ ಭೇಟಿ ವೇಳೆ ನಡೆದಿವೆ.

 

click me!