ಖಾಕಿಯ ಅಮಾನುಷ ಕೃತ್ಯ :ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ದೌರ್ಜನ್ಯ

By Web DeskFirst Published Sep 27, 2018, 3:37 PM IST
Highlights

ಮಹಿಳೆಯನ್ನು ಮೆರವಣಿಗೆ ಮಾಡುವಾಗ ಮಹಿಳೆಯು ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ತಿ ವಿವಾದಕ್ಕೆ ಸಬಂಧಿಸಿದಂತೆ ಮಹಿಳೆಯ ಮಾವನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದರು. 

ಅಮೃತ್ ಸರ್ [ಸೆ.27]:  ದೇಶದಲ್ಲೇ ತಲ್ಲಣಗೊಳಿಸಿವ ದೌರ್ಜನ್ಯವನ್ನು ಪಂಜಾಬ್ ಪೊಲೀಸರು ಎಸಗಿದ್ದಾರೆ. ಪತಿಯನ್ನು ಬಂಧನಪಡಿಸಲು ಅಡ್ಡಿಪಡಿಸಿದ ಮಧ್ಯವಯಸ್ಕ ಮಹಿಳೆಯೊಬ್ಬರನ್ನು ಬಲವಂತವಾಗಿ ಜೀಪ್ ಮೇಲೆ ಕಟ್ಟಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಪಂಜಾಬಿನ ಅಮೃತ್ ಸರ್ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯನ್ನು ಮೆರವಣಿಗೆ ಮಾಡುವಾಗ ಮಹಿಳೆಯು ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ತಿ ವಿವಾದಕ್ಕೆ ಸಬಂಧಿಸಿದಂತೆ ಮಹಿಳೆಯ ಮಾವನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲಿ ಮಾವ ಇರಲಿಲ್ಲ. ಆಕೆಯ ಪತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುವಾಗ ಮಹಿಳೆಯು ಅಡ್ಡಿಪಡಿಸಿದ್ದಳು. 

ಇದಕ್ಕೆ ಸಿಟ್ಟಾದ ಪೊಲೀಸರು ದರದರನೆ ಎಳೆದು ಜೀಪ್ ಮೇಲೆ ಕಟ್ಟಿ ದೌರ್ಜನ್ಯವೆಸಗಿದ್ದಾಳೆ. ಸ್ಥಳೀಯರು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದು ಪೊಲೀಸರ ಅಮಾನುಷ ಕೃತ್ಯ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ದೇಶಾದ್ಯಂತ ಹಬ್ಬಿದೆ. ಆದರೆ ಇಲ್ಲಿಯವರೆಗೂ ಪೊಲೀಸರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಘಟನೆಯನ್ನು ವಿರೋಧ ಪಕ್ಷ ಶಿರೋಮಣಿ ಅಕಾಲಿದಳ ಖಂಡಿಸಿದ್ದು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

click me!