ಕೊಪ್ಪಳ: ದೂರು ನೀಡಲು ಬಂದ ಮಹಿಳೆಯನ್ನೇ ಪಟಾಯಿಸಿ ಅನೈತಿಕ ಸಂಬಂಧ ಇಟ್ಟುಕೊಂಡ ಪಿಎಸ್'ಐ

Published : Sep 29, 2016, 05:25 AM ISTUpdated : Apr 11, 2018, 12:58 PM IST
ಕೊಪ್ಪಳ: ದೂರು ನೀಡಲು ಬಂದ ಮಹಿಳೆಯನ್ನೇ ಪಟಾಯಿಸಿ ಅನೈತಿಕ ಸಂಬಂಧ ಇಟ್ಟುಕೊಂಡ ಪಿಎಸ್'ಐ

ಸಾರಾಂಶ

ಕೊಪ್ಪಳ(ಸೆ. 29): ದೂರು ನೀಡಲು ಬಂದ ಮಹಿಳೆಯನ್ನೇ ಪಿಎಸ್​ಐನೋರ್ವ ಪಟಾಯಿಸಿ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪಿಎಸ್'​ಐ ಸಂಗಮೇಶ ಶಿವಯೋಗಿ ಈ ಆರೋಪ ಎದುರಿಸುತ್ತಿದ್ದಾರೆ.

ಏನಿದು ಘಟನೆ?
ಎರಡು ವರ್ಷಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪೊಲೀಸ್​ ಠಾಣೆಯಲ್ಲಿ ಸಂಗಮೇಶ ಪಿಎಸ್​ಐ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಈ ವೇಳೆಯಲ್ಲಿ ಅಲ್ಲಿ ಸಹಿರಾಬೇಗಂ ಹಾಗೂ ಮಹಮ್ಮದ್​ ಸಲೀಂ ಎನ್ನುವ ದಂಪತಿ ಇರುತ್ತಾರೆ. ಇವರಿಬ್ಬರ ಮಧ್ಯೆ ಕೌಟುಂಬಿಕ ಸಮಸ್ಯೆ ಇರುತ್ತದೆ. ಸಹಿರಾ ಬೇಗಂ ತನ್ನ ಪತಿ ವಿರುದ್ಧ ದೂರು ನೀಡಲು ಠಾಣೆಗೆ ಬರುತ್ತಿರುತ್ತಾಳೆ. ಆಗ ಪಿಎಸ್'ಐ ಸಂಗಮೇಶ್​ ನ್ಯಾಯ ದೊರಕಿಸಿಕೊಡುವುದನ್ನು ಬಿಟ್ಟು, ಆಕೆಯನ್ನೇ ಪುಸಲಾಯಿಸಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಇದಾದ ಬಳಿಕ ಸಹೀರಾಬೇಗಂ ಪಿಎಸ್​'ಐ ಜೊತೆಗೆ ಅಕ್ರಮ ಸಂಬಂಧ ಹೊಂದುತ್ತಾಳೆ.

ಕೌಟುಂಬಿಕ ಜಗಳ ಇದ್ದ ಕಾರಣಕ್ಕೆ ಸಹೀರಾಬೇಗಂ ತನ್ನ ಪತಿ ಮನೆಯನ್ನು ತೊರೆದು ತವರು ಮನೆಯಲ್ಲಿ ಇದ್ದಿರುತ್ತಾಳೆ. ಇತ್ತ, ಪಿಎಸ್'ಐ ಹಾಗೂ ಸಹೀರಾ ಬೇಗಂ ನಡುವಿನ ಅನೈತಿಕ ಸಂಬಂಧದ ವಿಷಯ ಮಾತ್ರ ಆಕೆಯ ಪತಿ ಮಹಮ್ಮದ್ ಸಲೀಂ​​ಗೆ ತಿಳಿದಿರುವುದಿಲ್ಲ. ಆದ್ರೆ ಕೆಲ ದಿನಗಳ ಹಿಂದೆ ಪಿಎಸ್​ಐ ಸಂಗಮೇಶ್ ಮತ್ತು ಸಹೀರಾಬೇಗಂ ಜೊತೆಯಾಗಿ ಇರುವ ಫೋಟೋ ಫೇಸ್'​ಬುಕ್'ನಲ್ಲಿ ಕಂಡಿದೆ. ಇದು ಮಹಮ್ಮದ್​ ಸಲೀಂ​ ಕುಟುಂಬಕ್ಕೆ ಗೊತ್ತಾಗಿದೆ.

ಇತ್ತ, ಪಿಎಸ್'​ಐ ಸಂಗಮೇಶ್​ ಶಿವಯೋಗಿಗೆ ಈಗಾಗಲೇ ಮದುವೆಯಾಗಿದೆ. ಆಕೆಗೆ ಇನ್ನೂ ವಿಚ್ಛೇದನ ನೀಡಿಲ್ಲ. ಜೊತೆಗೆ ಸಹೀರಾ ಬೇಗಂ ಸಹ ಗಂಡನ ನಕಲಿ ಸಹಿಯೊಂದಿಗೆ ವಿವಾಹ ವಿಚ್ಛೇದನ ಪತ್ರ ಮಾಡಿಸಿಕೊಂಡಿದ್ದಾಳೆ ಎನ್ನುವುದು ಸಹೀರಾಬೇಗಂರ ಪತಿ ಮನೆಯವರ ಆರೋಪ. ಇನ್ನು, ತನ್ನ ಪತ್ನಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವ ಪಿಎಸ್​'ಐ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬಸ್ಥರು ಎಸ್ಪಿಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ
ಪ್ರೀತಿಸಿದ ಹುಡುಗಿ ಬೆನ್ನಲ್ಲೇ ಪೋಷಕರು ತೋರಿಸಿದಾಕೆ ಜೊತೆಗೂ ಮದುವೆ, ಮೃತ ಕತೆ ಕಟ್ಟಿ ತಗ್ಲಾಕೊಂಡ