
ಚಂಡೀಗಢ: ಅತ್ಯಾಚಾರ ಆರೋಪದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಸ್ವಯಂಘೋಷಿತ ದೇವಮಾನವ, ರಾಮ್ ರಹೀಂ ಸಿಂಗ್‌ನ ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.
ರೋಹ್ಟಕ್ ಜಿಲ್ಲಾ ಜೈಲಿನಲ್ಲಿ ನಾಳೆ ತೀರ್ಮಾನ ಪ್ರಕಟವಾಗಲಿದ್ದು , ಆತನ ಅಪರಾಧಕ್ಕೆ ಏಳು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ರಾಮ್ ರಹೀಂ ಸಿಂಗ್‌ನನ್ನು ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ರೋಹ್ಟಕ್ ಜಿಲ್ಲಾ ಜೈಲಿಗೆ ಆಗಮಿಸಿ ಶಿಕ್ಷೆಯ ಪ್ರಮಾಣ ಘೋಷಿಸಲಿದ್ದಾರೆ.
ಪಂಚಕುಲಾದಲ್ಲಿ ಅಪರಾಧಿ ಎಂದು ಘೋಷಿತನಾಗಿದ್ದ ರಾಮ್ ರಹೀಂನನ್ನು ಶುಕ್ರವಾರವೇ ರೋಹ್ಟಕ್ ಜೈಲಿಗೆ ತರಲಾಗಿತ್ತು. ಆತನನ್ನು ಮತ್ತೆ ಪಂಚಕುಲಾ ನ್ಯಾಯಾಲಯಕ್ಕೆ ಕರೆ ತಂದರೆ ಇನ್ನಷ್ಟು ಹಿಂಸೆ ಭುಗಿಲೇಳಬಹುದು ಎಂಬ ಕಾರಣಕ್ಕೆ ನ್ಯಾಯಾಧೀಶರೇ ಜಿಲ್ಲಾ ಜೈಲಿಗೆ ಹೋಗುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದೆ.
ಮೊದಲು ನ್ಯಾಯಾಧೀಶರು ಪಂಚಕುಲಾದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಇದೀಗ ನ್ಯಾಯಾಧೀಶರನ್ನು ಹೆಲಿಕಾಪ್ಟರ್ ಮೂಲಕ ರೋಹ್ಟಕ್‌ಗೆ ಕರೆದೊಯ್ಯಲು ಮತ್ತು ಎಲ್ಲ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.