ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಪ್ರಥಮ ಸ್ಥಾನ

First Published Apr 30, 2018, 11:09 AM IST
Highlights

2017-18 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಪಡೆದಿದೆ. 

ಬೆಂಗಳೂರು (ಏ.30) : 2017-18 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಳೆದ ಬಾರಿಗಿಂತ ಈ ವರ್ಷ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ಒಟ್ಟು  ಶೇ.59.56 ರಷ್ಟು  ಫಲಿತಾಂಶ ಬಂದಿದೆ. 

ಶೖಕ್ಷಣಿಕ ಜಿಲ್ಲಾವಾರು ಫಲಿತಾಂಶ ನೋಡಿದರೆ, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಕೊಡುಗು ಮೂರನೇ ಸ್ಥಾನ ಪಡೆದಿದೆ. ಈ ಬಾರಿ ಚಿಕ್ಕೋಡಿ ಕೊನೆಯ ಸ್ಥಾನ ಪಡೆದಿದೆ. 

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.  ಶೇ.52.30 ಬಾಲಕರು ಉತ್ತೀರ್ಣರಾಗಿದ್ದರೆ, ಶೇ. 67.11 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶಗಳನ್ನು ಗಮನಿಸದರೆ, ಕಲಾ ವಿಭಾಗದಲ್ಲಿ ಶೇ. 45.13, ವಿಜ್ಞಾನ ವಿಭಾಗದಲ್ಲಿ ಶೇ.67.48, ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 63ರಷ್ಟು ಫಲಿತಾಂಶ ಬಂದಿದೆ. 

ಕಲಾ ವಿಭಾಗ ವಿಜ್ಞಾನ ವಿಭಾಗ ವಾಣಿಜ್ಯ ವಿಭಾಗ
45.13 67.48 63.64

ಕಲಾ ವಿಭಾಗದಲ್ಲಿ ಒಂದೇ ಕಾಲೇಜಿಗೆ ಮೂರು ಸ್ಥಾನ ಸಿಕ್ಕಿದೆ. ಬಳ್ಳಾರಿಯ ಕೊಟ್ಟೂರಿನ ಇಂದೂ ಪಿಯು ಕಾಲೇಜು ವಿದ್ಯಾರ್ಥಿ ಸ್ವಾತಿ ಎಸ್, ಕಲಾ ವಿಭಾಗದಲ್ಲಿ  595 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ರಾಜೇಶ್ 593 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಕಾವ್ಯಾಂಜಲಿ 588 ಅಂಕ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.  

ಸ್ವಾತಿ ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು,
ಕೊಟ್ಟೂರು ಕೂಡ್ಲಿಗಿ, ಬಳ್ಳಾರಿ
595
   
ರಮೇಶ್ ಎಸ್ ವಿ 593
   
ಗೊರವರ ಕಾವ್ಯಂಜಲಿ 588

 ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ವಿವಿ ಸರ್ದಾರ್ ಪಟೇಲ್ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಕೃತಿ ಮುಕ್ತಗಿ  597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.  ಹಾಸನದ ಮೋಹನ್.ಎಸ್.ಎಲ್ ಮತ್ತು ದಕ್ಷಿಣ ಕನ್ನಡ ಅಂಕಿತ್ ಪಿ.ಗೆ 595 ಅಂಕಗಳು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 

ಕೃತಿ ಮುತ್ತಗಿ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು, ಬೆಂಗಳೂರು 597
ಮೋಹನ್  ಮಾಸ್ಟರ್ಸ್ ಪಿಯು ಕಾಲೇಜು, ಹಾಸನ 595
ಅಂಕಿತಾ ಗೋವಿಂದದಾಸ ಪಿಯು ಕಾಲೇಜು ಮಂಗಳೂರು 595

ವಾಣಿಜ್ಯ ವಿಭಾಗದಲ್ಲಿ ವರ್ಷಿಣಿ ಎಂ. ಭಟ್ 595 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ವರ್ಷಿಣಿ ಎಂ ಭಟ್ ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೆಶ್ವರಂ, ಬೆಂಗಳೂರು 595
ಅಮೃತಾ ಎಸ್ ಆರ್ ಎಎಸ್‌ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು 595
ಪೂರ್ವಿತಾ ಆರ್ ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು 594

 

ಜಿಲ್ಲೆ ಫಲಿತಾಂಶ [%]
ದಕ್ಷಿಣ ಕನ್ನಡ 91.49
ಉಡುಪಿ 90.67
ಕೊಡಗು 83.94
ಉತ್ತರ ಕನ್ನಡ 76.75
ಶಿವಮೊಗ್ಗ 75.77
ಚಾಮರಾಜ ನಗರ 75.3
ಚಿಕ್ಕಮಗಳೂರು 74.39
ಹಾಸನ 73.87
ಬೆಂಗಳೂರು ದಕ್ಷಿಣ 73.67
ಬಳ್ಳಾರಿ 73.04
ಬೆಂಗಳೂರು ಉತ್ತರ 71.68
ಬಾಗಲಕೋಟೆ 70.49
ಬೆಂಗಳೂರು ಗ್ರಾಮಾಂತರ 68.82
ಚಿಕ್ಕಬಳ್ಳಾಪುರ 68.61
ಹಾವೇರಿ 67.3
ಗದಗ 66.83
ಮೈಸೂರು 66.77
ಕೋಲಾರ 66.51
ಮಂಡ್ಯ 65.36
ರಾಮನಗರ 64.64
ತುಮಕೂರು 64.29
ಧಾರವಾಡ 63.67
ದಾವಣಗೆರೆ 63.29
ವಿಜಯಪುರ 63.1
ಕೊಪ್ಪಳ 63.04
ರಾಯಚೂರು 56.22
ಚಿತ್ರದುರ್ಗ 56.06
ಯಾದಗಿರಿ 54.4
ಬೆಳಗಾವಿ 54.28
ಕಲಬುರಗಿ 53.61
ಬೀದರ್ 52.63
ಚಿಕ್ಕೋಡಿ 52.2

ಜಿಲ್ಲಾವಾರು ಫಲಿತಾಂಶ:

ಮಾಧ್ಯಮವಾರು ಫಲಿತಾಂಶ:

   ಹಾಜರಾದವರು  ತೇರ್ಗಡೆಯಾದವರು ಶೇ. ವಾರು ಫಲಿತಾಂಶ
ಕನ್ನಡ 305248 157081 51.46
 
ಇಂಗ್ಲೀಷ್ 380465 251340 66.06
click me!