ಕಲ್ಲಡ್ಕ ಭಟ್ಟರ ಹಿಂದೂ ಧರ್ಮ ಬಗ್ಗೆ ಧಿಕ್ಕಾರವಿದೆ: ದಿನೇಶ್ ಅಮೀನ್ ಮಟ್ಟು

By Suvarana Web DeskFirst Published Aug 9, 2017, 2:35 PM IST
Highlights

ಹಿಂದೂ ಧರ್ಮದ ಬಗ್ಗೆ ಎಲ್ಲರಿಗೂ ಗೌರವವಿದೆ, ಆದರೆ ನಾವು ಪಾಲಿಸಬೇಕಾದ್ದು ಯಾವ ಹಿಂದೂ ಧರ್ಮ ಅನ್ನೋದು ಪ್ರಶ್ನೆ? ಸ್ವಾಮಿ ವಿವೇಕಾನಂದರು ಹೇಳಿದ ಹಿಂದೂ ಧರ್ಮವಾದರೆ ನನಗೆ ಗೌರವ ಇದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟ ಹೇಳುವ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಮಾದ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಉಡುಪಿ: ಹಿಂದೂ ಧರ್ಮದ ಬಗ್ಗೆ ಎಲ್ಲರಿಗೂ ಗೌರವವಿದೆ, ಆದರೆ ನಾವು ಪಾಲಿಸಬೇಕಾದ್ದು ಯಾವ ಹಿಂದೂ ಧರ್ಮ ಅನ್ನೋದು ಪ್ರಶ್ನೆ? ಸ್ವಾಮಿ ವಿವೇಕಾನಂದರು ಹೇಳಿದ ಹಿಂದೂ ಧರ್ಮವಾದರೆ ನನಗೆ ಗೌರವ ಇದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟ ಹೇಳುವ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಮಾದ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷಾಚರಣೆಯ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ನಾನು ಕಾಂಗ್ರೆಸ್ ಪಕ್ಷ ಸೇರಿಲ್ಲ. ಪಕ್ಷಕ್ಕೆ ಸೇರುತ್ತೇನೋ ಅಂತ ಗೊತ್ತಿಲ್ಲ. ಆದರೆ ಕಾಂಗ್ರೆಸ್’ನ ಸಿದ್ಧಾಂತದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಅಮೀನ್ ಮಟ್ಟು ಹೇಳಿದ್ದಾರೆ.

ಇದೇ ವೇಳೆ ಪೇಜಾವರ ಸ್ವಾಮೀಜಿ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ದಿನೇಶ್ ಅಮೀನ್ ಮಟ್ಟು, ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟ ಮಾಡಿದಾಗ ನಮಗೆ ರೋಮಾಂಚನ ಆಯ್ತು. ಮರುದಿನ ಉಮಾಭಾರತಿ ಮಠಕ್ಕೆ ಬಂದು ಆಶೀರ್ವಾದ ಪಡೆದರು. ರಾಮ ಮಂದಿರದ ನಿರ್ಮಾಣ ಬಗ್ಗೆಯೂ ಅಲ್ಲೇ ನಿರ್ಧಾರ ಆಯ್ತು. ಹಾಗಾದರೆ ರೋಮಾಂಚನಗೊಂಡವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಘಪರಿವಾದ ಕೊಡುಗೆ ಏನು ಎಂಬುವುದನ್ನು ಪ್ರಶ್ನಿಸಿದ ಮಟ್ಟು, ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ಸಾವರ್ಕರ್ ಮುಂತಾದವರು ಎಲ್ಲಿದ್ದರು? ಎಂದು ಸಂಘಪರಿವಾರವನ್ನು ಪ್ರಶ್ನಿಸಿದ್ದಾರೆ.

ಸಂಘಪರಿವಾರದ ಒಬ್ಬ ನರಪಿಳ್ಳೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುವುದು ತಿಹಾಸದಲ್ಲಿ ಕಂಡುಬರುವುದಿಲ್ಲವೆಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮೋದಿ ದೊಡ್ಡ ಜಾದೂಗಾರ:

ಪ್ರಧಾನಿ ಮೋದಿ ವಿರುದ್ಧ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಗುಡುಗಿದ್ದಾರೆ. ಪ್ರಧಾನಿ ಮೋದಿ ದೊಡ್ಡ ಜಾದೂಗಾರ. ಮೋಸ ಹೋಗುವುದು ನಮಗೆ ಗೊತ್ತಿರುತ್ತದೆ. ಆದರೆ ಗೊತ್ತಿದ್ದೂ ಏನೂ ಮಾಡಲಾಗುತ್ತಿಲ್ಲ ಎಂದರು. ಅಷ್ಟೇ ಅಲ್ಲ ಸಂವಿಧಾನಕ್ಕೆ ಗಂಡಾಂತರ ಇದೆ. ಸಂವಿಧಾನ ಉಳಿಸುವ ಕೆಲಸ ಆಗಬೇಕಿದೆ ಎಂದರು.

click me!