ಒಂದೇ ದಿನ 3 ಪುಸ್ತಕ, ಸಾವಣ್ಣ ಪ್ರಕಾಶನ ಹೊಸ ಸಾಹಸ

By Web DeskFirst Published Sep 27, 2018, 3:25 PM IST
Highlights

ಆಧುನಿಕ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ಸಾವಣ್ಣ ಪ್ರಕಾಶನದಿಂದ ಮತ್ತೆ ಮೂರು ಪುಸ್ತಕಗಳು ಲೋಕಾರ್ಪಣೆಯಾಗಲಿವೆ. ಹಾಗಾದರೆ ಈ ಬಾರಿ ಒಂದಲ್ಲ ಮೂರು ಪುಸ್ತಕಗಳು ಕನ್ನಡಿಗರ ಕೈಗೆ ಲಭ್ಯವಾಗುತ್ತಿದೆ.

ಬೆಂಗಳೂರು(ಸೆ.27) ಸಾವಣ್ಣ ಪುಸ್ತಕ ಪ್ರಕಾಶನದಿಂದ ಮೂರು ಪುಸ್ತಕಗಳು ಏಕಕಾಲದಲ್ಲಿ ಲೋಕಾಪರ್ಣೆಯಾಗಲಿವೆ. ಭಾರತಿ ಬಿವಿ ವಿರಚಿತ 'ಜಸ್ಟ್‌ ಮಾತ್‌ ಮಾತಲ್ಲಿ' ರಂಗರಾಜ ಚಕ್ರವರ್ತಿ ಬರೆದಿರುವ 'ಜಿಲೇಬಿ'  ಮೇಘನಾ ಸುಧೀಂದ್ರ ಅವರ 'ಜಯನಗರದ ಹುಡುಗಿ' ಪುಸ್ತಕಗಳು ಲೋಕಾರ್ಪಣೆಯಾಗಲಿವೆ.

ಪದ್ಮಶ್ರೀ ಪುರಸ್ಕೃತ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.  ಪ್ರಣಯರಾಜ ಶ್ರೀನಾಥ್ ಮತ್ತು ಸುವರ್ಣ ನ್ಯೂಸ್.ಕಾಂ ಕನ್ನಡ ಡಿಜಿಟಲ್ ವಿಭಾಗದ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್ ಮುಖ್ಯ ಅತಿಥಿಗಳಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಜಯನಗರ 7 ನೇ ಬ್ಲಾಕ್ ನ ನ್ಯಾಷನಲ್ ಕಾಲೇಜು ಆವರಣದ ಎಚ್.ಎನ್.ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ 30 ಭಾನುವಾರ ಬೆಳಗ್ಗೆ 10.30ಕ್ಕೆ ಪುಸ್ತಕಗಳು ಲೋಕಾರ್ಪಣೆಯಾಗಲಿದ್ದು ಸಾಹಿತ್ಯ ಆಸಕ್ತರಿಗೆ ಒಂದು  ಸುವರ್ಣ ಅವಕಾಶ ಇಲ್ಲಿದೆ ಮಿಸ್ ಮಾಡಿಕೊಳ್ಳಬೇಡಿ. ಕಲಾಕ್ಷೇತ್ರಕ್ಕೆ ಮಾರ್ಗಸೂಚಿ ಇಲ್ಲಿದೆ.

 

click me!