ಏರ್‌ಪೋರ್ಟ್‌ ಮಾದರಿಯಲ್ಲಿ ಇನ್ನು ರೈಲ್ವೆ ನಿಲ್ದಾಣಗಳಲ್ಲೂ ಆ್ಯಪ್‌ ಆಧರಿತ ಕ್ಯಾಬ್‌

First Published Apr 30, 2018, 10:30 AM IST
Highlights

ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್‌ ಜಾಗವನ್ನು ಮೀಸಲಿಡಲು ರೈಲ್ವೆ ಇಲಾಖೆ ಯೋಜಿಸಿದೆ. 

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್‌ ಜಾಗವನ್ನು ಮೀಸಲಿಡಲು ರೈಲ್ವೆ ಇಲಾಖೆ ಯೋಜಿಸಿದೆ.

ಇದರಿಂದಾಗಿ ಪ್ರಯಾಣಿಕರು ಆಗಮಿಸಿದ ಕೂಡಲೇ ವಿಳಂಬ ಇಲ್ಲದೇ ಮುಂದಿನ ಪ್ರಯಾಣ ಕೈಗೊಳ್ಳಲು ಅನುಕೂಲವಾಗಲಿದೆ. ಬೆಂಗಳೂರಿನ 12 ರೈಲ್ವೆ ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಓಲಾ ಮತ್ತು ಊಬರ್‌ ಕ್ಯಾಬ್‌ಗಳಿಗೆ ಪಾರ್ಕಿಂಗ್‌ ಜಾಗ ನೀಡಿರುವಂತೆ ಇತರ ನಗರಗಳ ನಿಲ್ದಾಣಗಳಲ್ಲೂ ಇದೇ ಮಾದರಿಯ ವ್ಯವಸ್ಥೆ ಕಲ್ಪಿಸಲು ನೀಲಿ ನಕ್ಷೆ ಸಿದ್ಧಪಡಿಸುವಂತೆ ವಿವಿಧ ವಲಯಗಳಿಗೆ ರೈಲ್ವೆ ಮಂಡಳಿ ನಿರ್ದೇಶನ ನೀಡಿದೆ.

ರೈಲ್ವೆ ನಿಲ್ದಾಣಗಳಲ್ಲಿ ಕ್ಯಾಬ್‌ ಸೇವೆ ನೀಡುವ ಸಂಬಂಧ ಓಲಾ ಕಂಪನಿ ಈಗಾಗಲೇ ವಿವಿಧ ರೈಲ್ವೆ ವಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

click me!