ಮಂಡ್ಯ ಟು ಮುಂಬೈ ಹೀರೋನ ತಾಯಿಗೆ 13 ಲಕ್ಷ ರೂ ಪಂಗನಾಮ

Published : Aug 09, 2017, 03:43 PM ISTUpdated : Apr 11, 2018, 01:04 PM IST
ಮಂಡ್ಯ ಟು ಮುಂಬೈ ಹೀರೋನ ತಾಯಿಗೆ 13 ಲಕ್ಷ ರೂ ಪಂಗನಾಮ

ಸಾರಾಂಶ

* ಮಂಡ್ಯ to ಮುಂಬೈ ಚಿತ್ರದ ನಾಯಕನ ತಾಯಿಗೆ ವಂಚನೆ * ಸಾಲ ತೀರಿಸಲು ಕೊಟ್ಟಿದ್ದ ಹಣವೆ ಗುಳುಂ * 13 ಲಕ್ಷ ವಂಚಿಸಿ ಪರಾರಿಯಾದ ದಿನೇಶ * ಮಂಜುಳ ಪುತ್ರ ಶೇಖರ್ ನಟಿಸಿದ್ದ ಚಿತ್ರ * ಮನೆ ಮಾರಿ ಸಾಲ ತೀರಿಸಲು ಹಣ ನೀಡಿದ್ರು * ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ಮಂಜುಳಾ ದೂರು

ಮೈಸೂರು(ಆ. 09): "ಮಂಡ್ಯ ಟು ಮುಂಬೈ" ಸಿನಿಮಾದ ನಾಯಕನಟರೊಬ್ಬರ ತಾಯಿ 13 ಲಕ್ಷ ರೂ ವಂಚನೆಗೊಳಗಾದ ಘಟನೆ ನಡೆದಿದೆ. ಚಿತ್ರ ನಿರ್ಮಾಣದ ಸಾಲ ತೀರಿಸಲು ಕೊಟ್ಟ ಹಣ್ಣವನ್ನ ವ್ಯಕ್ತಿಯೊಬ್ಬ ನುಂಗಿ ನೀರು ಕುಡಿದು ಪಂಗನಾಮ ಹಾಕಿದ್ದಾನೆ.

ಮಂಡ್ಯ ಟೂ ಮುಂಬೈ ಚಿತ್ರ ನಿರ್ಮಾಣದ ವೇಳೆ ಸಾಲವಾಗಿದೆ. ಈ ವೇಳೆ ಪಡೆದ 13 ಲಕ್ಷ ರೂ ಸಾಲವನ್ನು ಮರು ಪಾವತಿಸಲು ಚಿತ್ರದ ನಾಯಕ ಶೇಖರ್ ಎಂಬುವರ ತಾಯಿ ಮಂಜುಳಾ ಮನೆ ಮಾರಾಟ ಮಾಡಿರುತ್ತಾರೆ. ಸಾಲ ತೀರಿಸಲೆಂದು ಪರಿಚಯಸ್ಥರಾಗಿದ್ದ ದಿನೇಶ್ ಎಂಬುವವರಿಗೆ ಹಣ ಕೊಡುತ್ತಾರೆ. ಆದರೆ, ದಿನೇಶ್ ಸಾಲವನ್ನೂ ತೀರಿಸಲ್ಲ, ಹಣವನ್ನೂ ಮರಳಿಸಲ್ಲ. ಹೀಗಾಗಿ ಮಂಜುಳಾ ಈಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಹೊಸ 600 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಆರಂಭ: ಗೃಹ ಸಚಿವ ಪರಮೇಶ್ವರ್‌
ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ