ಮುಂದಿನ ಸಿಜೆಐ ನ್ಯಾ.ದೀಪಕ್ ಮಿಶ್ರಾ ಮೇಲೆ ಭ್ರಷ್ಟಾಚಾರ ಆರೋಪ

By Suvarna Web DeskFirst Published Aug 9, 2017, 4:08 PM IST
Highlights

45ನೇ ಸಿಜೆಐ ಆಗಿ ನ್ಯಾ. ಮಿಶ್ರಾನೇಮಕಾತಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ.

ನವದೆಹಲಿ(ಆ.09): ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (63) ನೇಮಕಗೊಂಡಿದ್ದಾರೆ. ಈ ಸಂಬಂಧ ಕಾನೂನು ಸಚಿವಾಲಯ ಅಧಿಕೃತ ಸುತ್ತೋಲೆ ಮಂಗಳವಾರ ಜಾರಿಗೊಳಿಸಿದೆ. ಆ.27ರಂದು ಹಾಲಿ ಸಿಜೆಐ ಜೆ.ಎಸ್. ಖೇಹರ್ ನಿವೃತ್ತರಾದ ಬಳಿಕ, ನ್ಯಾ. ಮಿಶ್ರಾ ಅಧಿಕಾರ ವಹಿಸಲಿದ್ದಾರೆ. 45ನೇ ಸಿಜೆಐ ಆಗಿ ನ್ಯಾ. ಮಿಶ್ರಾ ನೇಮಕಾತಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಈ ನಡುವೆ ನ್ಯಾ. ಮಿಶ್ರಾರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿರುವುದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪಂಜಾಬ್ ಸಂಸದ ಹರೀಂದರ್ ಸಿಂಗ್ ಖಾಲ್ಸ ಹೇಳಿದ್ದಾರೆ. ನ್ಯಾ. ಮಿಶ್ರಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿರುವುದರಿಂದ, ಅವರ ನೇಮಕಾತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.

click me!